ಆಯಾಸವನ್ನು ಕಡಿಮೆ ಮಾಡುವ ಮೂಲಕ ಚಿಕನ್ ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ : ಸುಗುಣ ಫುಡ್ಸ್
ನಿತ್ಯವಾಣಿ, ಬೆಂಗಳೂರು,( ಜೂನ್ 22, 2021): ಸಾಂಕ್ರಾಮಿಕವು ದೇಶದ ಎಲ್ಲ ಮೂಲೆಗಳಿಗೆ ತಲುಪುವುದರ ಜೊತೆಗೆ, ನಾವು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ.ಮನೆಗಳಲ್ಲಿಯೇ ಉಳಿದಿರುವುದು ಸಾಮಾನ್ಯವಾಗಿದ್ದು, ಇದು ನಮ್ಮ ಮನಸ್ಸು ಮತ್ತು ದೇಹಕ್ಕೆ ಆಯಾಸ ಉಂಟುಮಾಡುತ್ತಿದೆ. ಇಂತಹ ಸಮಯದಲ್ಲಿ ನಮ್ಮ ದೇಹದಲ್ಲಿನ ರೋಗನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ನಮ್ಮ ಮಾನಸಿಕ ಮತ್ತು ದೈಹಿಕ ಶಕ್ತಿಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ನಾವು ಸೇವಿಸುವ ಆಹಾರಗಳ ಜೊತೆಗೆ ದೇಹ ಕಾರ್ಯನಿರ್ವಹಿಸುತ್ತದೆ. ಆರೋಗ್ಯಕರ ಆಹಾರಗಳನ್ನು ಸೇವಿಸುವುದನ್ನು ಪರಿಣತರು ಸೂಚಿಸುತ್ತಾರೆ ಅಲ್ಲದೆ, ಇದರಿಂದ ದೃಢವಾದ ರೋಗ ನಿರೋಧಕತೆ ಲಭಿಸುತ್ತದೆ.
ಸುಸ್ತು ಅಥವಾ ಆಯಾಸ ಒಂದು ಸಾಮಾನ್ಯ ದೌರ್ಬಲ್ಯವಾಗಿದ್ದು, ಇದು ದೈಹಿಕ ಮತ್ತು ಮಾನಸಿಕ ವಿಷಯವಾಗಿರಬಹುದು ಅಥವಾ ಎರಡೂ ಅಂಶಗಳ ಮಿಶ್ರಣವಾಗಿರಬಹುದು. ಕಾರ್ಯಸ್ಥಳದಲ್ಲಿನ ಒತ್ತಡ, ಖಿನ್ನತೆ, ನಿದ್ರೆಯ ಕೊರತೆ, ಕಳಪೆ ಗುಣಮಟ್ಟದ ಆಹಾರ ಸೇವನೆ, ಕಾರ್ಯಾವಧಿಗಳಲ್ಲಿ ಬದಲಾವಣೆ ಮತ್ತು ಇತರೆ ಅಂಶಗಳೆಲ್ಲವೂ ಆಯಾಸ ಅಥವಾ ಸುಸ್ತು ಉಂಟಾಗಲು ಕೊಡುಗೆ ನೀಡಬಹುದು. ಸಮೃದ್ಧ ಮತ್ತು ಪೊಷಕಾಂಶಯುತ ಆಹಾರಗಳ ಸೇವನೆಯ ಜೊತೆಗೆ ಬಳಲಿಕೆಯನ್ನು ನಿವಾರಿಸಿಕೊಳ್ಳುವುದು ಸುಲಭವಾಗಬಹುದು. ಚಿಕನ್ ಅಥವಾ ಕೋಳಿಮಾಂಸ ಸಮೃದ್ಧವಾದ ಪ್ರೊ ಟೀನ್‍ಗಳನ್ನು ಒಳಗೊಂಡ ಆಹಾರವಾಗಿದ್ದು, ಕಡಿಮೆ ಕೊಬ್ಬನ್ನು ಇದು ಹೊಂದಿದ್ದು, ಆಯಾಸವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದು ದೇಹಕ್ಕೆ ಸತತವಾಗಿ ಇಂಧನ ನೀಡುವುದಲ್ಲದೆ, ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಆಯಾಸದ ವಿರುದ್ಧ ಹೋರಾಡುವಲ್ಲಿ ನೆರವಾಗುವಂತಹ ಚಿಕನ್‍ನಲ್ಲಿನ ಅಗತ್ಯ ಅಂಶಗಳು
ಚಿಕನ್: ಚಿಕನ್ ಸೇವನೆಯು ಹಲವಾರು ಆರೋಗ್ಯಕರ ಲಾಭಗಳನ್ನು ಹೊಂದಿರುವುದಲ್ಲದೆ, ಇದು ದೇಹದ ಕಾರ್ಯವನ್ನು ಬಲಗೊಳಿಸುತ್ತದೆ.
*ಚಿಕನ್‍ನ ಲೀನಿಯರ್ ಭಾಗಗಳು ಉನ್ನತ ಪ್ರಮಾಣದ ಪ್ರೊಟೀನ್ ಹೊಂದಿದ್ದು, ಹೃದಯಕ್ಕೆ ಆರೋಗ್ಯಕರ ಕೊಬ್ಬನ್ನು ಪೂರೈಸಬಲ್ಲವಲ್ಲದೆ, ಇದರಿಂದ ಲಾಭ
ಉಂಟಾಗುತ್ತದೆ.*
* ತೂಕ ಕಳೆದುಕೊಳ್ಳಲು ಮತ್ತು ತೂಕ ಹೆಚ್ಚಿಸಿಕೊಳ್ಳುವ ಕಾರ್ಯಕ್ರಮಗಳಿಗೆ ಇದು ಪ್ರಮುಖ ಆಹಾರವಾಗಿರುತ್ತದೆ.*
*ಇತರೆ ಬಗೆಯ ಮಾಂಸಗಳಿಗೆ ಹೋಲಿಸಿದಲ್ಲಿ ಇದು ಉನ್ನತ ಪ್ರಮಾಣದ ಪ್ರೊಟೀನ್ ಹೊಂದಿದ್ದರೂ, ಕಡಿಮೆ ಕೊಬ್ಬಿನ ಅಂಶ ಮತ್ತು ಕ್ಯಾಲೋರಿಗಳನ್ನು
ಹೊಂದಿರುತ್ತದೆ.*
* ಮಾಂಸಖಂಡಗಳು ಮತ್ತು ಮೂಳೆಯ ಶಕ್ತಿ ಅಭಿವೃದ್ದಿಯಾಗುವಲ್ಲಿ ಕೂಡ ಇದು ನೆರವಾಗುತ್ತದೆ.*
*ಚಿಕನ್‍ನಲ್ಲಿ ಟ್ರಿ ಪ್ಟೊ ಫ್ಯಾ ನ್ ಎಂಬ ಅಮಿನೊ ಆಸಿಡ್ ಇದ್ದು, ಇದರಿಂದ ಮೆದುಳಿನಲ್ಲಿನ ಸೆರೊಟೊನಿನ್ ಮಟ್ಟಗಳು ಹೆಚ್ಚಲು ಕಾರಣವಾಗುತ್ತದೆ. ಒಳ್ಳೆಯ
*ಭಾವನೆಯನ್ನು ನೀಡುವ ನ್ಯೂರೊಕೆಮಿಕಲ್ ಸೀರೊಟೋನಿನ್ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.*
ನ್ಯೂಟ್ರಿಝೋನ್‍ನ ಸ್ಥಾಪಕರಾದ ಪೋಷಕಾಂಶ ತಜ್ಞೆ ಮುತ್ತುಲಕ್ಷಿ?ಮ ಅವರು ಮಾತನಾಡಿ, “ದಿನವೆಲ್ಲಾ ಹೆಚ್ಚಿಗೆ ಆಯಾಸವಾಗದಂತೆ ಚಟುವಟಿಕೆಯಿಂದಿರುವ ಭಾವನೆಯನ್ನು ಮೂಡಿಸುವಲ್ಲಿ ಹಲವಾರು ಆಹಾರಗಳು ನಿಮಗೆ ನೆರವಾಗಬಹುದು. ಪ್ರೊಟೀನ್ ನಿಂದ ಸಮೃದ್ಧ, ಆರೋಗ್ಯಕರ ಕೊಬ್ಬಿನಿಂದ ಸಮೃದ್ಧ ಮತ್ತು ನಾರಿನಂಶಗಳಿಂದ ಸಮೃದ್ಧವಾದ ಆಹಾರಗಳನ್ನು ಆರಿಸಿಕೊಳ್ಳಬೇಕು. ಕಬ್ಬಿಣದ ಅಂಶ ಮತ್ತು ಪೋಷಕಾಂಶಗಳು ಉನ್ನತ ಪ್ರಮಾಣದಲ್ಲಿರುವ ಆಹಾರಗಳು ಕೂಡ ಒಳ್ಳೆಯದಾಗಿರುತ್ತದೆ.
ನಿಮ್ಮಶಕ್ತಿ ಮತ್ತು ರೋಗನಿರೋಧಕತೆಯನ್ನು ಹೆಚ್ಚಿಸಿಕೊಳ್ಳುವ ಇಚ್ಛೆ ಇದ್ದರೆ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬೇಕಾದ ಮುಖ್ಯವಾದ ಪದಾರ್ಥ ಎಂದರೆ ಚಿಕನ್ ಆಗಿರುತ್ತದೆ. ಚಿಕನ್‍ನಲ್ಲಿರುವ ಟ್ರಿ ಪ್ರೊ ಫ್ಯಾನ್ ಆಸಿಡ್‍ಗಳು ಆಯಾಸವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಚಿಕನ್‍ನಲ್ಲಿರುವ ಬಿ-ಕಾಂಪ್ಲೆಕ್ಸ್ ವಿಟಮಿನ್‍ಗಳು ನಿಮಗೆ ಆರೋಗ್ಯಕರ ತೂಕವನ್ನು ಉಳಿಸಿಕೊಳ್ಳಲು ನೆರವಾಗುತ್ತವೆಯಲ್ಲದೆ, ನಿಮ್ಮ ರಕ್ತನಾಳಗಳನ್ನು ಆರೋಗ್ಯಕರವಾಗಿಡುತ್ತವೆ. ಜೊತೆಗೆ ನಿಮ್ಮ ಶಕ್ತಿಯ ಮಟ್ಟಗಳನ್ನು ಉನ್ನತ ಪ್ರಮಾಣದಲ್ಲಿರು ಇರಿಸುತ್ತವೆ” ಎಂದರು.