ಚಿತ್ರದುರ್ಗ ಭಾವಸಾರ ಸಾಹಿತ್ಯ ವೇದಿಕೆ ವತಿಯಿಂದ ಅಗಲಿದ ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ ನವರಿಗೆ ಶ್ರದ್ಧಾಂಜಲಿ

ನಿತ್ಯವಾಣಿ,ಚಿತ್ರದುರ್ಗ,(ಜೂ.14 )   : ಸಿದ್ಧಲಿಂಗಯ್ಯನವರು ಬರವಣಿಗೆಯಲ್ಲಿ ತೊಡಗಿದಾಗ ಅಲ್ಲಿಯವರೆಗೂ ಇದ್ದ ಕನ್ನಡ ಸಾಹಿತ್ಯದ ಮಡಿವಂತಿಕೆಯಿಂದ ಹೊರಬಂದು ” ಇಕ್ರಲಾ ವದಿರ್ಲಾ’ ಎನ್ನುವ ಹೊಸತೊಂದು ಬಂಡಾಯದ ಭಾಷೆಯ ಹಾದಿಯನ್ನು ತೋರಿಸಿಕೊಟ್ಟವರು ನಾಡೋಜ ಕವಿ ಸಿದ್ಧಲಿಂಗಯ್ಯ” ಎಂದು ಭಾವಸಾರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಕೆ.ರವಿಅಂಬೇಕರ್ ಹೇಳಿದರು.
ಇಂದು ಚಿತ್ರದುರ್ಗ ಕೋಟೆ ಆವರಣದಲ್ಲಿ ಚಿತ್ರದುರ್ಗ ಭಾವಸಾರ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಮ್ಕಿಕೊಂಡಿದ್ದ ಅಗಲಿದ ಹಿರಿಯ ಕವಿ ಡಾ.ಸಿದ್ಧಲಿಂಗಯ್ಯನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಡಾ.ಸಿದ್ಧಲಿಂಗಯ್ಯನವರ ಬರವಣಿಗೆಯಲ್ಲಿ ಸಮಾಜದ ದೀನ ದಲಿತರ ಉದ್ಧಾರಕ್ಕಾಗಿ ಎಷ್ಟು ಬಂಡಾಯವಿರುತ್ತಿತ್ತೊ ಅದಕ್ಕಿಂತಲೂ ಹೆಚ್ಚಾಗಿ ಅವರ ಎದೆಯೊಳಗೊಬ್ಬ ಅದನ್ನು ಹೆಚ್ಚಿನ ಜನರು ಗುರುತಿಸಲಿಲ್ಲ ಬದಲಾಗಿ ಅವರನ್ನು ದಲಿತ ಬಂಡಾಯ ಕವಿಯೇಂದೇ ಬಿಂಬಿಸಲಾಯಿತು. ಸಿದ್ಧಲಿಂಗಯ್ಯ ಒಬ್ಬ ಪ್ರೇಮ ಕವಿ ಅನ್ನುವುದಕ್ಕೆಅವರು ಬರೆದ ‘ ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗಳತಿ’ ಎನ್ನುವ ಪ್ರೇಮ ಕವಿತೆ ಉಡ ಉದಾಹರಣೆಯಾಗಿದೆ. ಅವರು ಯಾವತ್ತಿಗೂ ದಲಿತರ ಶೋಷಿತರ ದನಿಯಾಗಿರುತ್ತಿದ್ದ ಸಿದ್ಧಲಿಂಗಯ್ಯನವರ ಅಗಲಿಕೆ ಕನ್ನಡ ಸಾಹಿತ್ಯದಲ್ಲಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ” ಎಂದು ಅಗಲಿದ ಹಿರಿಯ ಕವಿಗೆ ಸಂತಾಪ ಸೂಚಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಸಾರ ಸಾಹಿತ್ಯ ವೇದಿಕೆಯ ಸದಸ್ಯರಾದ ಎಂ.ಆರ್.ಮಂಜುನಾಥ್, ರಮೇಶ್ ಕುಮಾರ್, ಶ್ರೀಮತಿ ಮಂಜುಳಾ ರಾಜೇಶ್, ವಸಂತಲಕ್ಷ್ಮಿ, ಮಂಗಳಮ್ಮ ಹಾಗೂ ಸಿದ್ಧಲಿಂಗಯ್ಯ ನವರು ಅಭಿಮಾನಿಗಳು ಭಾಗವಹಿಸಿದ್ದರು.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com

 

Leave a Reply

Your email address will not be published.