ದಕ್ಷ ಚಿತ್ರದುರ್ಗ ಜಿಲ್ಲಾ ಪೊಲೀಸ್ಅಧಿಕಾರಿಗಳಾದ ಜಿ. ರಾಧಿಕಾರವರು ಕಡಿವಾಣ ಹಾಕುವರಾ……
ನಿತ್ಯಾವಾಣಿ ವಿಶೇಷ ಸುದ್ದಿ ;;
ಚಿತ್ರದುರ್ಗಜಿಲ್ಲೆ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಕ ಮರಳು ದಂದೆ ಎಗ್ಗಿಲ್ಲದೆ ನಡೆಯುತ್ತಿದೆ. ಚಳ್ಳಕೆರೆ ತಾಲ್ಲೂಕು, ಕಲ್ಲಮರಹಳ್ಳಿ ಹಿರಿಯೂರು ತಾಲ್ಲೂಕು ಹೊಸಹಳ್ಳಿ ಹೂವಿನಹೊಳೆ ಈ ಸ್ಥಳದಲ್ಲಿ ಗುತ್ತಿಗೆದಾರರು ಬೇರೆಯವರು ಇದ್ದರೂ ಕೂಡ ಉಪ ಗುತ್ತಿಗೆದಾರರ ಹಾವಳಿ ಯಥೇಚ್ಚವಾಗಿ ದಂಧೆ ನಡೆಸುತ್ತಿದ್ದಾರೆ.
ಬೆಂಗಳೂರು ಮೂಲದ ಮೋಹನ್‍ಕುಮಾರ್ ಎಂಬುವವರು ಹಿರಿಯೂರು ತಾಲ್ಲೂಕು ಹೂವಿನಹೊಳೆ ನದಿಪಾತ್ರದಲ್ಲಿ ಮರಳನ್ನು ಸಾಗಿಸುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಹಶೀಲ್ದಾರ್ ಹಿರಿಯೂರು ಪೊಲೀಸ್ ಉಪ ಅಧೀಕ್ಷಕರು ವೃತ್ತ ನಿರೀಕ್ಷಕರು, ಹಾಗೂ ಜಿಲ್ಲೆಯ ಪರಿಸರ ಮಾಲಿನ್ಯ ಇಲಾಖೆ ಕಣ್ಣು ಮುಚ್ಚಿಕುಳಿತಿರುವುದು ಮರಳು ದಂಧೆಗೆ ಸಾಕ್ಷಿಯಾಗಿದೆ. ಬಲಿಷ್ಟ ರಾಜಕಾರಣಿಗಳು ಬೆನ್ನುಲಬಾಗಿರುವ ಈ ದಂಧೆಗೆ ಕಡಿವಾಣ ಹಾಕುವ ದಕ್ಷ ಅಧಿಕಾರಿ ಜಿಲ್ಲಾ ಪೊಲೀಸ್ಅಧಿಕಾರಿಗಳಾದ ಜಿ. ರಾಧಿಕಾರವರು ಸ್ಥಳ ಪರಿಶೀಲನೆ ನಡೆಸಿದ್ದೇ ಆದರೆ ಇಷ್ಟು ಜನ ಅಧಿಕಾರಿಗಳು ಅಮಾನತ್ತುಗೊಳ್ಳಲಿದ್ದಾರೆ. ಈ ದಂಧೆಯ ಹಿಂದೆ ಹಣದ ವಹಿವಾಟು ಲಕ್ಷದ ಲೆಕ್ಕಚಾರದಲ್ಲಿ ನಡೆಯುತ್ತಿದೆ. ಪ್ರತಿ ತಿಂಗಳು ಸಂಬಂಧಪಟ್ಟ ಪ್ರತಿ ಇಲಾಖೆಗೂ ಲಕ್ಷಾಂತರ ಹಣ ಸರಬರಾಜು ಆಗುತ್ತಿದ್ದು ಕಣ್ಣಿದ್ದು ಕುರುಡರಂತೆ ಅಧಿಕಾರಿಗಳು ಜಾಣ ನಿದ್ರೆಗೆ ಜಾರಿದ್ದಾರೆ. ಇಂತಹ ಅಧಿಕಾರಿಗಳನ್ನು ಬಡಿದೆಬ್ಬಿಸುವ ದಕ್ಷ ಅಧಿಕಾರಿಗಳಾದ ಜಿ. ರಾಧಿಕಾರವರು ಮನಸ್ಸು ಮಾಡಬೇಕಾಗಿದೆ.