ಐಎಂಎ ಸಂಘದ ಅಧ್ಯಕ್ಷರಾಗಿ ಡಾ.ಪಿ.ಟಿ.ವಿಜಯಕುಮಾರ್ ಆಯ್ಕೆ

ನಿತ್ಯವಾಣಿ ನ್ಯೂಸ್, ಚಿತ್ರದುರ್ಗ,ಅ.31 : 2022-23ನೇ ಸಾಲಿನ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಚಿತ್ರದುರ್ಗ ಶಾಖೆಯ ನೂತನ ಅಧ್ಯಕ್ಷರಾಗಿ ಡಾ.ಪಿ.ಟಿ.ವಿಜಯಕುಮಾರ್ ಆಯ್ಕೆಯಾಗಿದ್ದಾರೆ.
ನಗರದ ಐಎಂಎ ಚಿತ್ರದುರ್ಗ ಶಾಖೆಯ ಸಭಾಂಣದಲ್ಲಿ ಅಕ್ಟೋಬರ್ 29ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 2022-23ನೇ ಸಾಲಿನ ಐಎಂಎ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ವಿವರ: ಅಧ್ಯಕ್ಷರಾಗಿ ಡಾ.ಪಿ.ಟಿ.ವಿಜಯ್‍ಕುಮಾರ್, ಉಪಾಧ್ಯಕ್ಷರಾಗಿ ಡಾ.ಎಸ್.ತೋಯಜಾಕ್ಷಿಬಾಯಿ, ಡಾ.ಆರ್.ಲಕ್ಷ್ಮೀಪ್ರಶಾಂತ್, ಡಾ.ಕೆ.ಕೃಪಾದೇವಿ, ಗೌರವ ಕಾರ್ಯದರ್ಶಿಗಳಾಗಿ ಡಾ.ಕೆ.ಎಂ.ಬಸವರಾಜ್, ಸಹ ಕಾರ್ಯದರ್ಶಿಗಳಾಗಿ ಡಾ.ಎಸ್.ಹೆಚ್. ದೇವರಾಜ್, ಡಾ.ಜಿ.ಎಸ್.ಅಶ್ವಿನಿ, ಡಾ.ಡಿ.ಎಂ.ಅಭಿನವ್, ಗೌರವ ಖಜಾಂಚಿಯಾಗಿ ಡಾ.ಆರ್.ಕೃಷ್ಣಮೂರ್ತಿ, ಆಂತರಿಕ ಆಡಿಟರ್ ಆಗಿ ಜಿ.ಬಿ.ಸುಧೀಂದ್ರ, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಡಾ.ಆರ್.ಟಿ.ಚಂದ್ರಶೇಖರ್, ಕೇಂದ್ರ ಕೌನ್ಸಿಲ್ ಸದಸ್ಯರಾಗಿ ಡಾ.ಸಿ.ನಾರಾಯಣ ಮೂರ್ತಿ, ಡಾ.ಎಂ.ಯೋಗೇಂದ್ರ, ರಾಜ್ಯ ಕೌನ್ಸಿಲ್ ಸದಸ್ಯರಾಗಿ ಡಾ.ಎಸ್.ಪಿ ರವೀಂದ್ರ, ಡಾ.ಎಸ್.ಪಿ ದಿನೇಶ್, ಡಾ.ಎಸ್.ಕೆ.ಮೋಹನ್ ಕುಮಾರ್, ಕಾರ್ಯಕಾರಿ ಸಂಘದ ಸದಸ್ಯರಾಗಿ ಡಾ. ನಾಗರಾಜ ನಾಯ್ಕ, ಡಾ.ಬಿ.ವೈ.ರೂಪಶ್ರೀ, ಡಾ.ಆರ್.ಪಿ.ವೇಣು, ಡಾ.ಆರ್, ರಾಮು, ಡಾ.ಕೆ.ಜಿ.ಸತ್ಯನಾರಾಯಣ, ಡಾ.ಎಸ್.ಆರ್.ಡಿ.ವಿಜಯ್‍ಕುಮಾರ್ ರಾವ್, ಡಾ.ಎಸ್. ರಶ್ಮಿ, ಡಾ.ಜಶ್ವಂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಐಎಂಎ ಚುನಾವಣಾಧಿಕಾರಿ ಡಾ.ಎನ್.ಬಿ.ಪ್ರಹ್ಲಾದ್ ತಿಳಿಸಿದ್ದಾರೆ.ಡಾ.ರವಿಕುಮಾರ್ ಅಭಿನಂದಿಸಿದರು

Leave a Reply

Your email address will not be published.