ದೋಹಾ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕರೊನಾ ಕಾಲದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಜಯಿಸುವ ಮೂಲಕ ಗೆಲುವಿನ ಪುನರಾಗಮನ ಕಂಡಿದ್ದಾರೆ. ಕತಾರ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸ್ಲೊವೇನಿಯಾದ ಜತೆಗಾರ್ತಿ ಆಂಡ್ರೆಜಾ ಕ್ಲೆಪಕ್ ಜತೆಗೂಡಿ ಸಾನಿಯಾ ಶುಭಾರಂಭ ಮಾಡಿದ್ದಾರೆ.
ಸಾನಿಯಾ-ಕ್ಲೆಪಕ್ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ ಉಕ್ರೇನ್‌ನ ನಾಡಿಯಾ ಕಿಚೆನಾಕ್ ಮತ್ತು ಲೈಯುಡ್‌ಮೈಲಾ ಕಿಚೆನಾಕ್ ಜೋಡಿಯ ವಿರುದ್ಧ 6-4, 6-7 (5), 10-5ರಿಂದ ಗೆಲುವು ದಾಖಲಿಸಿತು. ಈ ಮೂಲಕ ಭಾರತ-ಸ್ಲೊವೇನಿಯಾದ ಜೋಡಿ ಕ್ವಾರ್ಟರ್‌ೈನಲ್ ಪ್ರವೇಶಿಸಿದೆ.ಕಳೆದ 12 ತಿಂಗಳ ಅವಧಿಯಲ್ಲಿ ಸಾನಿಯಾ ಮಿರ್ಜಾ ಆಡಿದ ಮೊದಲ ಪಂದ್ಯ ಇದಾಗಿದೆ. 2020ರ ೆಬ್ರವರಿಯಲ್ಲಿ ಇಲ್ಲೇ ದೋಹಾ ಓಪನ್‌ನಲ್ಲಿ ಕೊನೆಯದಾಗಿ ಅವರು ಪಂದ್ಯವಾಡಿದ್ದರು. ಬಳಿಕ ಕರೊನಾದಿಂದಾಗಿ ಟೆನಿಸ್ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈ ನಡುವೆ ಗ್ರಾಂಡ್ ಸ್ಲಾಂ ಟೂರ್ನಿಗಳು ಪುನರಾರಂಭಗೊಂಡಿದ್ದರೂ, ಸಾನಿಯಾ ಕಣಕ್ಕಿಳಿದಿರಲಿಲ್ಲ. ಈ ವರ್ಷ ಜನವರಿಯಲ್ಲಿ ಸಾನಿಯಾ ಕೂಡ ಕರೊನಾ ಸೋಂಕಿತರಾಗಿ, ಬಳಿಕ ಗುಣಮುಖರಾಗಿದ್ದರು.