ದಾವಣಗೆರೆ: ಗೋಮಾಳವೊಂದರಲ್ಲಿ ದೇವಸ್ಥಾನಕ್ಕಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡವೊಂದನ್ನು ಕೆಡವಿದ್ದಕ್ಕೆ ಎರಡು ಸಮುದಾಯದ ಗುಂಪುಗಳ ನಡುವೆ ಮಾರಾಮಾರಿಯೇ ಉಂಟಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ದೇವಸ್ಥಾನ ಕಟ್ಟಡ ಕೆಡವಿದ ಗ್ರಾಮದ ಒಂದು ಸಮುದಾಯ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಅರೇಹಳ್ಳಿ ಗ್ರಾಮದ ಗೋಮಾಳ ಜಾಗದಲ್ಲಿ ಸೇವಾಲಾಲ್ ದೇವಸ್ಥಾನ ನಿರ್ಮಾಣ ವಿವಾದದ ಹಿನ್ನೆಲೆಯಲ್ಲಿ ಈ ಗುಂಪುಘರ್ಷಣೆ ಸಂಭವಿಸಿದೆ. ಸೇವಾಲಾಲ್ ಜಯಂತಿ ಹಿನ್ನೆಲೆಯಲ್ಲಿ ಅರೇಹಳ್ಳಿ ಗ್ರಾಮದ ಹೊರವಲಯದ ಗೋಮಾಳ ಜಾಗದಲ್ಲಿ ದೇವಸ್ಥಾನ ಒಂದು ಸಮುದಾಯ ದೇವಸ್ಥಾನ ನಿರ್ಮಾಣ ಮಾಡಲು ಮುಂದಾಗಿತ್ತು.
ಇಂದು ಬೆಳಗ್ಗೆ ದೇವಸ್ಥಾನ ಕಟ್ಟಡದ ಕಾರ್ಯ ಪ್ರಾರಂಭವಾಗಿದ್ದು, ಈ ವಿಷಯ ತಿಳಿದು ಗ್ರಾಮದ ಮತ್ತೊಂದು ಸಮುದಾಯದ ಜನರು ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಗ್ರಾಮದಲ್ಲಿ ಒಂದು ಸೇವಾಲಾಲ್ ದೇವಸ್ಥಾನವಿದೆ, ಇನ್ನೊಂದು ದೇವಸ್ಥಾನದ ಅವಶ್ಯಕತೆ ಇಲ್ಲ. ಅಲ್ಲಿಯೇ ಜಯಂತಿ ಆಚರಿಸಿ ಎಂದು ಗುಂಪು ಒತ್ತಾಯಿಸಿತು. ಈ ನಡುವೆ 2 ಸಮುದಾಯದ ಮಧ್ಯೆ ಘರ್ಷಣೆ ಉಂಟಾಗಿದ್ದು, ನಿರ್ಮಾಣವಾಗುತ್ತಿದ್ದ ಕಟ್ಟಡವನ್ನು ಕೆಡವಿ ತೆರವುಗೊಳಿಸಲಾಯಿತು.