ತಾಲ್ಲೂಕು ಚಳ್ಳಕೆರೆ ರಸ್ತೆಯಲ್ಲಿರುವ ಮದಕರಿಪುರ ಗ್ರಾಮದ ಗುಡ್ಡದ ಇಳಿಜಾರಿನಲ್ಲಿ ರೈಲ್ವೆ ಹಳಿ ಬಳಿ ನಡೆಯುತ್ತಿರುವ ಚಿತ್ರದುರ್ಗ-ದಾವಣಗೆರೆ 6 ಪಥದ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯ ಮೇಲ್ಸುತುವೆ ನಿರ್ಮಾಣದ ಕಾಮಗಾರಿಯನ್ನು ಮಾಡುವುದರಿಂದ ಚಿತ್ರದುರ್ಗದಿಂದ ಚಳ್ಳಕೆರೆಗೆ ಹೋಗುವ ರಸ್ತೆಯನ್ನು ಜ.4 ರಿಂದ 14 ರವರೆಗೆ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ಚಿತ್ರದುರ್ಗದಿಂದ ಚಳ್ಳಕೆರೆಗೆ ಹೋಗುವ ವಾಹನಗಳು ಚಿತ್ರದುರ್ಗದ ಚಳ್ಳಕೆರೆ ಗೇಟ್‍ನಿಂದ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಹೋಗಿ ಕುಂಚಿಗನಾಳ್ ಗೇಟ್ ಬಳಿ ಇರುವ ದೊಡ್ಡಸಿದ್ದವ್ವನಹಳ್ಳಿಗೆ ಹೋಗುವ ರಸ್ತೆಯ ಮೂಲಕ ಹೋಗಿ ಎಡಕ್ಕೆ ತಿರುಗಿ ಹೊಸ ಬೈಪಾಸ್ ರಸ್ತೆಯ ಅಂಡರ್ ಬ್ರಿಡ್ಜ್ ಮುಖಾಂತರ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ಚಳ್ಳಕೆರೆ ರಸ್ತೆಗೆ ತಲುಪಿ ಚಳ್ಳಕೆರೆಗೆ ಹೋಗಬೇಕಿದೆ.