ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ………

ಸಾಣೇಹಳ್ಳಿ, ಡಿಸೆಂಬರ್ 29; ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ `ವರ್ಷದ ಹರ್ಷ’ ಕಾರ್ಯಕ್ರಮವನ್ನು ಆಯೋಜಿಸಿದೆ. ಇದೇ ಸಂದರ್ಭದಲ್ಲಿ ಈ ವರ್ಷದ ಶಿವಸಂಚಾರ-20 ರ ನಾಟಕಗಳು ಮೊದಲ ಪ್ರದರ್ಶನ ಕಾಣಲಿವೆ.
ಡಿಸೆಂಬರ್ 30 ರ ಸಂಜೆ 6.30 ರಿಂದ ಆರಂಭವಾಗುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಶಿರಗುಪ್ಪದ ಹಾಸ್ಯ ಕಲಾವಿದರಾದ ಜೆ ನರಸಿಂಹಮೂರ್ತಿ ಉಪನ್ಯಾಸ ನೀಡುವರು. ರಾಜ್ಯ ಖನಿಜ ನಿಗಮದ ಅಧ್ಯಕ್ಷರಾಗಿ ನಿಯುಕ್ತರಾಗಿರುವ ಎಸ್ ಲಿಂಗಮೂರ್ತಿ ಅವರಿಗೆ ಅಭಿನಂದನೆಯನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ನಂತರ ರಾ ಕ ನಾಯಕ ಅವರು ರಚಿಸಿರುವ, ಮಾಲತೇಶ ಬಡಿಗೇರ ನಿರ್ದೇಶನದಲ್ಲಿ ಶಿವಸಂಚಾರ-20 ರ ತಂಡದವರು `ಡೋಹರ ಕಕ್ಕಯ್ಯ’ ನಾಟಕ ಪ್ರದರ್ಶಿಸುವರು.
ಡಿಸೆಂಬರ್ 31 ರಂದು ಮಧುರೆಯ ಭಗೀರಥ ಗುರುಪೀಠದ ಡಾ. ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿಸವರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ನಾಗರಾಜರಾವ್ ಕಲ್ಕಟ್ಟೆ ಉಪನ್ಯಾಸ ನೀಡುವರು. ಚಿಕ್ಕಮಗಳೂರಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಎಂ ಎನ್ ಷಡಕ್ಷರಿ ಅವರಿಗೆ ಅಭಿನಂದನೆಯನ್ನು ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಚಿಕ್ಕಮಗಳೂರಿನ ಭರತ ಕಲಾಕ್ಷೇತ್ರದ ವರ್ಷಿಣಿ ಮತ್ತು ವೈಷ್ಣವಿ ಎನ್ ರಾವ್ ತಂಡದವರಿಂದ ನೃತ್ಯ ವೈವಿಧ್ಯವಿದೆ. ಕಾರ್ಯಕ್ರಮ ಮುಗಿದ ಮೇಲೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗÀಳವರು ರಚಿಸಿದ, ವೈ ಡಿ ಬದಾಮಿ ನಿರ್ದೇಶನದಲ್ಲಿ ಶಿವಸಂಚಾರ-20 ರ ತಂಡದವರು `ಜೀವ ಇದ್ದರೆ ಜೀವನ’ ಎನ್ನುವ ನಾಟಕವನ್ನು ಪ್ರದರ್ಶಿಸುವರು. ಎರಡೂ ದಿನಗಳ ಕಾಲ ಆರಂಭದಲ್ಲಿ ಶಿವಸಂಚಾರದ ಕೆ ಜ್ಯೋತಿ ಮತ್ತು ಕೆ ದಾಕ್ಷಾಯಣಿ ತಂಡದವರಿಂದ ವಚನಗೀತೆಯೂ ಸೇರಿದಂತೆ ವಿವಿಧ ಗೀತೆಗಳ ಗಾಯನವಿದೆ. ಕೋವಿಡ್-19 ರ ಹಿನ್ನೆಲೆಯಲ್ಲಿ ಸರ್ಕಾದ ಮಾರ್ಗಸೂಚಿಯಂತೆ ಕಾರ್ಯಕ್ರಮದ ನೇರ ವೀಕ್ಷಣೆಗೆ ಅವಕಾಶವಿರುವುದಿಲ್ಲ. ಪ್ರೇಕ್ಷಕರು ಸಾಣೇಹಳ್ಳಿಗೆ ಬರುವ ಅಗತ್ಯವಿಲ್ಲ. ಇಲ್ಲಿ ನಡೆಯುವ ಕಾರ್ಯಕ್ರಮವನ್ನು ತಿತಿತಿ.shivಚಿsಚಿಟಿಛಿhಚಿಡಿಚಿ.oಡಿg ಅಂತರ್ಜಾಲದಲ್ಲಿ, ಶಿವಸಂಚಾರ ಮತ್ತು ಮತ್ತೆ ಕಲ್ಯಾಣ ಪೇಸ್ಬುಕ್ ಪೇಜ್‍ಗಳಲ್ಲಿ ವೀಕ್ಷಿಸಬಹುದಾಗಿದೆ ಎಂದು ಕಲಾಸಂಘದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published.