ಚಿತ್ರದುರ್ಗ ಜ. 19
ಇಂದು ಹೆಚ್ಚು ಹೆಚ್ಚು ಅಗ್ನಿ ಅವಘಡಗಳು ಸಂಭವಿಸುತ್ತಿದ್ದು ಪ್ರತಿಯೊಬ್ಬರಿಗೂ ಅಗ್ನಿ ಅವಘಡಗಳ ಬಗ್ಗೆ ಸದಾ ಮುನ್ನೆಚ್ಚರಿಕೆ ಇರಬೇಕು ಇಲ್ಲದಿದ್ದರೇ ಪ್ರಾಣಹಾನಿ ಸಂಭವಿಸುತ್ತವೆ ಎಂದು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿ ಮಹಾಲಿಂಗಪ್ಪ ಹೇಳಿದರು.
ಅವರು ಜಿಲ್ಲಾ ಶಸ್ತ್ರಾಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳಿಗೆ ಹಾಗೂ ವಾಹನ ಚಾಲಕರಿಗೆ ಹಮ್ಮಿಕೊಂಡಿದ್ದ ಅಗ್ನಿ ಜಾಗೃತಿ, ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದುವಾಹನಗಳಲ್ಲಿ ಅಗ್ನಿ ಅವಘಡಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಚಾಲಕರು ಈ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದರು.
ಸರ್ಕಲ್ ಇನ್ಸ್ ಪೆಕ್ಟರ್ ಸೋಮಶೇಖರ್ ಅಗ್ನಿ ನಂದಕ ಬಳಸುವುದು ಹೇಗೆಂದು ಖುದ್ದು ಪ್ರಾಯೋಗಿಕವಾಗಿ ಬಳಸುವ ಮೂಲಕ ಮಾಹಿತಿ ಪಡೆದು ಮಾತನಾಡಿ ಪೆÇಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ ಈ ಬಗ್ಗೆ ಜಾಗೃತಿ ಅಗತ್ಯವಾಗಿದ್ದು, ವಾಹನಗಳಲ್ಲಿ ಅವಘಡಗಳು ನಡೆದಾಗ ಕೂಡಲೇ ಬಳಸಿ ದುರಂತ ತಪ್ಪಿಸಬಹುದು ಎಂದರು.
ಇದೇ ವೇಳೆ ನ್ಯಾಷನಲ್ ಮೀಡಿಯಾ ಕೌನ್ಸಿಲ್ ನಿರ್ದೇಶಕ ಮಾಲತೇಶ್ ಅರಸ್ ಮಾತನಾಡಿ, ಪೆÇಲೀಸ್ ಇಲಾಖೆ ಮತ್ತು ಅಗ್ನಿ ಶಾಮಕ ಇಲಾಖೆ ಎರಡು ಶ್ರಮದ ಕೆಲಸಗಳು. ಅದರಲ್ಲೂ ಬೆಂಕಿ ಕಂಡಾಗ ಎಲ್ಲರೂ ದೂರ ಹೋಗುತ್ತಾರೆ ಆದರೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಜೀವ ಭಯವಿಲ್ಲದೆ ನಮಗಾಗಿ ಹೋರಾಡುತ್ತಾರೆ. ಅಪಾಯಕಾರಿ ಜಾಗದಲ್ಲಿ ಅವರ ಸೆಣೆಸಾಟ ಭಯತರಿಸುತ್ತದೆ. ಕೊರೋನಾ ಕಾಲದಲ್ಲಿ ಅವರ ಸೇವೆ ಅಪಾರವಾಗಿತ್ತು ಎಂದರು.
ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯವೀರೇಶ್ ಓಂಕಾರಪ್ಪ, ಸೈಯದ್ ಸಕ್ಲೈನ್ ಇತರರು ಭಾಗವಹಿಸಿದ್ದರು.