ಇನ್ಮುಂದೆ ರಾಜ್ಯ ಹೆದ್ದಾರಿಗಳಲ್ಲಿಯೂ ಟೋಲ್‍ಗಳ ಲೂಟಿ….

ಬೆಂಗಳೂರು, ನಿತ್ಯವಾಣಿ. ಏಪ್ರಿಲ್ 04 : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಹೆದ್ದಾರಿ ವಾಹನ ಸವಾರರಿಗೆ ಟೋಲ್ ಸುಂಕ ವಿಧಿಸುತ್ತಿತ್ತು. ಇತ್ತೀಚೆಗಷ್ಟೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಿ ವಾಹನ ಸವಾರರಿಗೆ ಫಾಸ್ಟ್ಯಾಗ್ ನುಂಗಲಾರದ ತುತ್ತಾಗಿತ್ತು. ಆದ್ರೆ ಕೇಂದ್ರದ ಹಾದಿಯಲ್ಲೇ ರಾಜ್ಯ ಸರ್ಕಾರ ಮುಂದುವರೆದು ರಾಜ್ಯ ಹೆದ್ದಾರಿ ಬಳಕೆದಾರರಿಗೆ ಬಿಗ್ ಶಾಕ್ ಕೊಟ್ಟಿದೆ.

ಇನ್ಮುಂದೆ ಹಳ್ಳಿಗಳಿಂದ ನಗರ, ಪಟ್ಟಣಗಳಿಗೆ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಬೇಕಂದರೂ ಸಹ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ರಾಷ್ಟ್ರೀಯ ಹೆದ್ದಾರಿಗಳ ಟೋಲ್‍ಗಳಲ್ಲಿ ಕಡ್ಡಾಯ ಫಾಸ್ಟ್ಯಾಗ್ ಬಳಕೆಯ ನಿಯಮ ಹೆದ್ದಾರಿ ಬಳಕೆದಾರರಿಗೆ ತಲೆ ಬಿಸಿಯಾಗಿತ್ತು, ಆದ್ರೆ ಇನ್ಮುಂದೆ ರಾಜ್ಯ ಹೆದ್ದಾರಿಗಳಲ್ಲಿ ಪ್ರಯಾಣ ಮಾಡಬೇಕೆಂದರೂ ಸಹ ಹಳ್ಳಿಗಳಿಂದ ನಗರ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಟೋಲ್ ಬೂತ್‍ಗಳು ಎದುರಾಗಲಿವೆ. ಈ ಮೂಲಕ ಹಳ್ಳಿಗಾಡುಗಳಲ್ಲಿಯೂ ರಾಜ್ಯ ಹೆದ್ದಾರಿ ಬಳಕೆ ಮಾಡುವ ವಾಹನ ಸವಾರರಿಗೆ ಟೋಲ್ ಶುಲ್ಕದ ಬಿಸಿ ತಟ್ಟಲಿದೆ. ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ ನಿಯಮಿತ ಹಾಗೂ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯವರು ಈಗಾಗಲೆ ಹೆಸರಾಂತ ಕಂಪನಿಗಳಿಂದ ಬಿಡ್ ಆಹ್ವಾನಿಸಿದ್ದಾರೆ. ರಾಜ್ಯ ಸರ್ಕಾರಗಳ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ 10 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಸರ್ಕಾರ ಬಿಡ್ ಆಹ್ವಾನಿಸಿರುವುದು ವಾಹನ ಸವಾರರಿಗೆ ತಲೆ ಬಿಸಿಯಾಗಿದೆ. ರಸ್ತೆ ಅಭಿವೃದ್ದಿ ಪ್ರಾಧಿಕಾರಗಳು ರಸ್ತೆ ಅಭಿವೃದ್ದಿ ಮಾಡಿ ಈಗ ಅಭಿವೃದ್ದಿ ವೆಚ್ಚ ಭರಿಸಲು ಸುಂಕ ವಸೂಲು ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. 1200 ಕೋಟಿ ವೆಚ್ಚದಲ್ಲಿ 617.19 ಕಿಲೋ ಮೀಟರ್ ಉದ್ದದ ರಾಜ್ಯ ಹೆದ್ದಾರಿ ನಿರ್ಮಿಸಿರುವ ಕೆಆರ್‍ಡಿಸಿಎಲ್ ಈ ಮೊತ್ತವನ್ನು ಬಳಕೆದಾರರ ಶುಲ್ಕದ ರೂಪದಲ್ಲಿ ಸಂಹ್ರಹಿಸುವ ಯೋಜನೆ ರೂಪಿಸಿಕೊಂಡಿದೆ.

ಎಲ್ಲಿಲ್ಲಿ ಟೋಲ್ ?
ರಾಜ್ಯ ಹೆದ್ದಾರಿ 40 – ಕೂಡ್ಲಗಿ – ಸಂಡೂರು ರಸ್ತೆಯ ಯಶವಂತ ನಗರ ಮತ್ತು ಬನಿಹಟ್ಟಿ ಗ್ರಾಮದ ಬಳಿ
ರಾಜ್ಯ ಹೆದ್ದಾರಿ 82 – ಹೊಸಕೋಟೆ – ಚಿಂತಾಮಣಿ ರಸ್ತೆಯ ಭೀಮಕ್ಕನಹಳ್ಳಿ ಮತ್ತು ಭೀಚಗೊಂಡನಹಳ್ಳಿ ಬಳಿರಾಜ್ಯ ಹೆದ್ದಾರಿ 1 – ಉಡುಪಿ – ಪಡುಬಿದ್ರೆ ರಸ್ತೆಯ ಕಂಚಿನಡ್ಕ ಹಾಗೂ ಹಾನಗಲ್ – ತಡಸದ ರಸ್ತೆಯ ಮಹಾರಾಜಪೇಟ್ ಬಳಿ
ರಾಜ್ಯ ಹೆದ್ದಾರಿ 84 – ಯಡಿಯೂರು – ಕೌಡ್ಲ 57 ರಸ್ತೆಯ ಚಾಕೇನಹಳ್ಳಿ ಹಾಗೂ ಗುಬ್ಬಿ ಸಿ.ಎಸ್ ಪುರ ಬೀರಗೋನಹಳ್ಳಿ ರಸ್ತೆಯ ಕೆ.ಎಸ್ ಪಾಳ್ಯ ಬಳಿ
ರಾಜ್ಯ ಹೆದ್ದಾರಿ 15 & 61: ತಿಂತಣಿ – ದೇವದುರ್ಗ ರಸ್ತೆಯ ಜಾಲಹಳ್ಳಿ ಮತ್ತು ಕಾಕರಗಲ ಗ್ರಾಮದ ಬಳಿ
ರಾಜ್ಯ ಹೆದ್ದಾರಿ 14 & 34: ಸವದತ್ತಿ – ಕಮಟಗಿ ರಸ್ತೆಯ ಹೂಳಿಕಟ್ಟಿ ಕುಲಿಗೆರೆ ಕ್ರಾಸ್ ಹಾಗೂ ಪಟ್ಟದಕಲ್ಲು ಗ್ರಾಮದ ಬಳಿ
ರಾಜ್ಯ ಹೆದ್ದಾರಿ 57: ಶಿವಮೊಗ್ಗ – ಶಿಕಾರಿಪುರ – ಹಾನಗಲ್ ರಸ್ತೆಯ ಕಲ್ಲುಪುರ ಮತ್ತು ಕುಟ್ರಹಳ್ಳಿ ಬಳಿ
ರಾಜ್ಯ ಹೆದ್ದಾರಿ 132: ಬಳ್ಳಾರಿ – ಮೋಕ ರಸ್ತೆಯ ಅಶೋಕನಗರ ಕ್ಯಾಂಪ್ ಬಳಿ

ಅಗತ್ಯ ವಸ್ತುಗಳ ಬೆಲೆ ಏರಿಕೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ನಡುವೆಯೂ ಈ ರೀತಿಯ ಶುಲ್ಕ ಸಂಗ್ರಹಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೇ ವಾಹನ ಖರೀದಿಸುವಾಗ ರೋಡ್ ಟ್ಯಾಕ್ಸ್ ಸೇರಿದಂತೆ ಪೆಟ್ರೋಲ್ ಡೀಸೇಲ್ ಹಾಕಿಸಿಕೊಳ್ಳುವಾಗಲು ಸೆಸ್ ರೂಪದಲ್ಲಿ ಸುಂಕ ಕಟ್ಟುತ್ತೇವೆ. ಆದ್ರೆ ಈಗ ಹಳ್ಳಿ ಹಳ್ಳಿಗಳಲ್ಲಿಯೂ ಸುಂಕ ವಸೂಲಾತಿ ಕೇಂದ್ರ ಸ್ಥಾಪಾನೆ ಮಾಡಲು ಯೋಜನೆ ರೂಪಿಸಿದ್ದು ಸರ್ಕಾರ ಸಾರ್ವಜನಿಕರ ಸ್ಥಿತಿಗತಿಗಳನ್ನ ಅರಿತುಕೊಂಡು ಕೂಡಲೇ ಈ ಯೋಜನೆ ಕೈ ಬಿಡಬೇಕೆಂದು ಸಾರ್ವಜನಿರು ಮನವಿ ಮಾಡಿದ್ದಾರೆ.

ಒಟ್ಟಾರೆ ಕೇಂದ್ರದ ಹಾದಿಯಲ್ಲಿ ರಾಜ್ಯ ಸರ್ಕಾರ ರಾಜ್ಯ ಹೆದ್ದಾರಿಗಳಲ್ಲೂ ಸುಂಕ ವಸೂಲಾತಿ ಕೇಂದ್ರ ಪ್ರಾರಂಭಿಸಲು ಯೋಜನೆ ರೂಪಿಸಿದೆ. ಈ ನಡುವೆಯೂ ರಾಜ್ಯದ ಕೆಲ ರಾಜ್ಯ ಹೆದ್ದಾರಿಗಳೇ ಈಗಾಗಲೆ ಸುಂಕ ವಸೂಲಾತಿ ಕೇಂದ್ರ ಆರಂಭವಾಗಿರುವುದು ಸ್ಥಳೀಯರು ತೀವ್ರ ವಿರೋದ ವ್ಯಕ್ತಪಡಿಸಿದ್ದು ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.

Leave a Reply

Your email address will not be published.