ನಿತ್ಯವಾಣಿ, ಚಿತ್ರದುರ್ಗ : ಚಿತ್ರದುರ್ಗ ನಗರದಲ್ಲಿ ಇಂದು ಸಂಜೆ ಎಸ್ ಬಿ ಎಂ ( ಕಿತ್ತೂರು ರಾಣಿ ಚೆನ್ನಮ್ಮ) ಸರ್ಕಲ್ ನಲ್ಲಿ ಕರುನಾಡ ಕಣ್ಮಣಿ ಕನ್ನಡ ಶ್ರೀಗಂಧ ಪುನೀತ್ ರಾಜಕುಮಾರ್ ರವರ ವೀರಶೈವ ಲಿಂಗಾಯತ ಯುವ ವೇದಿಕೆ ಚಿತ್ರದುರ್ಗ ವತಿಯಿಂದ ಭಾವಚಿತ್ರವನ್ನು ಪೂಜಿಸಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು, ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಎಚ್ ಎಂ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಎಂ ಎಸ್ ಗಿರೀಶ್, ಗೌರವ ಅಧ್ಯಕ್ಷ ಗಂಗಾಧರ್, ಜಿತೇಂದ್ರಕುಮಾರ್ ಹುಲಿಕುಂಟೆ,ಗ್ರಾಮ ಪಂಚಾಯಿತಿ ಸದಸ್ಯ ಗಾರೆಹಟ್ಟಿ ತಿಪ್ಪೇಸ್ವಾಮಿ, ವೀರಭದ್ರಪ್ಪ, ಪರಮೇಶ್ ಪಮ್ಮಿ, ಕುಮಾರಸ್ವಾಮಿ, ನಗರ ಅಧ್ಯಕ್ಷ ಶಿವಕುಮಾರ್, ಜಾಲಿಕಟ್ಟೆ ದೇವರಾಜ್, ನಂದಕುಮಾರ, ಇನ್ನು ಇತರರು ಪುನೀತ್ ರಾಜ್ ಕುಮಾರ್ ರವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು