ವಾರಾಂತ್ಯದ ಲಾಕ್ಡೌನ್ ಇರುವುದರಿಂದ ಶಿಕ್ಷಕರಿಗೆ ಅನುಮತಿ : ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರವಿಶಂಕರ್ ರೆಡ್ಡಿ

ನಿತ್ಯವಾಣಿ ಚಿತ್ರದುರ್ಗ,(ಜೂ.18) : ನಾಳೆ ಶನಿವಾರ,ಭಾನುವಾರ ಎರಡು ದಿನಗಳು ವಾರಾಂತ್ಯದ ಲಾಕ್ಡೌನ್ ಇರುವುದರಿಂದ ಶಿಕ್ಷಕರಿಗೆ ಶನಿವಾರದ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅನುಮತಿಸಿದೆ,ಶಾಲೆಗೆ ತೆರಳಲು ಅನುಕೂಲವಿದ್ದ ಯಾವುದೇ ತೊಂದರೆ ಇಲ್ಲದೆ  ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಶಾಲೆಗಳಿಗೆ ತೆರಳಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುವ ಸಂಭವವಿರುವುದು ಕಂಡುಬಂದಿರುತ್ತದೆ,ಸಾಧ್ಯವಾಗದಿದ್ದಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅನುಮತಿಸಿದೆ, ಶಾಲೆಗೆ ತೆರಳಲು ಅನುಕೂಲವಿದ್ದ ಯಾವುದೇ ತೊಂದರೆ ಇಲ್ಲದ ಪಕ್ಷದಲ್ಲಿ ಶಾಲೆಗೆ ತೆರಳಿ ಕರ್ತವ್ಯ ನಿರ್ವಹಿಸುವುದು ಎಂದು ಚಿತ್ರದುರ್ಗ ಸರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರವಿಶಂಕರ್ ರೆಡ್ಡಿ ರವರು ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸಲು ಆದೇಶಿಸಿದ್ದಾರೆ,ಈ ಆದೇಶವನ್ನು ಹೊರಡಿಸಿದ ಉಪನಿರ್ದೇಶಕರಾದ ರವಿಶಂಕರ್ ರೆಡ್ಡಿ ಅವರಿಗೆ ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ ಮಂಜುನಾಥ್ ರವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com 

Leave a Reply

Your email address will not be published.