ವೇಣುಗೋಪಾಲನ ದರ್ಶನ ಪಡೆಯಲು ಹೋದ ಭಕ್ತರಿಗೆ ಹುಲಿ ಚಿರತೆ ದರ್ಶನವಗಿರುವ ಘಟನೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾಮಾನ್ಯವಾಗಿ ಭಕ್ತರು ಗೋಪಾಲಸ್ವಾಮಿ ದರ್ಶನಕ್ಕಾಗಿ ತೆರಳೋದು ಪ್ರತೀತಿ, ಅಂತೆಯೇ ಮೈಸೂರಿನ ಛಾಯಾಗ್ರಾಹಕ ಸಂತೋಷ್ ತನ್ನ ಹುಟ್ಟುಹಬ್ಬದ ಪ್ರಯುಕ್ತ ಪೂಜೆ ಸಲ್ಲಿಸಲು ಗುಂಡ್ಲುಪೇಟೆಯಿಂದ ಸಾರಿಗೆ ಬಸ್ಸಿನಲ್ಲಿ ತೆರಳಿದ್ರು ಈ ವೇಳೆ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಸಂತೇಬೋಳಿ ಪ್ರದೇಶದಲ್ಲಿ ಹುಲಿ ರಸ್ತೆ ಸಮೀಪವೇ ಮಲಗಿದ್ರೆ ಸಮೀಪದ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದೇ ಪ್ರದೇಶದಲ್ಲಿ ಇತ್ತೀಚೆಗೆ ಹುಲಿಯೊಂದು ಹಲವಾರು ಬಾರಿ ಭಕ್ತರಿಗೆ ಹುಲಿ ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಗೋಪಾಲನ ದರ್ಶನ ಪಡೆಯಲು ಹೋದ ಭಕ್ತರು ಚಿರತೆ ಹಾಗೂ ಹುಲಿ ಕಂಡು ಫುಲ್ ಫಿದಾ ಆಗಿ ಹೋಗಿದಾರೆ.