ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ನಟನ ಬದುಕಲ್ಲಿ ಅಲ್ಲೋಲ ಕಲ್ಲೋಲ!

ಬೆಂಗಳೂರು:- ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ದಂಧೆ ಬಗ್ಗೆ ಸ್ಫೋಟಕ ಮಾಹಿತಿ ಹೊರ ಬರುತ್ತಿದ್ದಂತೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಇದೀಗ ಇದೇ ಡ್ರಗ್ಸ್ ನಶೆ ಆರೋಪ, ಓರ್ವ ನಟನ ವೈಯಕ್ತಿಕ ಬದುಕನ್ನೇ ಹಾಳು ಮಾಡಿದೆ.

ಹೌದು, ಇತ್ತೀಚೆಗೆ ಬೆಂಗಳೂರಿನ ಕಲ್ಯಾಣ ನಗರದ ಅಪಾರ್ಟ್‌ಮೆಂಟ್‌ವೊಂದರ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿ, ಡ್ರಗ್ಸ್ ಡೀಲರ್ಸ್‌ಗಳನ್ನ ಬಂಧಿಸಿದ್ದರು. ವಿಚಾರಣೆ ವೇಳೆ ಸ್ಯಾಂಡಲ್‌ವುಡ್‌ನ ನಟ,ನಟಿಯರು ಸೇರಿದಂತೆ ಸಂಗೀತ ನಿರ್ದೇಶಕರು ಡ್ರಗ್ಸ್‌ಗೆ ಅಡಿಕ್ಟ್‌ಆಗಿರುವ ಸ್ಫೋಟಕ ಮಾಹಿತಿ ಹೊರ ಬಂದಿತ್ತು.

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸ್ಯಾಂಡಲ್‌ವುಡ್‌ನಲ್ಲಿ ಮೂರನೆ ತಲೆ ಮಾರಿನ ನಟ ನಟಿಯರು ಡ್ರಗ್ಸ್ ದಂಧೆಯಲ್ಲಿದ್ದಾರೆ, ನನಗೆ ರಕ್ಷಣೆ ನೀಡಿದ್ರೆ ಮಾಹಿತಿ ನೀಡುವುದಾಗಿ ತಿಳಿಸಿದ್ರು. ಈಗ ಇದೇ ಹೇಳಿಕೆ ಸ್ಯಾಂಡಲ್‌ವುಡ್ ನಟ ಪವನ್ ಶೌರ್ಯ ಬದುಕಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆಯಂತೆ.

ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ನಮ್ಮ ಕುಟುಂಬಗಳಲ್ಲೇ ನಮ್ಮನ್ನು ಅನುಮಾನದಿಂದ ನೋಡುವ ವಾತಾವರಣ ನಿರ್ಮಾಣವಾಗಿದೆ. ಮುಂದಿನ ತಿಂಗಳು ಮದುವೆ ತಯಾರಿಯಾಗಿತ್ತು, ಮೊದಲೇ ಸಿನಿಮಾದವರು ಎಂದ್ರೆ ಭಯ ಬೀಳುತ್ತಾರೆ. ಇದೀಗ ಹೆಣ್ಣು ಕೊಡೋಕು ಹುಂದೆ ಮುಂದೆ ನೋಡುವಂತಹ ವಾತಾವರಣ ನಿರ್ಮಾಣವಾಗಿದೆ ಅಂತ ನಟ ಪವನ್ ಶೌರ್ಯ ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.