ಶಿಕ್ಷಣದಿಂದ ಪ್ರಜ್ಞಾವಂತ ಭೋವಿ ಸಮಾಜ ನಿರ್ಮಿಸಿದ ಶ್ರೇಯಸ್ಸು ಮಂಜರಿ ಹನುಮಂತಪ್ಪರವರಿಗೆ ಸಲ್ಲುತ್ತದೆ :: ಜಗದ್ಗುರು ಡಾ.ಶಾಂತವೀರ ಸ್ವಾಮೀಜಿ

ಸಮಸಮಾಜ ನಿರ್ಮಾಣದ ಮೊದಲ ಜಾಗೃತಿ ಹೆಜ್ಜೆ ಶಿಕ್ಷಣವಾಗಿದೆ. ಶಿಕ್ಷಣದಿಂದ ಯಾರನ್ನೂ ವಂಚಿತರನ್ನಾಗಿ ಮಾಡಬಾರದು. ಶಿಕ್ಷಣ, ಭೋವಿ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿ ಸಾಮಾಜಿಕ ಸ್ಥಿತಿ, ಆರ್ಥಿಕ ಸುಧಾರಣೆ, ಮತ್ತು ರಾಜಕೀಯ ಸ್ವಾತಂತ್ರ್ಯ ಪಡೆಯಬಹುದೆಂಬ ಅಭಿಲಾಷೆಯಿಂದ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದರು ದಿವಂಗತ ಮಂಜರಿ ಹನುಮಂತಪ್ಪರವರು ಎಂದು ಕುಂಚಿಟಿಗ ಗುರುಪೀಠದ ಜಗದ್ಗುರು ಡಾ.ಶಾಂತವೀರ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠದಿಂದ ಹಮ್ಮಿಕೊಂಡಿದ್ದ ಮಂಜರಿ ಹನುಮಂತಪ್ಪರವರ ಸ್ಮರಣೋತ್ಸವದ ಸಾನಿಧ್ಯವಹಿಸಿ ಮಾತನಾಡಿದ ಅವರು ಶಿಕ್ಷಣ ಪಡೆದು ಹೋರಾಟ ನಡೆಸುವ ಸಮುದಾಯಗಳು ಫಲಶೃತಿಯನ್ನು ಕಾಣುತ್ತದೆ. ಶಿಕ್ಷಣದಿಂದ ಪ್ರಜ್ಞಾವಂತ ಭೋವಿ ಸಮಾಜ ನಿರ್ಮಿಸಿದ ಶ್ರೇಯಸ್ಸು ಮಂಜರಿ ಹನುಮಂತಪ್ಪರವರಿಗೆ ಸಲ್ಲುತ್ತದೆ. ಭೋವಿ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಒಂದೊಂದು ಕೊಠಡಿಯನ್ನು ಕಟ್ಟಿಸುವುದರ ಮೂಲಕ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರಿಗೆ ಸಹಕಾರ ನೀಡಿ, ಮಂಜರಿ ಹನುಮಂತಪ್ಪರವರ ಋಣ ತೀರಿಸುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.

ಭೋವಿಗುರುಪೀಠದ ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಮಾತಾನಾಡಿ ಭೋವಿ ಸಮಾಜದ ಶೈಕ್ಷಣಿಕ ಹಾಗೂ ಸಾಮಾಜಿಕ ಸುಧಾರಕ ಮಂಜರಿ ಹನುಮಂತಪ್ಪರವರು. ಮಧ್ಯಕರ್ನಾಟಕದ ಪ್ರತಿ ಭೋವಿ ಬಾಲಕ ಮತ್ತು ಬಾಲಕಿಯರಿಗೆ ಸೂಕ್ತ ಹಾಸ್ಟೆಲ್ ಸೌಲಭ್ಯ ಕಲ್ಪಿಸಿ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ತುಡಿತ ದಿ.ಮಂಜರಿ ಹನುಮಂತಪ್ಪ ಅವರಲ್ಲಿತ್ತು, ಅದಕ್ಕಾಗಿ ಅವರು ಜೀವನವಿಡೀ ಶ್ರಮಿಸಿದರು. ಶಿಕ್ಷಣದ ಮೂಲಕ ಭೋವಿ ಕುಟುಂಬಗಳಲ್ಲಿ ನಂದಾದೀಪ ಬೆಳಗಿದವರು. ಶಿಕ್ಷಣದ ಮಹತ್ವವನ್ನು ಮಂಜರಿ ಹನುಮಂತಪ್ಪರವರು ಅರಿತ್ತಿದ್ದರಿಂದ 60-70ರ ದಶಕದಲ್ಲಿ ಗ್ರಾಮ, ಕಾಲೋನಿ, ಹಟ್ಟಿ ಹಳ್ಳಿ, ಹಳ್ಳಿಯಲ್ಲಿ ಸುತ್ತಾಡಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ, ಹಾಸ್ಟೆಲ್ ಸೌಲಭ್ಯವನ್ನು ಭೋವಿ ವಿದ್ಯಾರ್ಥಿಗಳಿಗೆ ದಕ್ಕಿಸಿಕೊಡಲು ಶ್ರಮಿಸಿದ್ದಾರೆ. ಭೋವಿ ಸಮಾಜಕ್ಕೆ ಶಿಕ್ಷಣವೇ ಆಸ್ತಿ, ಶಕ್ತಿ ಎಂಬ ಮುಂದಾಲೋಚನೆಯಿಂದ ಸಮಾಜಕ್ಕೆ ಭದ್ರ ಅಡಿಪಾಯ ಹಾಕಿದರು. ಅವರ ಜ್ಞಾನ ದಾಸೋಹದಿಂದ ಅನೇಕ ಕುಟುಂಬಗಳಲ್ಲಿ ನಂದಾದೀಪ ಹಚ್ಚಿದ್ದಾರೆ. ಇಂದಿರ ಗಾಂಧಿ ಕಾಲದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯ ತೆಗೆದುಹಾಕಬೇಕೆಂಬ ಹುನ್ನಾರದಿಂದ ದೆಹಲಿ ಮಟ್ಟಕ್ಕೆ ಹೋಗಿ ಭೋವಿಗಳನ್ನು ರಕ್ಷಣೆ ಮಾಡಿದವರು. ಭೋವಿ ಸಮಾಜದ ಮೊದಲ ರಾಜ್ಯ ಸಂಘದ ಸ್ಥಾಪಕರು ಹಾಗಿದ್ದರೆ. ಅವರು ಭೋವಿರತ್ನ. ಅವರ ಸರ್ವಾಂಗೀಣ ಕಾರ್ಯ ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಲಕ್ಷ್ಮಣ, ಹೊಳಲ್ಕೆರೆ ತಾಲ್ಲೂಕಿನ ಸಂಘದ ಅಧ್ಯಕ್ಷ ಡಿ.ಸಿ.ಮೋಹನ, ಹಿರಿಯೂರು ಕೃಷ್ಣಪ್ಪ, ಖಜಾಂಚಿ  ಈ . ಮಂಜುನಾಥ, ಪೇಂಟ್ ತಿಮ್ಮಣ್ಣ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗೌನಳ್ಳಿ ಗೋವಿಂದಪ್ಪ, ಪ್ರಾಚಾರ್ಯ ಭೀಮಭೋವಿ, ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಶಿವಾಜಿ ಬಂಡಿವಡ್ಡರ್, ಬಾಗಲಕೋಟೆಯ ಯಲ್ಲಪ್ಪ ಕೆರೂರು, ಸಿಂಧನೂರು ವಕೀಲ ಶರಣಬಸವ, ಬೆಂಗಳೂರಿನ ಮಹಾಂತೇಶ, ಎನ್.ಪಿ.ವೀರೇಶ್ ಹಾಗೂ ಎಸ್.ಜೆ
ಎಸ್.ಸಮೂಹ ಸಂಸ್ಥೆಯ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

Leave a Reply

Your email address will not be published.