ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧಿಕಾರಿಗಳಿಗೆ ಸೂಚನೆ

ನಿತ್ಯವಾಣಿ,ಚಿತ್ರದುರ್ಗ, (ಜೂ.12) : ರಸ್ತೆಗೆ ಅಡ್ಡಲಾದ ಸರ್ಕಾರದ ಜಾಗವನ್ನು ಒತ್ತುವರಿ ಮಾಡಿರುವುದನ್ನು ಕೊಡಲೇ ತೆರವು ಮಾಡಿ ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗ ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕರು, ರಸ್ತೆಯ ಅಕ್ಕ-ಪಕ್ಕದಲ್ಲಿ ಜಾಗವನ್ನು ಬಿಡದೇ ಪೂರ್ಣ ಪ್ರಮಾಣದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಿ ಜಾಗವನ್ನು ಒತ್ತುವರಿ ಮಾಡಿದ್ದರೆ ಅದನ್ನು ಸಹಾ ತೆರವು ಮಾಡಿ ರಸ್ತೆಯನ್ನು ನಿರ್ಮಾಣ ಮಾಡುವಂತೆ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ತಿಳಿಸಿದರು.
ಇಲ್ಲಿ ಡಬ್ಬಲ್ ರಸ್ತೆಯನ್ನು ನಿರ್ಮಾಣ ಮಾಡಿ ಮಧ್ಯದಲ್ಲಿ ಲೈಂಟಿಂಗ್ ಹಾಕಲಾಗುವುದು. ಇದರಿಂದ ರಸ್ತೆ ಅಂದವಾಗಿ ಕಾಣುತ್ತದೆ, ಅಲ್ಲದೆ ಇದು ಒಮ್ಮುಖ ರಸ್ತೆಯಾಗಿದ್ದು ಹೊಳಲ್ಕೆರೆ ರಸ್ತೆಯಿಂದ ಬರುವವರು ಒಂದು ಕಡೆ, ಸಂತೇಪೇಟೆ ಕಡೆಯಿಂದ ಬರುವವರು ಒಂದು ಕಡೆಯಲ್ಲಿ ಸಂಚಾರ ಮಾಡುತ್ತಾರೆ ಇದರಿಂದ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದ ಶಾಸಕರು, ರಸ್ತೆಯ ಮಧ್ಯದಲ್ಲಿ ಪಶು ಆಸ್ಪತ್ರೆಯ ಮುಂಭಾಗದ ಕಾಂಪೊಂಡಿಗೆ ಹೊಂದಿಕೊಂಡಂತೆ ಇರುವ ಮನೆಯನ್ನು ತೆರವು ಮಾಡಿ ಎಂದು ಅದರ ಮಾಲಿಕರಿಗೆ ಸೂಚಿಸಿ ಇದರ ಬದಲಿಗೆ ಬೇರೆ ಕಡೆಯಲ್ಲಿ ಜಾಗ ನೀಡುವುದಾಗಿ ತಿಳಿಸಿ ಇದನ್ನು ತೆರವು ಮಾಡಲು ಸಹಾಯ ಮಾಡುವಂತೆ ತಿಪ್ಪಾರೆಡ್ಡಿ ನಗರಸಭಾ ಸದಸ್ಯರಾದ ಮಲ್ಲಿಕಾರ್ಜನ್ ರವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾಧ ಹರೀಶ್, ಮಲ್ಲಿಕಾರ್ಜನ್, ಮಾಜಿ ಸದಸ್ಯ ರವಿಕುಮಾರ್, ಪೌರಾಯುಕ್ತರಾದ ಹನುಮಂತರಾಜು, ಇಂಜಿನಿಯರ್ ಕಿರಣ್, ವೇದ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಕೃಷ್ಣಪ್ಪ, ಗೋಪಾಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು                          ಸುದ್ದಿಗಾಗಿ, ಜಾಹೀರಾತಿಗಾಗಿ 👉  ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com

 

 

Leave a Reply

Your email address will not be published.