ಚಿತ್ರದುರ್ಗ, ನಿತ್ಯ ವಾಣಿ, ಮಾ 15 – ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ ಆಶ್ರಯದಲ್ಲಿ ಶ್ರೀ ವಿಶ್ವಗುರು ಬಸವಣ್ಣನವರ ಪ್ರಾರ್ಥನೆ ಹಾಗೂ ರಾಷ್ಟ್ರೀಯ ಬಸವದಳದ ಪೀಠಾಧ್ಯಕ್ಷರಾದ ಲಿಂಗೈಕ್ಯ ಶ್ರೀಮಾತೆ ಮಹಾದೇವಿಯವರ ಎರಡನೇ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿತು, ರಾಷ್ಟ್ರೀಯ ಬಸವದಳದ ಪ್ರಮುಖರಾದ ಈರಮ್ಮ ಇವರು ಕಾರ್ಯಕ್ರಮ ನೆರವೇರಿಸಿಕೊಟ್ಟರು, ಪತ್ರಕರ್ತರಾದ ಗೊಂಡಬಾಳ ಬಸವರಾಜ್ ಶಿವ ಧ್ವಜಾರೋಹಣ ಮಾಡಿದರು, ಎಸ್,ಟಿ, ನವೀನ್ ಕುಮಾರ್ ರವರು ಜ್ಯೋತಿ ಬೆಳಗಿಸಿದರು, ರಂಗನಿರ್ದೇಶಕ ಕೆ. ಪಿ ಎಂ ಗಣೇಶಯ್ಯ ಪೂಜಾ ಪುಷ್ಪನಮನ ಸಲ್ಲಿಸಿದರು, ಈ ಸಂದರ್ಭದಲ್ಲಿ ಗೊಂಡಬಾಳು ಬಸವರಾಜ್ ಅವರಿಗೆ ಬಸವ ದಳ ಹಾಗು ಲಿಂಗಾಯಿತ ಮಹಾಸಭಾ ಚಿತ್ರದುರ್ಗ ಜಿಲ್ಲಾ ಮಾರ್ಗದರ್ಶಕರನ್ನಾಗಿ ಹಾಗೂ ಎಸ್. ಟಿ. ನವೀನ್ ಕುಮಾರ್ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪ್ರಕಟಣೆ ಗೊಳಿಸಿದರು,
ಬಸವದಳದ ಜಿಲ್ಲಾಧ್ಯಕ್ಷ ಮನೋಹರ, ಕಾರ್ಯದರ್ಶಿ ಕಲ್ಮೇಶ್ ಲಿಂಗಾಯತ , ಶರಣೆ ಅಕ್ಕಮಹಾದೇವಿ, ಲಿ. ಮ. ಅಧ್ಯಕ್ಷ ಶಂಕ್ರಪ್ಪ ಹಾಗೂ ಶರಣ ಶರಣೆಯರು ಉಪಸ್ಥಿತರಿದ್ದರು, ಶರಣೆ ಸುಧಾ ರವರು ಪ್ರಾಸ್ತಾವಿಕವಾಗಿ ಬಸವದಳ ಆಗು ಹೋಗುವಿನ ಮತ್ತು ಮುಂದುವರೆದ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು