ಶಿವರಾತ್ರಿ ಆಚರಣೆ ವೈಜ್ಞಾನಿಕ ರೀತಿಯಲ್ಲಿ ಆಚರಣೆಯಾಗಬೇಕಿದೆ :: ಬೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು

ಚಿತ್ರದುರ್ಗ ಮಾ. 10
ಶಿವರಾತ್ರಿ ಸಿನಿಮಾ ರಾತ್ರಿಯಾಗದೇ ನಿಜವಾಧ ಅರ್ಥದಲ್ಲಿ ಶಿವನ ಆರಾಧನೆ ಮಾಡುವುದರ ಮೂಲಕ ಶಿವರಾತ್ರಿ ಆಚರಣೆಯಾಗಬೇಕಿದೆ ಎಂದು ಸಾಣೇಹಳ್ಲಿಯ ಶ್ರೀ ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ನಗರದ ಕಬೀರಾನಂದ ಆಶ್ರಮದಲ್ಲಿ ಮಾ.7 ರಿಂದ ಪ್ರಾರಂಭವಾಗಿರುವ 91ನೇ ಶಿವನಾಮ ಮಹೋತ್ಸದವ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಶಿವಾರಾತ್ರಿಯನ್ನು ಶಿವನ ನಾಮಸ್ಮರಣೆಯನ್ನು ಮಾಡುತ್ತಾ ಕಳೆಯಬೇಕಿದೆ ಇದರೊಂದಿಗೆ ಉತ್ತಮವಾದ ಪುಸ್ತಕಗಳನ್ನು ಓದುವುದರ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸುವ ಕಾರ್ಯವನ್ನು ಈ ಪುಣ್ಯದ ದಿನದಂದು ಮಾಡಬೇಕಿದೆ ಎಂದು ಕರೆ ನೀಡಿದರು.
ಶಿವರಾತ್ರಿ ದಿನದಂದು ಎಚ್ಚರವಾಗಿ ಇರಬೇಕೆಂದು 2-3 ಸಿನಿಮಾವನ್ನು ನೋಡುವುದು ಅಥವಾ ಕ್ಲಬ್‍ಗೆ ಹೋಗುವಂತ ಕೆಲಸ ಮಾಡುತ್ತಾ ಶಿವರಾತ್ರಿಯನ್ನು ಕಳೆಯಬಾರದು, ನಿಜವಾದ ಅರ್ಥದಲ್ಲಿ ಶಿವನ ಸರಣೆ ಆರಾಧನೆ ಮಾಡುತ್ತಾ ಉತ್ತಮವಾದ ಗ್ರಂಥಗಳನ್ನು ಓದುತ್ತಾ, ಎಷ್ಟು ಸಮಯ ಎಚ್ಚರವಾಗಿ ಇರುತ್ತೊಂದು ಅಷ್ಟುರವರೆಗೆ ಎಚ್ಚರವಾಗಿದ್ದು ತದ ನಂತರ ಮಲಗುವ ಕಾರ್ಯವನ್ನು ಮಾಡಬಹುದಾಗಿದೆ ಇದು ಬಿಟ್ಟು ಬೇರೆ ಕಾರ್ಯವನ್ನು ಮಾಡಬಾರದು ಎಂದು ಭಕ್ತ ಸಮೂಹಕ್ಕೆ ಶ್ರೀಗಳು ಕಿವಿ ಮಾತು ಹೇಳಿದರು.
ಶಿವರಾತ್ರಿ ಎಂದು ಉಪವಾಸ ಮಾಡಬೇಕೆಂದು ಪದ್ದತಿಯಿದೆ ಆದರೆ ನಿಜವಾದ ಅರ್ಥದಲ್ಲಿ ಉಪವಾಸ ಎಂದರೆ ಉಪ ಎಂದರೆ ಹತ್ತಿರ, ವಾಸ ಎಂದರೆ ಇರುವುದು ಎಂದು ಶಿವನ ಹತ್ತಿರ ಇರುವುದೇ ಉಪವಾಸ ಈ ಅರ್ಥವನ್ನು ತಿಳಿಯಬೇಕಿದೆ ಆಗ ಶಿವರಾತ್ರಿ ನಿಜವಾದ ಅರ್ಥದಲ್ಲಿ ಆಚರಣೆಯಾಗುತ್ತದೆ ಎಂದ ಶ್ರೀಗಳು, ಶಿವಲಿಂಗಾನಂದ ಶ್ರೀಗಳು ಹಲವಾರು ವರ್ಷಗಳಿಂದ ಈ ರೀತಿಯಾದ ಕಾರ್ಯಕ್ರಮವನ್ನು ಮಾಡುತ್ತಾ ಸಾತ್ವಿಕವಾದ ವಾತಾವರಣವನ್ನು ಬಿತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ. ಹಲವಾರು ಮಠಾಧೀಶರು ಸಹಾ ಸಾತ್ವಿಕ ವಾತಾವರಣವನ್ನು ಬಿತ್ತುತ್ತಿಲ್ಲ ಎಂದು ತಿಳಿಸಿದರು.
ಇಂದಿನ ದಿನಮಾನದಲ್ಲಿ ಮೀಸಲಾತಿ ಅಗತ್ಯವಾಗಿರುವುದು ಯಾರು ನಿಜವಾಗಿ ನೋವನ್ನು ಅನುಭವಿಸುತ್ತಿದ್ದಾರೂ, ಸಾಮಾಜಿಕವಾಗಿ ಹಿಂದುಳಿದಿದ್ದು ಇದುವರೆವಿಗೂ ಸಮಾಜದಲ್ಲಿ ಬೆರೆಯುವುದಕ್ಕೆ ಆಗುತ್ತಿಲ್ಲ ಅವರು ಅವರ ಪಾಡಿಗೆ ಹೋಗುತ್ತಿದ್ದಾರೆ ಇಂತಹರಿಗೆ ಮೀಸಲಾತಿಯ ಅಗತ್ಯ ಇದೆ. ಆದರೆ ನಮಗೂ ಮೀಸಲಾತಿ ಕೂಡಿ ಎಂದು ಸ್ವಾಮಿಗಳೇ ಪಾದಯಾತ್ರೆಯನ್ನು ಮಾಡಿದರೆ ನಿಜವಾದ ನೋವನ್ನು ಅನುಭವಿಸುತ್ತಿರುವವರನ್ನು ಮೇಲೆ ಎತ್ತಿವವರು ಯಾರು ಎಂದು ಪ್ರಶ್ನಿಸಿದ ಶ್ರೀಗಳು, ಇದರಿಂದಾಗಿ ಶರಣರು ಮೀಸಲಾತಿಯನ್ನು ಬಯಸದೇ ಕಾಯಕ ಸತ್ಯವನ್ನು ಬಯಸಿದರು, ಸಮಾಜದಲ್ಲಿನ ಜನತೆಗೆ ಕೈಒಡ್ಡಿ ಬೇಡುವುದನ್ನು ಬಿಟ್ಟಿ ದುಡಿಯವ ವೃತ್ತಿಯನ್ನು ಮೈಗೂಡಿಸಿಕೊಂಡವರಿಗೆ ಮೀಸಲಾತಿಯ ಅಗತ್ಯ ಇಲ್ಲ ಇದರಿಂದ ಜನತೆ ನೀತಿವಂತ, ಪ್ರಮಾಣಿಕವಂತರಾಗಲಿ ತಮ್ಮ ದುಡಿಮೆಯಿಂದ ಬೇರೆಯವರಿಗೆ ದಾನವನ್ನು ಮಾಡುವಂತೆ ಕಾರ್ಯವನ್ನು ಮಾಡಲಿ ಎಂದು ಹೇಳೀದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಮ್ಮ ಆರ್ಶಿವಚನದಲ್ಲಿ ಶಿವರಾತ್ರಿ ಆಚರಣೆ ವೈಜ್ಞಾನಿಕ ರೀತಿಯಲ್ಲಿ ಆಚರಣೆಯಾಗಬೇಕಿದೆ, ಹಿಂದಿನ ಕಾಲದಲ್ಲಿಯೂ ಸಹಾ ಉತ್ತಮ ರೀತಿಯಲ್ಲಿ ಅಚರಣೆಯನ್ನು ಮಾಡುತ್ತಾ ಬಂದಿದ್ದಾರೆ, ಇತ್ತೀಚಿನ ದಿನಮಾನದಲ್ಲಿ ಸ್ವಲ್ಪ ಏರುಪೇರಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೊಸದುರ್ಗದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಶ್ರೀಗಳು ಮತ್ತು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಸಾನಿಧ್ಯವಹಿಸಿದ್ದರು.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತರಾದ ಭೋಜರಾಜ್ ಮುಟಗಾರ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿಭಾಗ ಸಹ ಪ್ರಚಾರಕ್ ನವೀನ್ ಸುಬ್ರಹ್ಮಣ್ಯ, 91ನೇ ಶಿವರಾತ್ರಿ ಮಹೋತ್ಸವದ ಬಿ.ವೆಂಕಟೇಶ್, ವಾಣಿಜ್ಯೋದ್ಯಮಿಗಳಾದ ಬಿ.ಶಂಕರಮೂರ್ತಿ, ಜಿ.ಎಂ.ಜಯಕುಮಾರ್, ವೀರಶೈವ ಅರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್, ಜಿಲ್ಲಾ ಮಹಿಳಾ ಸಮಾಜದ ಅಧ್ಯಕ್ಷ ಶ್ರೀಮತಿ ಮೋಕ್ಷಾ ರುದ್ರಸ್ವಾಮಿ ನ್ಯಾಯವಾದಿ ಕುಮಾರಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.ತುಮಕೂರಿನ ನಾಟಕ ಮನೆಯ ಕಲಾವಿದರಿಂದ ಎನ್.ಆರ್.ಪ್ರಕಾಶ್ ರವರ ನಿದೇಶನದ ಹಾಸ್ಯ ನಾಟಕ ಕಾಲ ಚಕ್ರ ಪ್ರದರ್ಶನವಾಯಿತು.
ಸುಬ್ರಾಯ ಭಟ್ ವೇದಘೋಷ ವಾಚನ ಮಾಡಿದರೆ, ಶ್ರೀಮತಿ ಸುಮನ ಪ್ರಾರ್ಥಿಸಿದರು ಡಾ.ಗೀರೀಶ್ ಸ್ವಾಗತಿಸಿದರು ನಿರಂಜನ ದೇವರಮನೆ ಕಾರ್ಯಕ್ರಮ ನಿರೂಪಿಸಿದರು. ಸಪ್ತಗಿರಿ ಭಜನಾ ಮಂಡಳಿವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಮಾ. 11ರಂದು ಶಿವರಾತ್ರಿ ದಿನದಂದು ನಗರದ ರಾಜ ಬೀದಿಗಳಲ್ಲಿ ಶ್ರೀ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ ಮತ್ತು ಜಾನಪದ ಉತ್ಸವ ಕಾರ್ಯಕ್ರಮವೂ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿ ನಂತರ ಆಶ್ರಮಕ್ಕೆ ಮರಳಲಿದೆ ಇದರಲ್ಲಿ ನಾಡಿನ ವಿವಿಧ ಜಾನಪದ ಕಲಾಮೇಳಗಳು ಮತ್ತು ಮಕ್ಕಳಿಂದ ವಿವಿಧ ಗಣ್ಯರ ವೇಷಭೂಷಣಗಳು ಪ್ರದರ್ಶನವಾಗಲಿದೆ. ನಗರಸಭಾ ಸದಸ್ಯರಾದ ಬಿ.ವೆಂಕಟೇಶ್ ಉತ್ಸವಕ್ಕೆ ಚಾಲನೆ ನೀಡಿದರು.
ಸಂಜೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಕೃಷ್ಣಾ ಯಾದವ ಮಹಾ ಸಂಸ್ಥಾನದ ಶ್ರೀ ಕೃಷ್ಣಾಯಾದವಾನಂದ ಶ್ರೀಗಳ, ಬಾಗಲಕೋಟೆಯ ಕೌದೀಶ್ವರ ಮಹಾ ಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು ಹಾಗೂ ಕೂಸನೂರಿನ ತಿಪ್ಪಯ್ಯ ಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಗಾನಂದ ಶ್ರೀಗಳು ವಹಿಸಲಿದ್ದಾರೆ.
ನಗರಸಭಾ ಅಧ್ಯಕ್ಷರಾದ ಶ್ರೀಮತಿ ತಿಮ್ಮಪ್ಪ, ಸದಸ್ಯರಾದ ವೆಂಕಟೇಶ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ನಾಯ್ಡು, ಉಪ್ಪಾರ ಅಭೀವೃದ್ದಿ ನಿಗಮದ ಅಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರ್, ಜಿ.ಆರ್.ಹಳ್ಳಿಯ ನಿದೇಶಕರಾದ ಡಾ.ಎಚ್.ವಿಶ್ವನಾಥ್, ವಾಣೀಜ್ಯೋದ್ಯಮಿ ರುದ್ರಮುನಿ ವಿಹಿಂಪ ಹುಬ್ಬಳಿ ಉತ್ತರ ಪ್ರಾಂತದ ಸಹ ಕಾರ್ಯವಾಹ ಮನೋಹರ್ ಮಠದ್, ಪತಂಜಲಿ ಆಸ್ಪತ್ರೆಯ ಡಾ.ಮುಕುಂದರಾವ್, ದೇವರಾಜು ಅರಸು ವಿದ್ಯಾ ಸಂಸ್ಥೆಯ ಸಿಇಓ ರಘುಚಂದನ್ ನಿವೃತ್ತ ಅಧಿಕಾರಿಗಳಾದ ಕೆ.ಎಸ್.ಶ್ರೀನಿವಾಸಲು, ಬಿ.ಭೀಮಯ್ಯ, ಶ್ರೀಮತಿ ಕಮಲಮ್ಮ, ಸೀಡ್ ಸಂಸ್ಥೆಯ ಕಾರ್ಯದರ್ಶಿ ಎಚ್.ಶ್ರೀನಿವಾಸ್, ಅನುಪಮ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಸ್.ಭಾಸ್ಕರ್, ಸೇರಿದಂತೆ ಇತರರು ಭಾಗವಹಿಲಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀಮಠದಿಂದ ಕೂಡಮಾಡಲ್ಪಡುವ ಆರೂಢಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಶ್ರೀಮತಿ ಹನುಮವ್ವ ಗಿಡ್ಡರ ಹೊಂಕಣ ಇವರಿಗೆ ಪ್ರಧಾನ ಮಾಡಲಾಯಿತು. ವಿರೂಪಾಕ್ಷ ಆಯಿತೋಳು ಸಂಗಡಿಗರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

Leave a Reply

Your email address will not be published.