ರೈತರ ಕೃಷಿ ಬಿತ್ತನೆ ಚಟುವಟಿಕೆಗಳಿಗೆ ಹೊಲ ಉಳುಮೆ ಮಾಡಲು ಟ್ರಾಕ್ಟರ್ ಕಳುಹಿಸಿಕೊಡುವ ಕಾರ್ಯ ಆರಂಭ

ನಿತ್ಯವಾಣಿ,ಚಿತ್ರದುರ್ಗ(ಜೂ.09): ಜಿ.ರಘು ಆಚಾರ್ ಅಭಿಮಾನಿಗಳ ಬಳಗದಿಂದ ಆಯೋಜಿಸಲಾಗಿರುವ ರೈತರ ಜಮೀನುಗಳಲ್ಲಿ ಉಚಿತ ಟ್ರಾಕ್ಟರ್ ಬೇಸಾಯ ಹಾಗು ಬಿತ್ತನೆ ಕಾರ್ಯಕ್ಕೆ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು.

ಎಂಕೆ ಹಟ್ಟಿ ಪಂಚಾಯ್ತಿ ವ್ಯಾಪ್ತಿಯ ನರಸಿಂಹ ಮೂರ್ತಿ ಎಂಬ ರೈತರ ಜಮೀನಿನಲ್ಲಿ ಏರ್ಪಡಿಸಲಾಗಿದ್ದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣರು, ಟ್ರಾಕ್ಟರ್ ಬಿತ್ತನೆ ಯಂತ್ರಕ್ಕೆ ಬಿತ್ತನೆ ಬೀಜ ತುಂಬಿಸಿ, ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಮುರುಘಾ ಶರಣರು, ಮಾನವನಾದವನಿಗೆ ತನ್ನದಡೆ ಆದಂತ ಬದುಕು ಅನ್ನುವುದಿದೆ, ಆ ಬದುಕಿಗೆ ಪೂರೈಸುವ ಜವಾಬ್ದಾರಿ ಹೊಣೆಗಾರಿಕೆ ಕೃಷಿ ಕ್ಷೇತ್ರದ್ದೂ, ಅದರಲ್ಲೂ ವಿಶೇಷವಾಗಿ ಕೃಷಿಕರು ತಮ್ನ ಹೊಲಗಳಲ್ಲಿ ಅಹರ್ನಿಷಿಯಾಗಿ ದುಡಿಯುತ್ತ ತಾವು ಮುಂದೆ ಬಂದು ದೇಶವನ್ನ ಮುಂದೆ ತರುತ್ತಾರೆ. ಕಾರಣ ಇವತ್ತು ದುಡಿಮೆ ಅಂತರೆ ಹೊಲಗಳ ಹೊಣೆ. ಇದು ಬಹಳ ಬಹಳ ಮುಖ್ಯವಾದದ್ದು, ಕಾರಣ ಈ ದಿನಮಾನಗಳಲ್ಲಿ ಮಳೆ ಸುರಿತಾ ಇದೆ, ಆ ಮಳೆಯನ್ನು ನೋಡಿ ಹೊಲಗಳನ್ನ ಸಾಗುವಳಿ ಮಾಡುವಂತ, ಬಿತ್ತನೆ ಮಾಡುವಂತ ಇದೊಂದು ಉತ್ತಮವಾದಂತ ಪ್ರಕ್ರಿಯೆ, ಕೃಷಿ ಮಾನವ ಬದುಕಿಗೆ ಬೇಕಾಗುವಂತ ಎಲ್ಲಾ ಆಹಾರಾದಿಗಳನ್ನ ಉತ್ಪನ್ನಗಳನ್ನ ಮಾಡಿ ಕೊಡುತ್ತದೆ, ಇವತ್ತು ಉಚಿತವಾಗಿ ಟ್ರಾಕ್ಟರ್ ಗಳನ್ನ ರೈತರ ಹೊಲಗಳಿಗೆ ಕಳುಹಿಸಿ ಬಿತ್ತನೆ ಚಟುವಟಿಕೆಗಳಿಗೆ ಸಹಕಾರವನ್ನು ಮಾಡುತ್ತಿರುವಂತ ರಘು ಆಚಾರ್ ಅವರ ಇದೊಂದು ಒಳ್ಳೆಯ ಪ್ರಯತ್ನ ಅಂತ ಕಾಣಿಸುತ್ತಿದೆ. ರೈತರಿಗೆ ಇದು ಅತ್ಯಂತ ಸಹಕಾರಿಯಾಗಿದೆ, ಇಂತ ಒಂದು ವಿನೂತನವಾದ ಯೋಜನೆಯನ್ನ ಅವರು ಜನರಿಗೆ ಅದರಲ್ಲೂ ರೈತರಿಗೆ ಪರಿಚಯಿಸುತ್ತಿರವುದು ಒಂದು ಉತ್ತಮ ಬೆಳವಣಿಗೆ ಉತ್ತಮ ವಿದ್ಯಾಮಾನ ಎಂದು ನಾನು ಭಾವಿಸುತ್ತೇನೆ, ರೈತರಿಗೆ ಈ ರೀತಿಯಾಗಿ ಸಹಕಾರ ಕೊಡಲು ಮುಂದೆ ಬಂದಿರುವಂತಹ ರಘು ಆಚಾರ್ ರವರಿಗೆ ಎಲ್ಲಾ ರೀತಿಯಲ್ಲಿ ಶುಭವಾಗಲಿ ಎಂದು ಹಾರೈಸಿದರು..

ನಂತರ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್, ನಾನು ಎರಡು ಬಾರಿ ಪರಿಷತ್ ಗೆ ಆಯ್ಕೆಯಾದಾಗ ಕೇವಲ ಗ್ರಾಮ ಪಂಚಾಯತಿ ಸದಸ್ಯರು, ಪಿಡಿಒ, ಇಒ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಕೆಲಸಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಮಾತ್ರ ಅರಿವು ಇತ್ತು, ಆದರೆ ನಾನು ಹಿರಿಯೂರಿನಲ್ಲಿ ಕೃಷಿ ಮಾಡಲು ಆರಂಭಿಸಿದ ಮೇಲೆ ರೈತರ ಬದುಕು ಬವಣೆಗಳ ಬಗ್ಗೆ ತಿಳುವಳಿಕೆ ಬಂದಿದೆ. ಕೃಷಿಯಲ್ಲಿ ರೈತರುಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ, ಸಾಲ ಮಾಡಿ ಬೇಸತ್ತು ಹೋಗಿರುವ ರೈತರಿಗೆ ಏನಾದರೂ ಸಹಕಾರಿ ಆಗುವಂತ ಕೆಲಸ ಮಾಡಬೇಕೆಂಬ ಮನಸಾಯಿತು, ಈ ಬಗ್ಗೆ ಮುರುಘಾ ಶರಣರ ಜೊತೆ ಚರ್ಚಿಸಿ, ಅವರ ಮಾರ್ಗ ಸರ್ಶನದಲ್ಲಿ ನನ್ನ ಅಭಿಮಾನಿಗಳ ಬಳಗದಿಂದ ಚಿತ್ರದುರ್ಗ ತಾಲೂಕಿನ ರೈತರ ಕೃಷಿ ಬಿತ್ತನೆ ಚಟುವಟಿಕೆಗಳಿಗೆ ಹೊಲ ಉಳುಮೆ ಮಾಡಲು ಟ್ರಾಕ್ಟರ್ ಕಳುಹಿಸಿಕೊಡುವ ಕಾರ್ಯ ಆರಂಭಿಸಿದ್ದೇನೆ, ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಿಗೂ ವಿಸ್ತರಿಸುವ ಗುರಿ ಹೊಂದಿದ್ದೇನೆ, ಇದು ಯಾವುದೇ ರಾಜಕೀಯ ಪ್ರೇರಿತವಿಲ್ಲ, ಪಕ್ಷಾತೀತವಾಗಿ ಮಾಡುತ್ತಿರುವ ಜನಪರ ಸೇವೆಯೇ ಹೊರತು ಚುನಾವಣೆಯ ದೃಷ್ಟಿಯಿಂದಲ್ಲ ಎಂದರು.

 

 

Leave a Reply

Your email address will not be published.