ನಿತ್ಯವಾಣಿ,ಚಿತ್ರದುರ್ಗ,(ಜೂನ್.23) : ಕೊರೋನ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ವಿಧಿಸಲಾದ ಲಾಕ್ ಡೌನ್ ನಿಂದ ಜನ ಸಾಮಾನ್ಯರು ಹೈರಾಣಾಗಿರುವ ಈ ಸಂಕಷ್ಟದ ಸಂದರ್ಭದಲ್ಲಿ ಜನರ ಬದುಕು ಮತ್ತು ಭಾವನೆಗಳೊಂದಿಗೆ ಚಲ್ಲಾಟವಾಡಲು ಪೈಪೋಟಿಗಿಳಿದಿರುವ *ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಇತ್ತೀಚಿಗೆ ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ,ರಸ ಗೊಬ್ಬರ ಹಾಗೂ ವಿದ್ಯುತ್ ದರಗಳ ಬೆಲೆ ಏರಿಕೆ ಮಾಡಿ* ಶ್ರೀ ಸಾಮಾನ್ಯರ ತಲೆಯ ಮೇಲೆ ಗದಾ ಪ್ರಹಾರ ಮಾಡಿರುವುದು ಖಂಡನೀಯ.
ಹಾಗಾಗಿ ಈ ಎರಡು ಲಜ್ಜೆಗೆಟ್ಟ ಸರ್ಕಾರಗಳ ಜನ ವಿರೋಧಿ ನೀತಿಯ ವಿರುದ್ಧ *ಚಿತ್ರದುರ್ಗ ನಗರದಲ್ಲಿ ದಿನಾಂಕ:25-06-2021 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ* ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗಿದೆ.
ಪ್ರಯುಕ್ತ ನಮ್ಮ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಸಕಾಲಕ್ಕೆ ಸರಿಯಾಗಿ *ಚಿತ್ರದುರ್ಗದಲ್ಲಿರುವ ಹೆಚ್. ಡಿ. ದೇವೇಗೌಡ ಭವನ ದಲ್ಲಿರುವ ಜೆಡಿಎಸ್ ಕಚೇರಿಗೆ ಆಗಮಿಸಿ ಇಲ್ಲಿಂದ ಜಿಲ್ಲಾಧಿಕಾರಿ ಯವರಿಗೆ ನಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ* ಮನವಿ ಪತ್ರ ನೀಡುವ ಈ ಜನ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಡಿ.ಯಶೋಧರ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ. ಉಚಿತ ಸುದ್ದಿ, ಜಾಹೀರಾತಿಗಾಗಿ , “ನಿತ್ಯವಾಣಿ ” ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್. ಟಿ .ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 , www.nithyavaninews.com