ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಉದ್ಧಟತನ ಮೆರೆಯುತ್ತಿದ್ದು, ಪಾಲಿಕೆ ಮುಂದೆ ಭಗವ ಧ್ವಜಾ ಹಾರಿಸುತ್ತೇವೆ ಎಂದು ಕ್ಯಾತೆ ತೆಗೆದಿದ್ದಾರೆ. ಮಹಾರಾಷ್ಟ್ರದಿಂದ ಶಿವಸೇನೆ ಪುಂಡರು ಬೆಳಗಾವಿ ಗಡಿ ಪ್ರವೇಶಿಸಲು ಯತ್ನಿಸಿದ್ದು, ಪೊಲೀಸರು ತಡೆದಿದ್ದಾರೆ.
ಇನ್ನು ಶಿವಸೇನೆ ಪುಂಡರನ್ನ ತಡೆ ಹಿಡದ ಕರ್ನಾಟಕ ಪೊಲೀಸರು ಲಾಠಿ ಚಾರ್ಜ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಬಗ್ಗೆ ಬೆಳಗಾವಿ ಪ್ರತಿನಿಧಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಸಿದ್ದು, ಶಿವಸೇನೆ ಪುಂಡರ ಪುಂಡಾಟ ಇನ್ನು ಸಹಿಸೋಕೆ ಆಗೋದಿಲ್ಲ, ಕೈಕೊಟ್ಟು ಕೂಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಬೆಳಗಾವಿಯಲ್ಲಿ ಅಹಿತಕರ ಘಟನೆ ಸೃಷ್ಟಿಸಲು ಬಂದರೇ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೀವೆ ಎಂದಿರುವ ಅವ್ರು, ಸ್ವತಃ ತಾವೇ ಗಡಿ ಬಳಿ ಹೋಗಿ ಶಿವಸೇನೆ ಕಾರ್ಯಕರ್ತರನ್ನ ತೆರವುಗೊಳಿಸುವ ಕಾರ್ಯ ಮಾಡುತ್ತೇವೆ ಎಂದರು.