ಚಿತ್ರದುರ್ಗ ನಗರದ ಸಮಸ್ತ ಭಕ್ತಾದಿಗಳೇ ಶ್ರೀ ಶನೇಶ್ವರ ಸ್ವಾಮಿ ಲೋಕಕಲ್ಯಾಣ ಟ್ರಸ್ಟ್ ಐಯು ಡಿಪಿ ಲೇಔಟ್ ಮೇಲ್ಬಾಗ ಸೂರ್ಯಪುತ್ರ ನಗರ ಇವರ ವತಿಯಿಂದ ಈ ತಿಂಗಳ ಶನಿವಾರ 12ನೇ ತಾರೀಖಿನಂದು ಶ್ರೀ ಶನೇಶ್ವರ ಸ್ವಾಮಿಯ ಕಾರ್ತಿಕದಿಪೋತ್ಸವ ನಡೆಯಲಿದ್ದುಇದರ ಸಂಪೂರ್ಣ ವಿಳಾಸ ಐಯುಡಿಪಿ ಲೇಔಟ್ ಬಳಿ ಇರುವ ಕೆ ಹೆ ಚ್ ಬಿ ಕಾಲೋನಿಯ ಮೇಲ್ಭಾಗದ ಇದರ ಸುಂದರ ತಾಣದಲ್ಲಿ ವಿಶಾಲವಾದ ಆವರಣದಲ್ಲಿ ಶ್ರೀ ಶನೇಶ್ವರ ಸ್ವಾಮಿಯ ದೇವಾಲಯ ನಿರ್ಮಾಣಗೊಂಡಿದೆ. ಪ್ರತಿ ವರ್ಷದಂತೆ ಈ ತಿಂಗಳ 12ನೇ ತಾರೀಖಿನ ಶನಿವಾರದಂದು ಕಾರ್ತಿಕದಿಪೋತ್ಸವ ನಡೆಯಲಿದ್ದು ಅದರ ಅಂಗವಾಗಿ ಮುಂಜಾನೆ 6:00 ಗಂಟೆಗೆ ಅಭಿಷೇಕ ಬಳಿಕ 7.30 ಕ್ಕೆ ನವಗ್ರಹ ಹೋಮ ಹಾಗೂ ಅದೇ ದಿನ ಸಂಜೆ 5.30ಕ್ಕೆ ಕೆಂಡಾರ್ಚನೆ ನಂತರ 6.30 ಕ್ಕೆ ಕಾರ್ತಿಕದೀಪೋತ್ಸವ ನಂತರ ಮಹಾಮಂಗಳಾರತಿ ಬಳಿಕ 7:00 ರಿಂದ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸಲಾಗಿದೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಉಳಿದ ನಿರ್ಮಾಣ ಕಾರ್ಯಕ್ಕೆ ಭಕ್ತರು ಉದಾರವಾದ ದೇಣಿಗೆ ಮತ್ತು ಕಾಣಿಕೆಯನ್ನು ಸಲ್ಲಿಸಲು ಸಂಕಲ್ಪಿಸಲಾಗಿದೆ ಕಾಣಿಕೆ ಸಲ್ಲಿಸಲು ಈ ಫೋನ್ ನಂಬರ್ 9901254020, 9845562199, 9448439315 ಸಂಪರ್ಕಿಸಿ ರಸೀದಿ ಪಡೆಯತಕದ್ದು. ಈ ಸುಂದರ ತಾಣದಲ್ಲಿ ಶ್ರೀ ಶನೇಶ್ವರ ಸ್ವಾಮಿ ಲೋಕಕಲ್ಯಾಣ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಬೃಹತ್ತಾದ ದೇವಾಲಯವೇ ಶನೇಶ್ವರ ಸ್ವಾಮಿ ದೇವಾಲಯ ಇನ್ನೂ ಸರಳ ಮತ್ತು ನಿಖರ ವಿಳಾಸವೆಂದರೆ ಪಂಚಾಚಾರ್ಯ ಕಲ್ಯಾಣ ಮಂಟಪದ ಎದುರಿಗಿರುವ ರಸ್ತೆ ಮಾರ್ಗವಾಗಿ ಆರ್ಟ್ಸ್ ಕಾಲೇಜಿನ ಹಿಂಭಾಗದ ರಸ್ತೆಯಲ್ಲಿ ಸಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗ ಮಾರ್ಗದಿಂದ ಮುಂದೆ ಬಂದು ಬಲಬಾಗಿ ತಿರುಗಿ ನೇರವಾಗಿ ಬಂದರೆ ಎತ್ತರವಾದ ಸ್ಥಳದಲ್ಲಿ ಇರುವುದೇ ಶನೇಶ್ವರ ಸ್ವಾಮಿ ದೇವಸ್ಥಾನ. ವಿಶೇಷ ಸೂಚನೆ -ಬರುವಾಗ ಭಕ್ತದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಪಾಡಿ ಈ ಕಾರ್ಯಕ್ರಮವನ್ನು ಯಶಸ್ವಿಗಳಿಸಬೇಕೆಂದು ಟ್ರಸ್ಟಿನ ಅಧ್ಯಕ್ಷರಾದ vgs ವಿರುಪಾಕ್ಷಪ್ಪ (ರಾಜಣ್ಣ ) ರವರು ಪ್ರಕಟಣೆ ಮುಖಾಂತರ ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ