ರುದ್ರಾಕ್ಷಿಯ ಬಗ್ಗೆ ಮಾಹಿತಿ ಇಲ್ಲಿದೆ.ಯಾವ ಯಾವ ರಾಶಿ, ನಕ್ಷತ್ರದವರು.ಏಷ್ಟು ಮುಖದ ರುದ್ರಾಕ್ಷಿ ಧರಿಸಬೇಕು….?
ರುದ್ರಾಕ್ಷಿ ಹಿಮಾಲಯ ತಪ್ಪಲು ಪ್ರದೇಶದಲ್ಲಿ ಮತ್ತು ನೇಪಾಳದಲ್ಲಿ ಬೆಳಯುತ್ತದೆ. ಆಗ್ನೇಯ ಏಷಿಯಾ ದೇಶಗಳಲ್ಲಿಯೂ ಬೆಳೆಯುತ್ತದೆ. ರುದ್ರಾಕ್ಷಿ ಕಾಯಿ ನೋಡಲು ನಸು ನೀಲಿ ಬಣ್ಣದ್ದಾಗಿರುತ್ತದೆ. ಇದು ಸಿಪ್ಪೆಯ ಭಾಗ. ಸಿಪ್ಪೆ ಸುಲಿದರೆ , ಒಳಗಡೆ ಹಸಿರು ಬಣ್ಣದ ರುದ್ರಾಕ್ಷಿ ಸಿಗುತ್ತದೆ. ಅದು ಚೆನ್ನಾಗಿ ಒಣಗಿದ ನಂತರ ನಸು ಶ್ವೇತವರ್ಣ, ತಾಮ್ರದ ನಸು ಕೆಂಪು, ಹಾಗೂ ನಸು ಕಪ್ಪು ಬಣ್ಣದವು ಸಿಗುತ್ತವೆ. ಸೂಜಿಯನ್ನು ಉಪಯೋಗಿಸಿ ಮಡಿಕೆಗಳಿರುವ ರುದ್ರಾಕ್ಷಿಯ ಗೆರೆಗಳನ್ನು ಬಿಡಿಸುತ್ತಾರೆ. ಗೆರೆಗಳ ಆಕಾರವನ್ನು ನೋಡಿ ರುದಾಕ್ಷಿಯ ಮುಖಗಳನ್ನು ಗುರ್ತಿಸುತ್ತಾರೆ. ಅದರಲ್ಲಿ ಒಂದು ಮುಖದಿಂದ ಹಿಡಿದು ೨೧ ಮುಖಗಳವರೆಗೂ ಇರವ ರುದ್ರಾಕ್ಷಿ ಸಿಗುವುದೆಂದು ಹೇಳುತ್ತಾರೆ. ಆದರೆ ೫ ಮುಖದಿಂದ ೧೪ ಮುಖಗಳಿರುವ ರುದ್ರಾಕ್ಷಿಗಳು ಹೆಚ್ಚು ಇರತ್ತವೆ. ಏಕ ಮುಖ ರುದ್ರಾಕ್ಷಿ ಬಹಳ ವಿರಳವಾಗಿ ದೊರೆಯುತ್ತವೆ. ಪಂಚಮುಖಿ ರುದ್ರಾಕ್ಷಿ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತದೆ. ಒಂದೊಂದು ಬಗೆಯ ರುದ್ರಾಕ್ಷಿಗೂ ಅದರದೇ ಮಹತ್ವವಿದೆ. ಒಂದೊಂದು ಮುಖಕ್ಕೂ ಒಬ್ಬೊಬ್ಬ ದೇವತೆಯನ್ನು ಗುರುತಿಸುತ್ತಾರೆ. ಇದಲ್ಲದೆ ರುದ್ರಾಕ್ಷಿಗೆ ಔಷಧೀಯ ಗುಣಗಳಿವೆ. ಅನೇಕ ರೋಗಗಳಿಗೆ ಆಯುರ್ವೇದದಲ್ಲಿ ರುದ್ರಾಕ್ಷಿಯನ್ನು ಉಪಯೋಗಿಸುತ್ತಾರೆ.
(ಈ ರುದ್ರಾಕ್ಷಿಯ ಮಹತ್ವದ ಬಗ್ಗೆ ಉತ್ತರ ಭಾರತದ ಅನೇಕ ಶಿವ ದೇವಾಲಯಗಳ ಗೋಡೆಗಳ ಮೇಲೆ ಈ ರುದ್ರಾಕ್ಷಿಗಳ ಬಗ್ಗೆ ಮಾಹಿತಿ ವಿವರ ಬರೆದಿದ್ದಾರೆ. ಈ ದೇವಾಲಯಗಳ ಗೋಡೆಗಳಲ್ಲಿ ಬರೆದ ಆಧಾರದಿಂದ ರುದ್ರಾಕ್ಷಿ ಮಹಿಮೆ ಬರೆಯಲಾಗಿದೆ)
ಒಂದರಿಂದ ಹದಿನಾಲ್ಕು ಮುಖಗಳ ರುದ್ರಾಕ್ಷಿಗಳ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ತಿಳಿಸಲಾಗಿದೆ.
ಏಕ ಮುಖ ರುದ್ರಾಕ್ಷಿ
ಏಕ ಮುಖ ರುದ್ರಾಕ್ಷಿ ಯನ್ನು ಸಾಕ್ಷಾತ್ ಶಿವನ ಸ್ವರೂಪವೆಂದು ತಿಳಿಯುತ್ತಾರೆ . ಒಂದು ರುದ್ರಾಕ್ಷಿ ಮರದಲ್ಲಿ ಏಕಮುಖ ರುದ್ರಾಕ್ಷಿ ಯು ಒಂದೇ ಒಂದು ಬಿಡುತ್ತದೆ ಎಂದು ಹೇಳುತ್ತಾರೆ. ಇದು ಬಹಳ ಭಾಗ್ಯಶಾಲಿಯೂ, ಶಿವನಿಗೆ ಪ್ರೀತಿ ಪಾತ್ರನೂ ಆದವನಿಗೆ ಮಾತ್ರ ದೊರೆಯುತ್ತದೆ ಎಂಬ ನಂಬುಗೆ ಇದೆ. ಇದಕ್ಕೆ ಬೆಲೆ ಬಹಳ ಜಾಸ್ತಿ. ಅಂದರೆ ರೂ.ಸಾವಿರದಿಂದ ಇದರ ಬೆಲೆ ಆರಂಭವಾಗುತ್ತದೆ. ಈ ಬಗೆಯ ರುದ್ರಾಕ್ಷಿ ಧರಿಸಿದರೆ ಇಹದ ಎಲ್ಲಾ ಸೌಭಾಗ್ಯಗಳೂ ಈಶ್ವರನ ಕೃಪೆ ಸದಾ ದೊರೆಯುತ್ತದೆ ಎಂಬ ಧೃಢ ನಂಬುಗೆ ಇದೆ ಏಕ (1) ಮುಖದ ರುದ್ರಾಕ್ಷಿ ಯನ್ನು.ಉತ್ತರಾಷಾಡ.ನಕ್ಷತ್ರ.2,3,4, ಪಾದ.ಹಾಗೂ.ಶ್ರವಣ.ಧನಿಷ್ಟ್.1,2.ಪಾ ದ.ಮಕರ ರಾಶಿಯಲ್ಲಿ ಹುಟ್ಟಿದವರು ಧರಿಸಬೇಕು.
ದ್ವಿಮುಖ ರುದ್ರಾಕ್ಷಿ
ಇದು ಶಿವ ಪಾರ್ವತಿ ಸ್ವರೂಪ ಎಂದು ಹೇಳುತ್ತಾರೆ ಈ ರುದ್ರಾಕ್ಷಿಯೂ ಸಿಗುವುದು ತುಂಬಾ ವಿರಳ. ಇದನ್ನು ಧರಿಸುವುದರಿಂದ ಗೋಹತ್ಯೆಯೇ ಮೊದಲಾದ ಇತರೆ ದೋಷಗಳೂ ನಾಶವಾಗುತ್ತದೆ. ಈ ರುದ್ರಾಕ್ಷಿಯು ಉತ್ತಮ ಗೃಹಸ್ತ ಜೀವನ ಸುಖ ಶಾಂತಿ, ಸೌಬಾಗ್ಯವನ್ನು ಕೊಡುವುದೆಂದು ಹೇಳಲಾಗುತ್ತದೆ. ಇದರ ಬೆಲೆಯೂ ತುಂಬಾ ಹೆಚ್ಚು.
ಅಶ್ವಿನಿ,ಭರಣಿ , ಕೃತ್ತಿಕಾ.ಒಂದನೇ ಪಾದ.ಮೇಷರಾಶಿಯಲ್ಲಿ ಹುಟ್ಟಿದವರು ಎರೆಡು (2)ಮುಖದ ರುದ್ರಾಕ್ಷಿ ಧರಿಸಬೇಕು.
ತ್ರಿಮುಖ ರುದ್ರಾಕ್ಷಿ
ಮೂರುಮುಖದ ರುದ್ರಾಕ್ಷಿ ಅಗ್ನಿ ದೇವನ ಸ್ವರೂಪ ಎಂದು ಹೇಳುತ್ತಾರೆ. ಇದೂ ಬಹಳ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಇದರ ಧಾರಣೆಯಿಂದ ಸಕಲ ಪಾಪಗಳೂ ನಿವಾರಣೆ ಆಗುವುದು . ಇದರ ಬೆಲೆಯೂ ಸ್ವಲ್ಪ ಹೆಚ್ಚಾಗಿಯೇ ಇದೆ.
ಉತ್ತರ,2,3,4 ನೇ ಪಾದ.ಹಸ್ತ ಚಿತ್ತಾ 1,2,ನೇಪಾದ.ಕನ್ಯಾ ರಾಶಿಯಲ್ಲಿ ಹುಟ್ಟಿದವರು ಧರಿಸಬೇಕು.
ಚತುರ್ಮುಖ ರುದ್ರಾಕ್ಷಿ
ಇದನ್ನು ಬ್ರಹ್ಮ ಸ್ವರೂಪ ಎಂದು ಗುರುತಿಸುತ್ತಾರೆ. ಇದು ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದು. ಇದು ಬ್ರೂಣ ಹತ್ಯಾದೋಷವನ್ನು ನಿವಾರಣೆ ಮಾಡುವುದು. ಸ್ಮರಣ ಶಕ್ತಿ, ಬುದ್ಧಿ, ಶಿಕ್ಷಣದಲ್ಲಿ ಸಫಲತೆ, ಇವು ದೊಕುವುದೆಂದು ಹೇಳುವರು. ಬೆಲೆ ಸಾಧಾರಣ ಮಟ್ಟದ್ದು.ಮೃಗಶಿರಾ.3.4.ನೇ ಪಾದ.ಆರಿದ್ರಾ ,ಪುನರ್ವಸು,1,2,3,ನೇಪಾದ.ಮಿಥುನ ರಾಶಿಯಲ್ಲಿ ಹುಟ್ಟಿದವರು ಧರಿಸಬೇಕು.
ಪಂಚ ಮುಖಿ ರುದ್ರಾಕ್ಷಿ
ಪಂಚ ಮುಖಿ ರುದ್ರಾಕ್ಷಿ ಯನ್ನು ಸ್ವಯಂ ಭಗವಾನ್ ಶಂಕರನ ಸ್ವರೂಪ ಎಂದು ತಿಳಿಯುತ್ತಾರೆ. ಹೆಚ್ಚಿನ ರುದ್ರಾಕ್ಷಿಗಳು ಪಂಚ ಮುಖಿ ಆಗಿರುತ್ತವೆ. ಈ. ರುದ್ರಾಕ್ಷಿ ಹೆಚ್ಚು ಸಿಗುವುದರಿಂದ ಬೆಲೆಯೂ ಕಡಿಮೆ. ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಈಶ್ವರನ ಕೃಪೆ ದೊರಕಿ ಮನಸ್ಸಿಗೆ ಶಾಂತಿದೊರೆಯುವುದು ಎಂಬ ನಂಬುಗೆ ಇದೆ.ಪುನರ್ವಸು,4ನೇಪಾದ.ಪುಶ್ಯ ಆಶ್ಲೇಷಾ ನಕ್ಷತ್ರದವರು.ಕಟಕ ರಾಶಿಯಲ್ಲಿ ಹುಟ್ಟಿದವರು ಧರಿಸಬೇಕು.
ಷಷ್ಠ ಮುಖಿ ರುದ್ರಾಕ್ಷಿ
ಆರು ಮುಖದ ರುದ್ರಾಕ್ಷಿ ಶಿವ ಪುತ್ರ ಕುಮಾರ ಕಾರ್ತಿಕೇಯನ ರೂಪವೆಂದು ತಿಳಿಯಲಾಗುತ್ತದೆ. ಈ ರುದ್ರಾಕ್ಷಿಯೂ ಹೆಚ್ಚಿ ಪ್ರಮಾಣದಲ್ಲಿ ದೊರೆಯುವುದು. ಈರುದ್ರಾಕ್ಷಿ ಧರಿಸುವುದರಿಂದ ಅಧರ್ಮiಚರಣೆ ಮಾಡಿದ್ದಲ್ಲಿ ಅದರಿಂದ ಉಂಟದ ಪಾಪಗಳು ನಿವರಣೆ ಆಗುವುದು ಹಾಗೂ ಸ್ಮರಣ ಶಕ್ತಿ ಹೆಚ್ಚುವುದು ಎಂಬ ನಂಬುಗೆ ಇದೆ.ಕೃತ್ತಿಕಾ,2,3,4ನೇಪಾದ, ರೋಹಿಣಿ, ಮೃಗಶಿರಾ.1,2.ನೇ ಪಾದ.ವೃಷಭ ರಾಶಿ/ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು
ಸಪ್ತ ಮುಖಿ ರುದ್ರಾಕ್ಷಿ
ಏಳು ಮುಖದ ರುದ್ರಾಕ್ಷಿ ಅನಂತ ನಾಗನ (ಅಥವಾ ಆದಿ ಶೇಷನ )ಸ್ವರೂಪ ಎಂದು ಹೇಳುವರು. ಇದೂ ಸಹ ವಿರಳವಾಗಿ ದೊರೆಯುವುದು. ಆದ್ದರಿಂದ ಬೆಲೆ ಹೆಚ್ಚು. ಈ ರುದ್ರಾಕ್ಷಿ ಧಾರಣೆಯಿಂದ ಹಾವಿನ ಭಯ ಇರುವುದಿಲ್ಲ .ಶರೀರ ಧೃಢವಾಗಿ ಬುದ್ಧಿ ಚುರುಕಾಗುವುದು – ಎಂದು ನಂಬಲಾಗಿದೆ.ಮುಖ,ಪುಬ್ಬಾ, ಉತ್ತರ.1ನೇಪಾದ.ಸಿಂಹರಾಶಿ.ಲಗ್ನದಲ್ ಲಿ ಹುಟ್ಟಿದವರು ಧರಿಸಬೇಕು.
ಅಷ್ಟ ಮುಖಿ ರುದ್ರಾಕ್ಷಿ
ಎಂಟು ಮುಖದ ರುದ್ರಾಕ್ಷಿಯು ಗಣಪತಿಯ ರೂಪವಾಗಿದೆ. ಈ ರುದ್ರಾಕ್ಷಿ ಬಹಳ ಕಡಿಮೆ ಪ್ರಮಾಣದಲ್ಲಿ ದೊರಕುತ್ತದೆ. ಬೇಡಿಕೆ ಜಾಸ್ತಿ ಇರುವುದರಿಂದ, ಬೆಲೆ ಜಾಸ್ತಿ ಈ ರುದಾಕ್ಷಿಯನ್ನು ಧರಿಸುವುದಿಂದ ಕಾರ್ಯಗಳು ನಿರ್ವಿಗ್ನವಾಗಿ ನಡೆಯುತ್ತದೆ ಮತ್ತು ಸರ್ವ ಸಿದ್ಧಿಯುಂಟಾಗುವುದೆಂಬುದು ಭಕ್ತರ ನಂಬುಗೆ ಈ ರುದ್ರಾಕ್ಷಿ ಎಲ್ಲಾ ರಾಶಿಲಗ್ನದವರು ಧರಿಸಬಹುದು.
ನವ ಮುಖಿ ರುದ್ರಾಕ್ಷಿ
ಒಂಭತ್ತು ಮುಖದ ರುದ್ರಾಕ್ಷಿಯನ್ನು ಭೈರವ ಮತ್ತು ನವ ದುರ್ಗ ಸ್ವರೂಪ ಎಂದು ತಿಳಿಯಲಾಗುತ್ತದೆ. ಈ ರುದ್ರಾಕ್ಷಿಯೂ ಕೂಡಾ ಬಹಳ ಕಡಿಮೆ ಪ್ರಮಾಣದಲ್ಲಿ ದೊರೆಯುವುದು. ಆದ್ದರಿಂದ ಬೆಲೆಯೂ ಹೆಚ್ಚು. ಈ ರುದ್ರಾಕ್ಷಿಯನ್ನು ಧರಸುವುದರಿಂದ ಉತ್ತಮ ಸಂತಾನ ಪ್ರಾಪ್ತಿಯಾಗುವುದೆಂದು ಹೇಳುತ್ತಾರೆ.ಚಿತ್ತ 3,4ನೇ ಪಾದ,ಸ್ವಾತಿ ,ವಿಶಾಖ 1,2,3,ನೇಪಾದ,ತುಲಾ ರಾಶಿ ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು
ದಶ ಮುಖಿ ರುದ್ರಾಕ್ಷಿ
ಹತ್ತುಮುಖದ ಉದ್ರಾಕ್ಷ ಭಗವಾನ್ ನಾರಾಯಣನ ಸ್ವರೂಪೆಂದು ನಂಬುಗೆ. ಈ ರುದ್ರಾಕ್ಷಿ ಧಾರಣೆಯಿಂದ ಇಹದ ಎಲ್ಲಾ ಸೌಲಭ್ಯಗಳೂ ಲಭಿಸುತ್ತದೆ ಮತ್ತುಸದಾ ಸುಖ ಶಾಂತಿ ಇರುತ್ತದೆ ಎಂದು ಹೇಳುತ್ತಾರೆ.ವಿಶಾಖ 1,2,3 ನೇಪಾದ ಅನುರಾಧ, ಜೇಷ್ಠ ವೃಶ್ಚಿಕ ರಾಶಿ ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು
ಏಕಾದಶ ಮುಖದ ರುದ್ರಾಕ್ಷಿ
ಹನ್ನೊಂದು ಮುಖದ ರುದ್ರಾಕ್ಷಿ ಪರಶಿವನ ರುದ್ರ ಸ್ವರೂಪ (ಏಕಾದಶ ರುದ್ರರು) ಎಂದು ಹೇಳುತ್ತಾರೆ. ಇದೂ ಕಡಿಮೆ ಪ್ರಮಾಣದಲ್ಲಿ ದೊರಕುತ್ತದೆ. ಸಾಮಾನ್ಯವಾಗಿ ಸಂನ್ಯಾಸಿಗಳು, ಯತಿಗಳು, ಸಾಧಕರು ಇದನ್ನು ಧರಿಸುತ್ತಾರೆ. ಯಜ್ಞ ಯಾಗಾದಿಗಳ ಫಲ ಈ ರುದ್ರಾಕ್ಷಿ ಧರಿಸುವುದರಿಂದ ಸಿದ್ಧಿಸುತ್ತದೆ ಎಂದು ನಂಬಿಕೆ ಇದೆ.ಮೂಲ ಪೂರ್ವಾಷಾಡ,ಉತ್ತರಾಷಾಡ 1 ನೇ ಪಾದ ಧನಸ್ಸು ರಾಶಿ ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು
ದ್ವಾದಶ ಮುಖಿ ರುದ್ರಾಕ್ಷಿ
ಹನ್ನೆರಡು ಮುಖದ ರುದ್ರಾಕ್ಷಿ ಭಗವಾನ್ ಸೂರ್ಯನಾರಾಯಣನ ಸ್ವರೂಪವೆಂದು ತಿಳಿಯಲಾಗುತ್ತದೆ (ದ್ವಾದಶಾದಿತ್ಯರು) . ಈ ರುದ್ರಾಕ್ಷಿಯ ಬೆಳೆಯೂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತದೆ. ಈರುದ್ರಾಕ್ಷಿಯನ್ನು ಧರಿಸುವುದರಿಂದ ಮನುಷ್ಯನಲ್ಲಿ ತೇಜಸ್ಸು ಹೆಚ್ಚುತ್ತದೆ ಹಾಗೂ ಪ್ರಭಾವ ಶಾಲೀ ವ್ಯಕ್ತಿತ್ವವುಂಟಾಗುತ್ತದೆ ಎಂದು ಹೇಳುತ್ತಾರೆ. ಇದರ ಬೆಲೆಯೂ ಹೆಚ್ಚು.ಪೂರ್ವಾಭಾದ್ರ 4,ನೇ ಪಾದ ಉತ್ತರಾಭಾದ್ರ,ರೇವತಿ ಮೀನಾ ರಾಶಿ ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು
ತ್ರಯೋದಶಿ ಮುಖಿ ರುದ್ರಾಕ್ಷಿ
ಹದಿಮೂರುಮುಖದ ರುದ್ರಾಕ್ಷಿ ಇಂದ್ರ ದೇವನ ಸ್ವರೂಪ ಎಂದು ಭಾವಿಸುತ್ತಾರೆ. ಈ ರುದ್ರಾಕ್ಷಿಯ ಧಾರಣೆಯಿಂದ ಆತ್ಮ ಶಾಂತಿ ದೊರೆಯು ವುದು ಶಾರೀರಿಕ ಶಾಂತಿ ದೊರೆಯುವುದು.ಇದನ್ನು ಸಹ ಯಾವುದೇ ರಾಶಿಯವರು ಧರಿಸಿದರೇ ಒಳ್ಳೆಯದು.
ಚತುರ್ದಶ ಮುಖದ ರುದ್ರಾಕ್ಷಿ
ಹದಿನಾಲ್ಕು ಮುಖದ ರುದ್ರಾಕ್ಷಿ ಆಂಜನೇಯನ ಸ್ವರೂ ವೆಂದು ತಿಳಿಯಲಾಗುತ್ತದೆ. ಇದು ಸಹಾ ಕಡಿಮೆ ಪ್ರಮಾಣದಲ್ಲಿ ದೊರೆಯುವುದು. ಈ ರುದ್ರಾಕ್ಷಿ ಧಾರಣೆಯಿಂದ ರೋಗಗಳಿಂದ ಮುಕ್ತಿ ದೊರೆಯುತ್ತದೆ- ಮನುಷ್ಯ ನಿರೂಗಿಯಾಗಿ ಬಲಶಾಲಿಯಾಗುತ್ತಾನೆ ಎಂದು ಹೇಳುತ್ತಾರೆ. ಬೆಲೆಯೂ ಹೆಚ್ಚುಇದೆ.ಧನಿಷ್ಟ 3,4ನೇಪಾದ,ಶತತಾರ,ಪೂರ್ವಾಭಾದ್ರ 1,2,3ನೇ ಪಾದ ಕುಂಭ ರಾಶಿ ಲಗ್ನದಲ್ಲಿ ಹುಟ್ಟಿದವರು ಧರಿಸಬೇಕು.
ಈ ಹದಿನಾಲ್ಕು ವಿಧದ ರುದ್ರಾಕ್ಷಿಗಳು ಪ್ರಕೃತಿಯಲ್ಲಿ ದೊರೆಯುತ್ತವೆ . ಇಚ್ಛಗೆ ಅನುಗುಣವಾಗಿ ಈ ರುದ್ರಾಕ್ಷಿಗಳನ್ನು ಧರಿಸುವುದರಿಂದ ಇಚ್ಛಿತ ಫಲ ದೊರಕುವುದೆಂದು ದೈವ ಭಕ್ತರ ನಂಬುಗೆ ಇದೆ. ಇದಕ್ಕೂ ಹೆಚ್ಚಿನ ಮುಖದ ರುದ್ರಾಕ್ಷಿಗಳು ಸಿಗುವುದು ತುಂಬಾ ವಿರಳ. ಜನ ಮನ್ನಣೆ ಪೆಡೆರುವುದು ಈ ಹದಿನಾಲ್ಕು ಬಗೆಗಳು ಮಾತ್ರ ಎಂದು ಹೇಳುತ್ತಾರೆ.ಇನ್ನೂ 34.ಮುಖಗಳವರೆಗೂ ರುದ್ರಾಕ್ಷಿಗಳು ದೊರೆಯುತ್ತವೆ ತಾವುಗಳು ನೇಪಾಳ ಬೇಟಿಯಾದರೇ ಈ ರುದ್ರಾಕ್ಷಿಗಳ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ.
ಆತ್ಮೀಯ ನಾಗರೀಕ ಬಂಧುಗಳೇ.ನಿಮ್ಮಜನ್ಮರಾಶಿಗೆ ಹೊಂದಿಕೊಳ್ಳುವ ರುದ್ರಾಕ್ಷಿಗಳನ್ನು.ನೇಪಾಳದಿಂದ ತರಿಸಿಕೊಡಲೋಗುವುದು
ಅವಶ್ಯಕತೆ.ಮತ್ತು ಆಧ್ಯಾತ್ಮಿಕತೆ ಯು ಬಗ್ಗೆ ನಂಬಿಕೆ ಇರುವವರಿಗೆ ರುದ್ರಾಕ್ಷಿ ಬೇಕಾದಲ್ಲಿ ಈ ಕೆಳಕಂಡ ನಮ್ಮನ್ನು ಸಂಪರ್ಕಿಸಿ
ಪಂಡಿತ್ . ಪ್ರಕಾಶ್ ಮೂರ್ತಿ.
ಮೊಬೈಲ್:-9481916130
ReplyForward
|