ಬ್ರೆಡ್ಸ್ ಮತ್ತು ಚಿತ್ರಡಾನ್‍ಬೋಸ್ಕೋ ಸಂಸ್ಥೆ ಚಿತ್ರದುರ್ಗ ಇವರಿಂದ ಬಡ ಕುಟುಂಬಗಳಿಗೆ ಫುಡ್‍ಕಿಟ್‍ಗಳ ವಿತರಣೆ

ನಿತ್ಯವಾಣಿ, ಚಿತ್ರದುರ್ಗ,(ಜೂ.1) : ಬ್ರೆಡ್ಸ್ ಬೆಂಗಳೂರು ಮತ್ತು ಚಿತ್ರಡಾನ್‍ಬೋಸ್ಕೋ ಸಂಸ್ಥೆ ಚಿತ್ರದುರ್ಗ ಇವರುಗಳ ಸಹಯೋಗದೊಂದಿಗೆ ಟಿ.ಪಿ.ಹಳ್ಳಿ, ಮುನ್ಸಿಪಲ್ ಕಾಲೋನಿ, ಜೋಗಿಮಟ್ಟಿ ರಸ್ತೆ, ಕಾಮನಬಾವಿ ಬಡಾವಣೆ, ಐ.ಯು.ಡಿ.ಪಿ.ಲೇಔಟ್, ಸಿ.ಕೆ.ಪುರ, ಕೆಳಗೋಟೆ, ಮದಕರಿಪುರದಲ್ಲಿ ಕೋವಿಡ್-19 ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಿ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಮಂಗಳವಾರ ಫುಡ್‍ಕಿಟ್‍ಗಳನ್ನು ವಿತರಿಸಲಾಯಿತು.

ಚಿತ್ರಡಾನ್‍ಬೋಸ್ಕೋ ನಿರ್ದೇಶಕರಾದ ಫಾದರ್ ಜೋಸೆಫ್ ಬಡವರಿಗೆ ಫುಡ್‍ಕಿಟ್‍ಗಳನ್ನು ವಿತರಿಸಿ ಮಾತನಾಡುತ್ತ ಕೊರೋನಾ ಎರಡನೆ ಅಲೆ ಭೀಕರವಾಗಿದ್ದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಅನಗತ್ಯವಾಗಿ ಯಾರು ಮನೆಯಿಂದ ಹೊರಗಡೆ ತಿರುಗಾಡದೆ ಸುರಕ್ಷಿತವಾಗಿರುವಂತೆ ಜನತೆಯಲ್ಲಿ ವಿನಂತಿಸಿದರು.
ಡಾನ್‍ಬೋಸ್ಕೋ ಸ್ಟೇಟ್ ಸ್ಕೂಲ್ ಪ್ರಾಂಶುಪಾಲರಾದ ಫಾದರ್ ಲಾರೆನ್ಸ್, ಆಡಳಿತಾಧಿಕಾರಿ ಫಾದರ್ ವಿನೀಶ್, ಡಾನ್‍ಬೋಸ್ಕೋ ಮತ್ತು ಚಿತ್ರಡಾನ್‍ಬೋಸ್ಕೋ ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.

Leave a Reply

Your email address will not be published.