ಭಾರತದಲ್ಲಿ ಅನೇಕ ಜನಪ್ರಿಯ ದೇವಾಲಯಗಳಿವೆ.ಅವುಗಳಲ್ಲಿ ಕೆಲವು ಪವಾಡಗಳಿಗೆ ಜನಪ್ರಿಯವಾಗಿವೆ. ಮಹಾದೇವನ ಪವಾಡ ನೋಡಲು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ದಿನಕ್ಕೆ ಹಲವು ಬಾರಿ ಬಣ್ಣ ಬದಲಾಯಿಸುವ ಶಿವಲಿಂಗದ ಬಗ್ಗೆ ಮಾಹಿತಿ ಇಲ್ಲಿದೆ..
ದಿನಕ್ಕೆ ಹಲವು ಬಾರಿ ತನ್ನ ಬಣ್ಣವನ್ನು ಬದಲಾಯಿಸುವ ಶಿವಲಿಂಗ ಅಚಲೇಶ್ವರ ಮಹಾದೇವ್ ದೇವಸ್ಥಾನ ರಾಜಸ್ಥಾನದ ಧೌಲ್ಪುರದಲ್ಲಿದೆ. ಈ ದೇವಾಲಯದ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣವನ್ನು ಬದಲಾಯಿಸುತ್ತದೆ. ಬೆಳಿಗ್ಗೆ ಶಿವಲಿಂಗ ಬಣ್ಣ ಕೆಂಪು ಆದರೆ, ಮಧ್ಯಾಹ್ನ ಕೇಸರಿ ಮತ್ತು ಸಂಜೆ ಶಿವಲಿಂಗ ಶ್ಯಾಮಾ ಬಣ್ಣವಾಗುತ್ತದೆ
ನರ್ಮದೇಶ್ವರ ಮಹಾದೇವ್ ನ ದೇವಾಲಯವು ಯುಪಿ ಯ ಲಖಿಂಪುರ್ ಖೇರಿ ನಗರದಲ್ಲಿದೆ. ಈ ದೇವಾಲಯದ ಶಿವಲಿಂಗ ಕೂಡ ಅದರ ಬಣ್ಣವನ್ನು ಬದಲಾಯಿಸುವುದು ವಾಡಿಕೆ.
ಕಾಳೇಶ್ವರ ಮಹಾದೇವ್ ದೇವಸ್ಥಾನವು ಉತ್ತರ ಪ್ರದೇಶದ ಘಟಂಪೂರ್ ತಹಸಿಲ್ ನಲ್ಲಿದೆ. ಈ ದೇವಾಲಯದ ಶಿವಲಿಂಗ ಸೂರ್ಯನ ಕಿರಣಗಳಿಂದಾಗಿ ಅದರ ಬಣ್ಣವನ್ನು ಮೂರು ಬಾರಿ ಬದಲಾಯಿಸುವುದು ವಾಡಿಕೆ.
ಲೀಲೌತಿ ನಾಥ ಶಿವ ದೇವಾಲಯ ಯುಪಿಯ ಪಿಲಿಭಿತ್ ನಗರದಲ್ಲಿದೆ. ಈ ಶಿವಲಿಂಗ ದಿನಕ್ಕೆ ಮೂರು ಬಾರಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ. ಬೆಳಿಗ್ಗೆ, ಶಿವಲಿಂಗ ಬಣ್ಣವು ಕಪ್ಪು ಆಗುತ್ತದೆ, ಮಧ್ಯಾಹ್ನ ಕಂದು ಬಣ್ಣಕ್ಕೆ ಬರುತ್ತದೆ ಮತ್ತು ರಾತ್ರಿಯಲ್ಲಿ ಶಿವಲಿಂಗ ಬಣ್ಣವು ತಿಳಿ ಬಿಳಿ ಆಗುತ್ತದೆ.
ಬಿಹಾರದ ಪಗೋಡಾ ನಳಂದಾ ನಗರದಲ್ಲಿನ ದೇವಾಲಯದ ಶಿವಲಿಂಗದ ಬಣ್ಣವೂ ಸೂರ್ಯನ ಬೆಳಕಿಗೆ ಅನುಗುಣವಾಗಿ ಬದಲಾಗುತ್ತಲೇ ಇರುತ್ತದೆ.