ಅಕ್ರಮವಾಗಿ ಮರಳು ತೆಗೆಯಲು ಅಪ್ಪನ ಜತೆ ಹೋಗಿದ್ದ ಯುವತಿ ಅಲ್ಲೇ ಪ್ರಾಣಬಿಟ್ಟಳು!

ಕುದೂರು(ಮಾಗಡಿ): ಕೆರೆಯಲ್ಲಿ ಅಕ್ರಮವಾಗಿ ಮರಳು ತೆಗೆಯಲು ಹೋಗಿದ್ದ ಯುವತಿ ಅದೇ ಮರಳಿನ ದಿಬ್ಬದಡಿ ಸಿಲುಕಿ ಪ್ರಾಣಬಿಟ್ಟಿದ್ದಾಳೆ.ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಬಿಸ್ಕೂರು ಕೆರೆಯಲ್ಲಿ ಭಾನುವಾರ ರಾತ್ರಿ ಈ ಅವಘಡ ಸಂಭವಿಸಿದೆ. ಗೊಲ್ಲಹಳ್ಳಿ ಗ್ರಾಮದ ಮುನಿಸ್ವಾಮಿ ಎಂಬುವರ ಪುತ್ರಿ ರಾಧಾ(27) ಮೃತಪಟ್ಟವರು.ಇದನ್ನೂ ಓದಿರಿ

ಬಿಸ್ಕೂರು ಕೆರೆ ಪಕ್ಕದಲ್ಲಿರುವ ಗೊಲ್ಲಹಳ್ಳಿ ಗ್ರಾಮದ ಮುನಿಸ್ವಾಮಿ ಕುಟುಂಬ ಸದಸ್ಯರು ಎತ್ತಿನಗಾಡಿಯಲ್ಲಿ ಕೆರೆಯಿಂದ ಮರಳು ತೆಗೆದು ಸುತ್ತಮುತ್ತಲ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದರು. ಭಾನುವಾರ ರಾತ್ರಿ ಮುನಿಸ್ವಾಮಿ ಪತ್ನಿ ನಾಗಮಯ್ಯ ಹಾಗೂ ಮಗಳು ರಾಧಾ ಜತೆ ಮರಳು ತೆಗೆಯುತ್ತಿದ್ದಾಗ ಮರಳಿನ ದಿಬ್ಬ ಕುಸಿದಿದೆ. ಮರಳಿನಲ್ಲಿ ಸಿಲುಕಿದ ರಾಧಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಗಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.