ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಪಿಂಜಾರ/ನದಾಫ್ ಜನಾಂಗ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪನೆಗೆ ಬಹುದಿನಗಳಿಂದಲೂ ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಇದುವರೆವಿಗೂ ಬೇಡಿಕೆ ಈಡೇರದ ಕಾರಣ ಧರಣಿ ಸತ್ಯಾಗ್ರಹಕ್ಕೆ ನಡೆಸಲಾಗುತ್ತಿದೆ. ಜನಾಂಘದ ಅಭೀವೃದ್ದಿಗಾಗಿ ನಿಗಮ ಸ್ಥಾಪನೆಯ ಮುಖ್ಯವಾಗಿದೆ. ನಮ್ಮ ನ್ಯಾಯಯುತವಾದ ಬೇಡಿಕೆಯನ್ನು ಸರ್ಕಾರ ಈಡೇರಿಸದಿದ್ದರೆ ಮುಂದಿನ ದಿನದಲ್ಲಿ ಉಪವಾಸದಂತಹ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಎಂ.ಬಿ.ಶಫಿವುಲ್ಲಾ ತಿಳಿಸಿದ್ಧಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಬಿ.ಗರೀಬ್ ಅಲಿ, ಉಪಾಧ್ಯಕ್ಷ ವೈ.ಹೆಚ್.ಹುಸೇನ್‍ಪೀರ್, ಹಸನ್‍ಸಾಬ್, ಬಷೀರ್ ಅಹಮದ್, ಷರೀಫ್ ಸಾಬ್ ಸೇರಿದಂತೆ ಪಿಂಜಾರ/ನದಾಫ್ ಜನಾಂಗ ಮಹಿಳೆಯರು ಭಾಗವಹಿಸಿದ್ದರು.