ನಿತ್ಯವಾಣಿ,ಚಿತ್ರದುರ್ಗ,(ಅ.24) : ಚಿತ್ರದುರ್ಗ ನಗರದಲ್ಲಿ ನಿನ್ನೆ ಅಂದರೆ ಶನಿವಾರ ಮಧ್ಯರಾತ್ರಿ ಸುಮಾರು ಎರಡು ಗಂಟೆ ಸಮಯದಲ್ಲಿ ಐಯುಡಿಪಿ ಲೇಔಟ್ 6ನೇ ಕ್ರಾಸ್ ಗಣೇಶ ದೇವಸ್ಥಾನ ಹತ್ತಿರ ಕೆ ಹೆಚ್ ಬಿ ಕಾಲೋನಿಯ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಬೀಗ ಹಾಕಿದ ಮನೆಯನ್ನು ಪೂರಾ ಗಮನಿಸಿ ಪ್ರೊಫೆಸರ್ ಕೃಷ್ಣಪ್ಪ ಅವರ ಮನೆಗೆ ಇಬ್ಬರು ಕಳ್ಳರು ಸೇಫ್ಟಿ ಡೋರ್ ಹೊಡೆದು ಬಾಗಲನ್ನು ಹೊಡೆಯುತ್ತಿರುವಾಗ ಮನೆಯ ಸಮೀಪದಲ್ಲಿರುವ ಒಬ್ಬರು ಮನೆಯಲ್ಲಿಯೇ ಕಿಟಕಿಯಲ್ಲಿ ನೋಡಿ ಪೊಲೀಸ್ ಠಾಣೆಗೆ ದೂರವಾಣಿ ಮುಖಾಂತರ ಮಾತನಾಡಿದಾಗ ಕೆಲವೇ ನಿಮಿಷಗಳಲ್ಲಿ ಬಡಾವಣೆ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಗೀತಾ ಮತ್ತು ಸಿಬ್ಬಂದಿ ಪ್ರತ್ಯಕ್ಷವಾಗಿ ಕಳ್ಳರನ್ನು ಹಿಡಿಯಲು ಪ್ರಯತ್ನ ಮಾಡುವಾಗ ಒಬ್ಬ ಕಳ್ಳ ತಪ್ಪಿಸಿಕೊಂಡು ಇನ್ನೊಬ್ಬನು ಮನೆಯ ಹಿಂಭಾಗ ಪೊದೆಯಲ್ಲಿ ಬಚ್ಚಿಟ್ಟುಕೊಂಡಾಗ ಗನ್ನಿಂದ ಶೂಟ್ ಮಾಡುತ್ತೇವೆ ಹೊರಗಡೆ ಬಾ ಎಂದು ಎಚ್ಚರಿಕೆ ಕೊಟ್ಟಾಗ ಸಿಬ್ಬಂದಿಗಳು ತಕ್ಷಣವೇ ಆ ಕಳ್ಳನನ್ನು ಹಿಡಿದು ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾರೆ. ಕಳ್ಳನು ನಾನು ಬೆಂಗಳೂರ ಮೂಲದವನೆಂದು ಹೇಳಿಕೊಂಡಿದ್ದಾನೆ, ಬಡವಣೆ ಪೋಲಿಸರ ಈ ಕಾರ್ಯಕ್ಕೆ ಕೆ ಹೆಚ್ ಬಿ ಕಾಲೋನಿಯ ನಾಗರಿಕರು ಮೆಚ್ಚಿದ್ದಾರೆ