ನಿತ್ಯವಾಣಿ, ಚಿತ್ರದುರ್ಗ,(ಸೆ.03) : 1975-76ನೇ ಸಾಲಿನ ವಿದ್ಯಾರ್ಥಿಗಳಾಗಿದ್ದು ಹಿರಿಯ ನಾಗರಿಕರಾದ ಹಳೆ ವಿದ್ಯಾರ್ಥಿಗಳ ಶಿಷ್ಯ ವೃಂದ ಇವರಿಂದ ನಮ್ಮ ನೆಚ್ಚಿನಗುರುಗಲಾಗಿದ್ದ ಶ್ರೀ ಎಸ್ ಪಾಲಯ್ಯ ಮೆಸ್ಟ್ರುನಿವೃತ್ತ ಬಿಇಒ ಇವರಿಗೆ ಚಿತ್ರದುರ್ಗದಲ್ಲಿ ಈ ದಿವಸ ಗುರುವಂದನೆ ಕಾರ್ಯಕ್ರಮ ನಡೆಯಿತು,ಮಾನ್ಯ ಗುರುಗಳು ತಮ್ಮ ಸುದೀರ್ಘ ಸೇವೆಯನ್ನು ಸರ್ಕಾರಿ ಪ್ರೌಡ ಶಾಲೆ ಚೋರನೂರು,ಸಂಡೂರು ತಾಲೂಕು ಬಳ್ಳಾರಿ ಜಿಲ್ಲೆ ಯಲ್ಲಿ ಸೇವೆ ಸಲ್ಲಿಸಿ ಸಾವಿರಾರು ಮಂದಿ ಶಿಷ್ಯರನ್ನು ಹೊಂದಿರುತ್ತಾರೆ.
ಸುಮಾರು46ವರ್ಷಗಳ ನಂತರ ತಮ್ಮ ಪ್ರೀತಿಯ ಗುರುಗಳಿಗೆ ರಾಜ್ಯಾದಂತ ನೆಲೆಸಿರುವ ಶಿಷ್ಯಂದಿರು ಈ ದಿವಸ ಒಟ್ಟಾಗಿ ಸೇರಿ ಗುರುಗಳ ಪಾದಾವೃಂದಕ್ಕೆ ನಮಸಿ ತಮ್ಮಪ್ರೀತಿಯ ಪರಾಕಾಷ್ಟೆ ಯನ್ನೂ ಮೆರೆದಿದ್ದಾರೆ.ಇದು ಗುರು ಶಿಷ್ಯರ ಅಪೂರ್ವ ಸಂಗಮ ವೇ ಸರಿ.ಇಂತಹ ಸನ್ನಿವೇಶ ಅದು 46 ವರ್ಷಗಳ ನಂತರ ಮತ್ತೆ ಒಟ್ಟಾಗಿ ಸೇರುವುದು ಇತಿಹಾಸವೇ ಸರಿ
ಈಗಿನ ಯುವಪೀಳಿಗೆಗೆ ಹಾಗೂ ಸಮಾಜಕ್ಕೆ ಇಂತಹ ಅಪರೂಪದ ಗುರು ಶಿಷ್ಯರ ಸಂಗಮ ಮಾದರಿ ಯಾಗಿ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಎಸ್ಆರ್ ಕುಬೇರ ಶೆಟ್ಟಿ, ಎಸ್ ಟಿ ವೇಣುಗೋಪಾಲ ಶೆಟ್ಟಿ, ಈ ಸೂಬ್ ಸಾಹೇಬ್,H ಹೊನ್ನುರ ಪ್ಪ, Bಅಬ್ದುಲ್ ಸಲಾಂ, ತಿರುಮಲರಾವ್,ಶ್ರೀಮತಿ ವೆಂಕಟಮ್ಮ,ಬಸಮ್ಮ, ಸಿ ರೂಪ,ಅರವಿಂಡಮ್ಮ,ವೇದಾವತಿ, ಸುಭದ್ರಮ್ಮ, ಪಾರ್ವತಮ್ಮಮತ್ತು ಇತರರು ಭಾಗವಸಿದ್ದದರು