ನಿತ್ಯವಾಣಿ, ಚಿತ್ರದುರ್ಗ,( ಜು. 3) : ನಾನು ರಾಜಕಾರಣ ಮಾತನಾಡಲ್ಲ.ಎರಡು ವರ್ಷ ಸರ್ಕಾರ ಬಿಗಿಯಾಗಿದೆ.ಯಡಿಯೂರಪ್ಪ ರಾಜ್ಯದ ಪ್ರಶ್ನಾತೀತ ನಾಯಕರು, ಅವರೇ ಸಿಎಂ ಆಗಿರುತ್ತಾರೆ.75 ವರ್ಷದಲ್ಲಿ ಆಗದ ಕೆಲಸಗಳನ್ನ ಮಾಡುವಲ್ಲಿ ನಾವು ಸಫಲರಾಗಿದ್ದೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಹಿರಿಯೂರಿನಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರು ಹೋಗುತ್ತಾರೆ, ಯಾರು ಹೋಗಲ್ಲ ಎಂಬುದೆಲ್ಲಾ ಗೌಣ.23 ತಿಂಗಳ ನಂತರ ಚುನಾವಣೆ ಇದೆ ಮತ್ತೆ ಚುನಾವಣೆ ಬಂದಾಗ ಚಿಂತನೆ ಮಾಡೋಣ.ನಮ್ಮ ಆದ್ಯತೆ ಅಭಿವೃದ್ಧಿ, ಉತ್ತಮ ಕೆಲಸ ಮಾಡುವ ಸರ್ಕಾರ ಅಸ್ಥಿರ ಆಗಬಾರದು, ಕೈ ಹಾಕಬಾರದು. ಚುನಾವಣೆ ಮುಗಿದ ಬಳಿಕ ಬಹುಮತ ಪಡೆದ ಪಕ್ಷಗಳು ಅಧಿಕಾರ ನಡೆಸುತ್ತವೆ ಎಂದು ಸರ್ಕಾರವನ್ನು ಅಸ್ಥಿರ ಮಾಡಲು ಪ್ರಯತ್ನಿಸುತ್ತಿರುವ ವಿರೋಧಿ ಪಕ್ಷದವರಿಗೆ ಸಚಿವ ಸೋಮಣ್ಣ ಟಾಂಗ್ ನೀಡಿದ್ದಾರೆ.
ಬಿಎಸ್‍ವೈ ಅವರೇ ಉಳಿದ ಅವಧಿಯ ಸಿಎಂ ಆಗಿರುತ್ತಾರೆ. ಬಿಜೆಪಿ ಅತೃಪ್ತ ಶಾಸಕರಲ್ಲಿ ಕೆಲವರು ನನ್ನ ಸಂಪರ್ಕದಲ್ಲಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಅವರು ಏನು ಹೇಳ್ತಾರೆ ಅನ್ನೋದಕ್ಕಿಂತ ಎರಡು ವರ್ಷ ಸರ್ಕಾರ ಬಿಗಿಯಾಗಿರಲಿದೆ ಎಂದು ತಿರುಗೇಟು ನೀಡಿ ಯಡಿಯೂರಪ್ಪ ರಾಜ್ಯದ ಪ್ರಶ್ನಾತೀತ ನಾಯಕರು, ಅವರೇ ಸಿಎಂ ಆಗಿರುತ್ತಾರೆ.75 ವರ್ಷದಲ್ಲಿ ಆಗದ ಕೆಲಸಗಳನ್ನ ಮಾಡುವಲ್ಲಿ ನಾವು ಸಫಲರಾಗಿದ್ದೇವೆ ಎಂದು ಸಚಿವರು ತಿಳಿಸಿದರು.
ಯಾರು ಹೊರ ಹೋಗುತ್ತಾರೆ, ಯಾರು ಬಿಡ್ತಾರೆ ಈಗ ಎಲ್ಲವೂ ಗೌಣ. ಉತ್ತಮ ಕೆಲಸ ಮಾಡುವ ಸರ್ಕಾರದ ಅಸ್ಥಿರಕ್ಕೆ ಯಾರು ಕೈ ಹಾಕಬಾರದು. ಸಿಎಂ ಈ ವಯಸ್ಸಿನಲ್ಲೂ ನಮ್ಮನ್ನು ಬಡಿದೆಬ್ಬಿಸುವಂತೆ ಕೆಲಸ ಮಾಡುತ್ತಿದ್ದಾರೆ. ಅವರಿಂದ ಸ್ಪೂರ್ತಿ ಪಡೆದ ಇಡೀ ಸಚಿವರು, ಶಾಸಕರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ರಾಮುಲು ಆಪ್ತನ ಪ್ರಕರಣ ವಿಚಾರಈ ಕುರಿತು ನಿನ್ನೆ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯತ್ತಿದೆ, ಯಾವ ರೀತಿ ಎಂಬುದು ಮಾತನಾಡೋಣ. ಸಿಎಂ ಎಷ್ಟು ಬೆಳಕು ಚೆಲ್ಲಬೇಕು ಬೆಳಕು ಚೆಲ್ಲಿದ್ದಾರೆ ಎಂದು ಸಚಿವ ಸೋಮಣ್ಣ ಸರ್ಕಾರದಿಂದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ನಿರ್ಮಿಸಿಕೊಡುವ ವಸತಿಗಳು ಕಳಪೆಯಾಗಿರುತ್ತದೆ ಇದರಲ್ಲಿ ಅಧಿಕಾರಿಗಳ ಕೈವಾಡವಿದೆ ಹಾಗೂ ಯೋಜನೆ ಅಡಿಯಲ್ಲಿ ಸರ್ಕಾರದಿಂದ ತಾವು ಕೊಡುತ್ತಿರುವ 1.50 ಲಕ್ಷ ರೂ ಇಂತಹ ದುಬಾರಿ ಬೆಲೆ ಸಾಮಾನುಗಳನ್ನು ತಂದು ಮನೆ ಕಟ್ಟಲು ಸಾಧ್ಯವೇ ಎಂತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅಂತಹವುಗಳು ನನ್ನ ಗಮನಕ್ಕೆ ಬಂದಿಲ್ಲ ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಹೆಚ್ಚಿನ ಹಣ ನೀಡಲು ಮುಂದೆ ಸರ್ಕಾರ ತೀರ್ಮಾನ ಮಾಡುತ್ತದೆ ಎಂಥ ಮಾತನಾಡಿರುತ್ತಾರೆ. ಈ ಸಂದರ್ಭದಲ್ಲಿ ಶಾಸಕರಾದ ಶ್ರೀಮತಿ ಪೂರ್ಣಿಮ ಸೇರಿದಂತೆ ಇತರರು ಉಪಸ್ಥಿತರಿದ್ದರು.