ಪಡಿತರದಾರ’ರಿಗೆ ಗುಡ್ ನ್ಯೂಸ್

 ಈಗಾಗಲೇ ದೇಶದ ಕೆಲ ರಾಜ್ಯಗಳಲ್ಲಿ ಮಾತ್ರವೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಯಲ್ಲಿದೆ. ಇಂತಹ ಯೋಜನೆಯನ್ನು ಇದೀಗ 31 ರಾಜ್ಯಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಪಡಿತರದಾರರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಗಳಿಗೆ ತೆರಳಿದ್ರೂ, ಪಡಿತರ ಧಾನ್ಯಗಳನ್ನು ಇರುವ ಸ್ಥಳದಲ್ಲಿಯೇ ಪಡೆಯಬಹುದಾಗಿದೆ.

ಈ ಬಗ್ಗೆ ಇಂದು ಕೇಂದ್ರ ಬಜೆಟ್-2021 ಮಂಡಿಸುತ್ತಾ ತಿಳಿಸಿದಂತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕುಟುಂಬದ ಪ್ರತಿ ಸದಸ್ಯರ ಆಧಾರದ ಮೇಲೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಯಾವುದೇ ಪಡಿತರದಾರರಿಗೂ ತೊಂದರೆಯಾಗದಂತೆ ಈಗಾಗಲೇ ಕೆಲ ರಾಜ್ಯಗಳಲ್ಲಿ ಮಾತ್ರವೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಗೆ ತರಲಾಗಿತ್ತು. ಇಂತಹ ಯೋಜನೆಯನ್ನು ದೇಶದ 31 ರಾಜ್ಯಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ ಎಂಬುದಾಗಿ ಘೋಷಿಸಿದರು. ಈ ಮೂಲಕ ಪಡಿತರ ಚೀಟಿದಾರರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಿದ್ರೂ, ಪಡಿತರ ಧಾನ್ಯವನ್ನು ಪಡೆಯುವಂತ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

 

Leave a Reply

Your email address will not be published.