ಆಶ್ರಮ ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿದ್ದ ಹಲವಾರು ಉಪಯುಕ್ತವಾದ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದೆ :: ಜಿಲ್ಲಾ ರಕ್ಷಣಾಧಿಕಾರಿ ಶ್ರೀಮತಿ ಜಿ. ರಾಧಿಕಾ

ಚಿತ್ರದುರ್ಗ ಮಾ. 11
ಮಕ್ಕಳಿಗೆ ಸಂಸ್ಕಾರ, ಶಿಕ್ಷಣ, ಗುರು ಮತ್ತು ಗುರಿಯನ್ನು ನೀಡಿದಾಗ ದೇಶಕ್ಕೆ ಉತ್ತಮವ ಪ್ರಜೆಗಳಾಗುತ್ತಾರೆ ಈ ನಿಟ್ಟಿನಲ್ಲಿ ತಾಯಂದಿರು ಮುಂದಾಗಬೆಕಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ನಾಯ್ಡು ತಿಳಿಸಿದರು.
ಚಿತ್ರದುರ್ಗ ನಗರದ ಕಬೀರಾನಂದ ಆಶ್ರಮದಲ್ಲಿ ಮಾ.7 ರಿಂದ ಪ್ರಾರಂಭವಾಗಿರುವ 91ನೇ ಶಿವನಾಮ ಮಹೋತ್ಸದವ ಐದನೇ ದಿನದ ಕಾರ್ಯಕ್ರಮ ಹಾಗೂ ಅರೂಢಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀಮಠ ಮಕ್ಕಳಿಗೆ ಶಿಕ್ಷಣವನ್ನು ದಾನ ಮಾಡುತ್ತಾ, ವಯೋವೃದ್ದರಿಗೆ ರಕ್ಷಣೆಯನ್ನು ನೀಡುವಂತ ಕಾರ್ಯವನ್ನು ಮಾಡುತ್ತಾ ಸಮಾಜದ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಆಶ್ರಮ ಮಹಿಖೆಯರಿಗೆ ಮಾನ್ಯತೆಯನ್ನು ನೀಡುತ್ತದೆ ಎಂಬುದಕ್ಕೆ ನಮ್ಮ ಕೈಯಲ್ಲಿ ಇಂದಿನ ದೀಪವನ್ನು ಹಚ್ಚಿಸಿದ್ದು ಸಾಕ್ಷಿಯಾಗಿದೆ ಎಂದರು.
ರಾಜ್ಯದಲ್ಲಿ ಮಹಿಳಾ ಆಯೋಗವು ತನ್ನ ವ್ಯಾಪ್ತಿಯಲ್ಲಿ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ, ಇದರಲ್ಲಿ ಬಾಲ್ಯವಿವಾಹ ತಡೆಯುವುದು ಮುಖ್ಯವಾದ ಕಾರ್ಯವಾಗಿದೆ, ಇನ್ನೂ ಯಾವುದೇ ದೈಹಿಕ ಸಾಮಥ್ರ್ಯವನ್ನು ಹೊಂದಿರದ ಸಮಯದಲ್ಲಿ ಆಟವನ್ನು ಆಡಿಕೊಂಡು ಇರುವ ಸಮಯದಲ್ಲಿ ಮದುವೆಯನ್ನು ಮಾಡುವುದು ಸರಿಯಲ್ಲ ಇದಕ್ಕೆ ಆದ ವಯಸ್ಸಿ ಇದೆ ಆಗ ಮದುವೆಯಾದರೆ ಒಳ್ಳೇಯದು ಬಾಲ್ಯ ವಿವಾಹ ಮಾಡಿದರೆ ಕಾನೂನು ಪ್ರಕಾರ ತಪ್ಪು ಎಂದು ಗೊತ್ತಿದ್ದರು ಸಹಾ ಪೋಷಕರು ತಮ್ಮ ಮಕ್ಕಳ ಮದುವೆಯನ್ನು ಮಾಡುತ್ತಾರೆ ಈ ರೀತಿಯಾದ ಕೆಲವೊಂದು ಪ್ರಕರಣಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಕಂಡು ಬಂದಿದು ಅವುಗಳನ್ನು ತಡೆಯುವ ಕಾರ್ಯವನ್ನು ನಮ್ಮ ಅಧಿಕಾರಿಗಳು ಮಾಡಿದ್ದಾರೆ ಎಂದರು.
ಪೋಷಕರು ತಮ್ಮ ಮಕ್ಕಳ ಮದುವೆಯ ಬಗ್ಗೆ ಆಲೋಚನೆ ಮಾಡುವುದಕ್ಕಿಂತ ಅವರನ್ನು ಸರಿಯಾದ ದಾರಿಗೆ ತರುವ ಕಾರ್ಯವನ್ನು ಮಾಡಬೇಕಿದೆ. ಅವರಿಗೆ ಸರಿಯಾದ ಶಿಕ್ಷಣವನ್ನು ನೀಡಿ ಉತ್ತಮವಾದ ಗುರಿಯನ್ನು ಅವರಲ್ಲಿ ತುಂಬಿಮ ಅದರ ಸಾಕ್ಷಾರಕ್ಕೆ ಮುಂದಾಗಬೇಕಿದೆ. ನಮ್ಮಗೆ ಗೂತ್ತಿರಲಿಲ್ಲ ಎಂದು ಹೇಳುವುದುಸ ಸರಿಯಲ್ಲ ಎಲ್ಲರು ಕಾನೂನು ತಿಳಿಯುವುದು ಅಗತ್ಯವಾಗಿದೆ ಎಂದ ಅವರು, ಮಹಿಳೆಯರು ಕಿನ್ನತೆಗೆ ಒಳಗಾಗಬಾರದು ಕಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತ ದಾರಿಯನ್ನು ಹಿಡಿಯವಾರದು ಏನೇ ಸಮಸ್ಯೆ ಬಂದರು ಸಹಾ ಧೈರ್ಯವಾಗಿ ಎದುರಿಸವ ಮನೋಭಾವವನ್ನು ಬೆಳಸಿಕೊಳ್ಳಬೇಕಿದೆ ಎನೇ ಕಷ್ಟ ಬಂದರು ಸಹಾ ಆಯೋಗ ನಿಮ್ಮ ಸಹಾಯಕ್ಕೆ ಇದೆ ಎಂಬುದನ್ನು ಮರೆಯಬೇಡಿ ಎಂದು ಶ್ರೀಮತಿ ಪ್ರಮೀಳಾ ನಾಯ್ಡು ಕಿವಿ ಮಾತು ಹೇಳಿದರು.
ಜಿಲ್ಲಾ ರಕ್ಷಣಾಧಿಕಾರಿ ಶ್ರೀಮತಿ ರಾಧಿಕಾ ಮಾತನಾಡಿ, ಆಶ್ರಮ ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿದ್ದ ಹಲವಾರು ಉಪಯುಕ್ತವಾದ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದೆ. ಇಂತಹ ಆಶ್ರಮ ಹನುಮವ್ವರಂತಹರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿರುವುದು ಉತ್ತಮವಾದ ಕಾರ್ಯವಾಗಿದೆ ಎಂದು ತಿಳಿಸಿದರು.

Leave a Reply

Your email address will not be published.