ನಿತ್ಯವಾಣಿ,ಚಿತ್ರದುರ್ಗ, ಫೆ.05 : ರುಡ್‍ಸೆಟ್ ಸಂಸ್ಥೆಯು ಎನ್.ಆರ್.ಎಲ್.ಎಂ – ಸಂಜೀವಿನಿ, ಜಿಲ್ಲಾ ಪಂಚಾಯತ್ ಚಿತ್ರದುರ್ಗ ಇವರ ಪ್ರಾಯೋಜಕತ್ವದಲ್ಲಿ ನಿರುದ್ಯೋಗಿ ಯುವತಿಯರಿಗಾಗಿ ಉದ್ಯಮಶೀಲತಾಭಿವೃದ್ಧಿ – ಪೇಪರ್ ಕವರ್, ಎನ್ವಲಪ್, ಫೈಲ್ ಮೇಕಿಂಗ್ ಮತ್ತು ಬಟ್ಟೆ ಬ್ಯಾಗ್ ತಯಾರಿಕೆ ತರಬೇತಿ ಕಾರ್ಯಕ್ರಮವನ್ನು ದಿನಾಂಕ ಜನವರಿ 27 ರಿಂದ ಫೆಬ್ರವರಿ 5. ರವರೆಗೆ 10 ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಇಂದು ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಿನೇಶ್ ಪೂಜಾರ, ಜಿಲ್ಲಾ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚಿತ್ರದುರ್ಗ ಇವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಮನಸ್ಸಿದರೆ ಮಾರ್ಗ ಎನ್ನುವಂತೆ ಯಾವುದೇ ಕೆಲಸವನ್ನು ಮಾಡಬೇಕಾದರೆ ಮಾಡುವ ಇಚ್ಛೆ ಆಸಕ್ತಿಯೊಂದಿಗೆ ಧನಾತ್ಮಕ ಆಲೋಚನೆಗಳು ಇದ್ದರೆ ಮಾತ್ರ ಉದ್ಯೋಗದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಬ್ಯಾಗ್ ತಯಾರಿಕೆ ಮಾಡುವುದು ಉತ್ತಮ ಆದಾಯತರುವಂತಹ ಬೇಡಿಕೆಯುತ ಉದ್ಯಮವಾಗಿದೆ. ಈ ಉದ್ಯಮದಲ್ಲಿ ಸಮಯಪಾಲನೆ ಮತ್ತು ಬದ್ಧತೆಯೊಂದಿಗೆ ಕೆಲಸ ಅತ್ಯಂತ ಅವಶ್ಯಕವಾಗಿದೆ. ಆಧುನಿಕ ಜೀವನ ಶೈಲಿಗನುಗುಣವಾಗಿ ನಿಮ್ಮ ಉದ್ಯಮದಲ್ಲಿ ಹೊಸಹೊಸ ವಿನ್ಯಾಸಗಳನ್ನು ಅಳವಡಿಸಿಕೊಳ್ಳುತ್ತಾಸಾಗಬೇಕು, ಹೊಸದು ನಿರಂತರ ಪ್ರಕ್ರಿಯೆ ಯಾದಾಗ ನೂತನ ಬದಲಾವಣೆಗೆ ನಾಂದಿಯಾಗುತ್ತದೆ, ಅಂದರೆ ಮಾತ್ರ ತಾಂತ್ರಿಕವಾಗಿ ಬದಲಾಗುತ್ತಿರುವ ಉದ್ಯಮದಲ್ಲಿ ಮುಂದುವರಿಯಲು ಸಾದ್ಯವಾಗುತ್ತದೆ. ಒಂದಿಷ್ಟು ನಗು, ಸಹನೆ ಮತ್ತು ಹೊಂದಾಣಿಕೆಯಿಂದ ವೃತ್ತಿ ಬದುಕನ್ನು ಸಧೃಡವಾಗಿ ಕಟ್ಟಿಕೊಳ್ಳಿರಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಸಕಾರಾತ್ಮಕ ಮನೋಭಾವದೊಂದಿಗಿನ ಕೆಲಸ ಮತ್ತು ನಗು ಮುಖದ ಸೇವೆ ಇವು ಯಶಸ್ವಿ ಉದ್ಯೋಗಿಗಳ ಗುಟ್ಟು ಎಂದು ತಿಳಿಸುತ್ತಾ ಮಾಡುವ ವೃತ್ತಿಯನ್ನು ಪ್ರೀತಿಯಿಂದ ಹಾಗೂ ಶ್ರದ್ಧೆಯಿಂದ ಮಾಡಿ ಸ್ವ ಶಕ್ತಿ, ಸ್ವ ಸಾಮಥ್ರ್ಯದಿಂದ ಸ್ವಾವಲಂಬನೆ ಸಾಧ್ಯ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ ಶ್ರೀಮತಿ ಪ್ರಿಯಾ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತನಾಡಿದ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕರಾದ ಜಿ.ಮಂಜುಳಾರವರು ತರಬೇತಿ ಅವಧಿಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಿ ವೃತ್ತಿ ಬದುಕಿಗೆ ಭದ್ರವಾದ ಬುನಾದಿಯನ್ನು ಹಾಕಿಕೊಳ್ಳುವುದರಿಂದ ತರಬೇತಿ ಪೂರಕವಾಗಿ ನಿಲ್ಲುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಶ್ರೀಮತಿ ಲತಾಮಣಿ ಯವರು ಉಪನ್ಯಾಸಕರು ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ಸಂಸ್ಥೆಯ ಉಪನ್ಯಾಸಕರಾದ ಶ್ತೋಟಪ್ಪ ಎಸ್.ಗಾಣಿಗೇರ ಉಪನ್ಯಾಸಕರು ಕಾರ್ಯಕ್ರಮವನ್ನು ನಿರೂಪಿಸಿದರು. ಒಟ್ಟು ಕಾರ್ಯಕ್ರಮದಲ್ಲಿ 27 ಜನ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.