ಯಾರೀ ಮತ್ಸ್ಯಕನ್ಯೆ ? ಒಮ್ಮೆ ನೋಡಿ.

ನವದೆಹಲಿ : ಫೋಟೋ ನೋಡಿದ ತಕ್ಷಣ ಇದೇನು ಮತ್ಸ್ಯಕನ್ಯೆಯೇ ಎಂದೆನಿಸಬಹುದು. ಒಂದು ರೀತಿಯಲ್ಲಿ ಹೌದು, ಆದರೂ ಇಲ್ಲ. ಸರಿಯಾಗಿ ನೋಡಿ, ಇದು ಬಾಲಿವುಡ್ ನಟಿ ಆಲಿಯಾ ಭಟ್​. ಹೌದು, ಬೇಸಿಗೆಯ ಧಗೆ ಶುರುವಾಗುತ್ತಿರುವ ಈ ಸಂದರ್ಭದಲ್ಲಿ ತಮ್ಮ ಅಂಡರ್​ವಾಟರ್ ಸ್ವಿಮ್ಮಿಂಗ್ ಪೋಸ್​ನ ಫೋಟೋವನ್ನು ಆಲಿಯಾ ಹರಿಬಿಟ್ಟಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂ ಖಾತೆಯ ಪೋಸ್ಟ್​​ಗಳಿಗೆ ಲಕ್ಷಾಂತರ ಲೈಕುಗಳ ಸುರಿಮಳೆಗೈಯುವ ಅಭಿಮಾನಿಗಳೊಂದಿಗೆ ಆಲಿಯಾ ಆಗಾಗ ಹ್ಯಾಪಿ ಮೂಡ್ ಹಂಚಿಕೊಳ್ಳುತ್ತಿರುತ್ತಾರೆ. ಇಂದೂ ಹಾಗೇ… ವಾರಾಂತ್ಯದ ತಮ್ಮ ರಿಲ್ಯಾಕ್ಸ್ ಮೂಡ್​ಅನ್ನು ಪ್ರದರ್ಶಿಸಲು ‘…ಇಟ್​ ವಾಸ್​ ದ ಬೆಸ್ಟ್ ಡೇ’ ಎಂದು ಕಾಮೆಂಟ್​ ಹಾಕಿ ಬಿಕಿನಿಯಲ್ಲಿ ಈಜುತ್ತಿರುವ ಫೋಟೋವನ್ನು ಆಲಿಯಾ ಶೇರ್ ಮಾಡಿದ್ದಾರೆ.ಆಲಿಯಾರ ಈ ಪೋಸ್ಟ್​​ಗೆ ಒಂದು ಗಂಟೆಯಲ್ಲೇ 7 ಲಕ್ಷಕ್ಕೂ ಹೆಚ್ಚು ಲೈಕುಗಳ ಸುರಿಮಳೆಯಾಗಿದೆ. ಇತ್ತೀಚೆಗಷ್ಟೇ 28 ನೇ ಹುಟ್ಟಿದಹಬ್ಬವನ್ನು ಆಚರಿಸಿಕೊಂಡ ಆಲಿಯಾಗೆ ನೀರಿನ ಬಗ್ಗೆ ವಿಶೇಷ ಒಲವು ಅನಿಸುತ್ತದೆ. ಏಕೆಂದರೆ ಈ ಜಲವಿಹಾರದ ಫೋಟೋ ಅಲ್ಲದೆ, ಕೆಲವು ದಿನಗಳ ಹಿಂದೆ ಮಾಲ್ಡೀವ್ಸ್​ಗೆ ಪ್ರವಾಸ ಹೋಗಿದ್ದಾಗಿನ ಬೀಚ್ ಫೋಟೋ ಕೂಡ ಅವರು ಶೇರ್ ಮಾಡಿದ್ದರು.

Leave a Reply

Your email address will not be published.