. ಚಿತ್ರದುರ್ಗ ನಗರದಲ್ಲಿ ತುರುವನೂರು ರಸ್ತೆ ಚಿತ್ರದುರ್ಗ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಎದುರು ಪ್ರಾರಂಭವಾಗಿರುವ ಈ ಶೋರೂಮ್ ಅನ್ನು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಉದ್ಘಾಟಿಸುತ್ತ ಈ ನಮ್ಮ ನಗರದಲ್ಲಿ ಪ್ರಾರಂಭವಾಗಿರುವುದು ತುಂಬಾ ಖುಷಿ ಕೊಟ್ಟಿದೆ, ಏಕೆಂದರೆ ಪೆಟ್ರೋಲ್ ರಹಿತ ವಾಹನಗಳುಪ್ರಕೃತಿಯಲ್ಲಿ ಪರಿಸರವನ್ನು ಹಾಳು ಮಾಡದೆ ಮಾನವರಿಗೆ ಆರೋಗ್ಯ ದೃಷ್ಟಿಯಿಂದ ಅವಶ್ಯವಾಗಿದೆ, ಈ ದೃಷ್ಟಿಯಿಂದ ಎಲ್ಲರೂ ಇದರ ಅನುಕೂಲಗಳನ್ನು ಪಡೆದು ಉಪಯೋಗಿಸಿ . ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಹೆಚ್ಚು ಗಮನಹರಿಸುತ್ತಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ನಿರ್ದಿಷ್ಟ ಪ್ರಮಾಣದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಎಲೆಕ್ಟ್ರಿಕ್ ಸ್ಕೂಟರ್‍ಗಳ ಖರೀದಿ ಭರಾಟೆಯು ಜೋರಾಗಿದೆ.ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ತಗ್ಗಿಸಿ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ.ಈ ಅಂಗಡಿಯ ಮಾಲೀಕತ್ವವನ್ನು ವಡ್ಡರ ಸಿದ್ದವನಹಳ್ಳಿ ಪ್ರಕಾಶ್ ಈ ಶೋರೂಮ್ ಅನ್ನು ಪ್ರಾರಂಭ ಮಾಡಿದ್ದು ಹೆಚ್ಚಿನ ರೀತಿಯಲ್ಲಿ ಬೆಳವಣಿಗೆ ಆಗಲಿ ಎಂದು ಶುಭ ಹಾರೈಸಿದರು.
ಈ ಸಮಯದಲ್ಲಿ ಕಂಪನಿಯ ಟೆಕ್ನಿಕಲ್ ಹೆಡ್ ಗಿರೀಶ್ ಗೋಕುಲೆ ಮಾತನಾಡುತ್ತಾ, ಈ ಕಂಪನಿಯ ಹೆಸರು ವೀಸ್ಟಾರ್ ಇಂಡಿಯಾ ಕನೆಕ್ಟಿಂಗ್ ಕಾರ್ಪೊರೇಷನ್ ಆಗಿದ್ದು,ಹೆಡ್ ಆಫೀಸ್ ಪುನಾ ಹೊಂದಿದ್ದು ಮ್ಯಾನುಫ್ಯಾಕ್ಚರಿಂಗ್ ತಮಿಳುನಾಡಿನ ಪಳನಿ ಹಾಗೂ ಗುಜರಾತಿನ ಜಾನ್ ನಗರ ಇಲ್ಲಿ ತಯಾರಾಗುತ್ತವೆ ಇದರ ಮಾಲೀಕರು ರಾಜಕುಮಾರ್ ಮೆತೆಲಿ , ಈ ಕಂಪನಿ 2020 ಫೆಬ್ರವರಿ ಪ್ರಾರಂಭವಾಗಿದ್ದು ಕರ್ನಾಟಕದಲ್ಲಿ ಇದು 10ನೇ ಶೋರೂಮ್ ಭಾರತ ದೇಶದಲ್ಲಿ 51 ಶೋರೂಮ್ ಗಳಿವೆ ಈಗ ಮೂರು ಮಾಡೆಲ್ಲುಗಳು ಚಾಲ್ತಿಯಲ್ಲಿವೆ. ಇನ್ನು ಆರು ಮಾಡಲು ಪ್ರಾರಂಭವಾಗಲಿದೆ ಎಂದು ತಿಳಿಸಿದರು, ಈ ಶೋರೂಮ್ ನ ಮಾಲೀಕರಾದ ಮಧು ಪ್ರಕಾಶ್ ಮಾತನಾಡುತ್ತಾ ಈ ನಮ್ಮ ಶೋರೂಮ್ ಹೆಸರು ಶ್ರೀನಿವಾಸ ಏಜೆನ್ಸಿ ಎಂದು ನಾವು ಚಿತ್ರದುರ್ಗ ಜಿಲ್ಲೆ ಡೀಲರ್ ಶಿಪ್ ಅನ್ನು ಪಡೆದಿದ್ದು. ಮೊದಲನೆಯದಾಗಿ ಚಿತ್ರದುರ್ಗದಲ್ಲಿ ಪ್ರಾರಂಭ ಮಾಡಿ ಮತ್ತು ಇನ್ನು ಐದು ತಾಲೂಕುಗಳಲ್ಲಿ ಪ್ರಾರಂಭ ಮಾಡುತ್ತೇವೆ ನಮ್ಮಲ್ಲಿ ಕಂಪನಿಯ ಎಲ್ಲಾ ಮಾಡಲೆ ಗಳು ಯಾವಾಗಲೂ ಸಿಗುತ್ತವೆ ಎಂದು ತಿಳಿಸಿದರು,ಇದೇ ಸಂದರ್ಭದಲ್ಲಿ ಪಿಎಸ್ಐ ಲೋಕೇಶ್ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಹಾಗೂ ನಾಗರಿಕರು, ಗ್ರಹಕರು ಇದ್ದರು