ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ಹಾವನ್ನ ಕಂಡ್ರೆ ಸಾಕು ಮಾರುದ್ದ ಓಡುವ ಜನರ ಸಂಖ್ಯೆಯೇ ಹೆಚ್ಚು. ‘ಹಾವು’ ಅಂದ್ರೆ ನಿದ್ರೆಯಲ್ಲೂ ಹಲವರು ಬೆಚ್ಚಿಬೀಳ್ತಾರೆ. ಆದರೆ, ಇಲ್ಲೊಬ್ಬ ವೃದ್ಧ ಹಾವಿನ ಜೊತೆ ಚೆಲ್ಲಾಟವಾಡುತ್ತ ಆ ಹಾವಿನಿಂದಲೇ ಪ್ರಾಣಬಿಟ್ಟಿದ್ದಾನೆ. ಇಂತಹ ಘಟನೆ ರೋಣ ಪಟ್ಟಣದಲ್ಲಿ ಸೋಮವಾರ ಸಂಭವಿಸಿದೆ. ಮಕ್ತುಮ್ ಸಾಬ ರಾಜೆಖಾನ್ (75) ಮೃತ ದುರ್ದೈವಿ.ಹಲವು ವರ್ಷಗಳಿಂದ ಹಾವು ಹಿಡಿಯುವದರಲ್ಲಿ ಈ ವೃದ್ಧ ನಿಪುಣನಾಗಿದ್ದ. ಇಂದು ತಹಸೀಲ್ದಾರ್​ ಕಚೇರಿ ಆವರಣದಲ್ಲಿ ಹಾವು ಕಾಣಿಸಿಕೊಂಡಿತ್ತು. ಅದನ್ನು ಹಿಡದವ ಸುಮ್ಮನೆ ಕಾಡಿಗೆ ಬಿಡುವ ಬದಲು ಹಾವಿನ್ನ ಕೈಯಲ್ಲಿ ಹಿಡಿದುಕೊಂಡು ಆಟವಾಡಿದ್ದ.

ಈ ವೇಳೆ ವೃದ್ಧನಿಗೆ ಹಾವು ಕಚ್ಚಿತು. ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ವೃದ್ಧ ಬದುಕುಳಿಯಲಿಲ್ಲ. ರೋಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.