ಚಿತ್ರದುರ್ಗ,ನಿತ್ಯವಾಣಿ : ಮುರುಘಾ ಮಠದ ಅನುಭವ ಮಂಟಪದಲ್ಲಿ ಮಾ.14 ರ ಬೆಳಗ್ಗೆ 11ಕ್ಕೆ ಶರಣ ಸೇನೆ ಉದ್ಘಾಟನೆ ಹಾಗೂ ಯುವಶಕ್ತಿಯ ಅನಾವರಣ ಸಮಾರಂಭ ಆಯೋಜಿಸಲಾಗಿದೆ , ರಾಜ್ಯದ್ಯಂತ ಶರಣ ಸೇನೆ ಬೆಳೆಸಿ ಸಮಾಜಮುಖಿ ಕೆಲಸ ಮಾಡಲು ವೇದಿಕೆ ಪ್ರಾರಂಭ ಕ್ಕೆ ಚಾಲನೆ,
ಈ ಕಾರ್ಯಕ್ರಮಕ್ಕೆ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆವಹಿಸಲಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇನೆ ಉದ್ಘಾಟಿಸಲಿದ್ದಾರೆ. ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ ಶರಣ ಸೇನೆ ಲೋಗೋ ಅನಾವರಣಗೊಳಿಸಲಿದ್ದಾರೆ. ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಮಧ್ಯಾಹ್ನ 3 ಕ್ಕೆ ಡಾ.ಶಿವಮೂರ್ತಿ ಮುರುಘಾ ಶರಣರು ತ್ರಿವಿಧ ದಾಸೋಹಿಗಳು ಶ್ರೀ ಮುರುಘಾರಾಜೇಂದ್ರ ಬೃಹನ್ಮಠ ಇವರಿಂದ ಸಮಕಾಲೀನ ಚಿಂತನೆ ಕುರಿತು ಎರಡನೇ ಅಧಿವೇಶನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಹನುಮಲಿ ಷಣ್ಮುಖಪ್ಪ, ಪಟೇಲ್ ಶಿವಕುಮಾರ್ ಭಾಗವಹಿಸಲಿದ್ದಾರೆ.