ನಿತ್ಯವಾಣಿ,ಚಿತ್ರದುರ್ಗ, ಫೆ.07 : ರುಡ್ಸೆಟ್ ಸಂಸ್ಥೆಯು ಉದ್ಯಮಶೀಲತಾಭಿವೃದ್ಧಿ – ಡಿಜಿಟಲ್ ಡಿಜೈನಿಂಗ್ ಅಂಡ್ ಪಬ್ಲಿಕೇಷನ್ (ಕಂಪ್ಯೂಟರ್ ಡಿ.ಟಿ.ಪಿ.) ತರಬೇತಿ ಕಾರ್ಯಕ್ರಮವನ್ನು 45 ದಿನಗಳ ಕಾಲಾವಧಿಯವರೆಗೆ ಆಯೋಜಿಸಲಾಗಿದ್ದು, ಈ ತರಬೇತಿ ಕಾರ್ಯಗಾರದ ಉದ್ಘಾಟನಾ ಸಮಾರಂಭವನ್ನು ಫೆ 07. ರ ಸಂಜೆ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು,
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ನಾಗರತ್ನ, ವಿಭಾಗಿಯ ಪ್ರಬಂದಕರು,ಪ್ರಾದೇಶಿಕ ಕಛೇರಿ, ಕೆನರಾ ಬ್ಯಾಂಕ್, ದಾವಣಗೆರೆ ಇವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ತರಬೇತಿಗೆ ಚಾಲನೆ ನೀಡಿದರು ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಆಧುನಿಕ ಜಗತ್ತು ಕಂಪ್ಯೂಟರೀಕರಣ ಆಗುತ್ತಿರುವುದರಿಂದ ಕಂಪ್ಯೂಟರ್ ಉದ್ಯಮ ಬಹುಬೇಡಿಕೆಯ ಉದ್ಯೋಗವಾಗಿದೆ. ಈ ಉದ್ಯೋಗದಲ್ಲಿ ಶ್ರದ್ಧೆ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ತೊಡಗಿಕೊಂಡರೆ ಬೇಗನೆ ಯಶಸ್ಸನ್ನು ಸಾಧಿಸಬಹುದು. ಇಂದು ಎಲ್ಲಾ ವ್ಯವಹಾರ ಕ್ಷೇತ್ರಗಳಲ್ಲೂ ಕಂಪ್ಯೂಟರ್ ಜ್ಞಾನ ಬಲ್ಲವರಿಗೆ ಆದ್ಯತೆ ಮತ್ತು ಅವಶ್ಯಕತೆ ಇದೆ. ಕಂಪ್ಯೂಟರ್ ಡಿ.ಟಿ.ಪಿ. ವೃತ್ತಿಯನ್ನು ಆಯ್ಕೆ ಮಾಡಿ ತರಬೇತಿಗೆ ಬಂದಿರುವುದು ನಿಮ್ಮ ನಿರ್ಧಾರವು ಸರಿಯಾಗಿದೆ. ತರಬೇತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಮತ್ತು ಹೊಸದನ್ನು ಕಲಿಯಲು ಆಸಕ್ತಿವಹಿಸಿ ಎಂದು ತಿಳಿಸುತ್ತಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಂದಿರುವ ಅತಿಥಿಗಳನ್ನ & ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಜಿ. ಮಂಜುಳಾ ರವರು ತರಬೇತಿ ಎಂದರೆ ಸಾಮರ್ಥ್ಯವನ್ನು ಉತ್ತಮ ಪಡಿಸಿಕೊಳ್ಳವುದು, ಜ್ಞಾನ, ಕೌಶಲ್ಯ ಹಾಗೂ ವ್ಯಕ್ತಿತ್ವವನ್ನು ಸರಿಯಾಗಿ ರೂಪಿಸಿಕೊಂಡರೆ, ಯಾವುದೇ ಉದ್ಯೋಗ/ಉದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯ ತರಬೇತಿ ಅವಧಿಯಲ್ಲಿ ಎಲ್ಲರೂ ಸಕ್ರೀಯವಾಗಿ ಪಾಲ್ಗೋಂಡು ಸ್ವ ಉದ್ಯೋಗಕೈಗೊಳ್ಳಲು ಸಾಮರ್ಥ್ಯವನ್ನು ಪಡೆದುಕೊಳ್ಳಿ ಹಾಗೂ ಉದ್ಯೋಗದಲ್ಲಿ ಯಶಸ್ವಿಯಾಗಿ ಎಂದು ಶಿಬಿರಾರ್ಥಿಗಳಿಗೆ ಶುಭ ಕೋರಿದರು.
ಸಂಸ್ಥೆಯ ಉಪನ್ಯಾಸಕರಾದ ತೋಟಪ್ಪ ಎಸ್. ಗಾಣಿಗೇರ ಯವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಕೊನೆಯಲ್ಲಿ ಇವರು ವಂದನಾರ್ಪಣೆ ಮಾಡಿದರು.
ಒಟ್ಟು ಕಾರ್ಯಕ್ರಮದಲ್ಲಿ 30 ಜನ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.