ಕೌಶಲ್ಯ ಅಭಿವೃದ್ದಿ ತರಬೇತಿ ಮೂಲಕ ಎಲ್ಲರೂ ಮುಂದೆ ಬರಬೇಕು :: ಶ್ರೀಮಾದಾರ ಚನ್ನಯ್ಯ ಸ್ವಾಮೀಜಿ

 

ಚಿತ್ರದುರ್ಗ:ಫೆ.08: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಐಎಎಸ್, ಕೆಎಎಸ್ ಸೇರಿದಂತೆ ಯಾವುದನ್ನಾದರೂ ಓದಬೇಕಾದರೆ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಳ್ಳಬೇಕು ಮತ್ತು ನವಯುಗಕ್ಕೆ ಡಿಜಿಟಲ್ ತಂತ್ರಜ್ಞಾನ ಅತ್ಯುತ್ತಮ ಮಹಾಸಾಧನವಾಗಿದೆ ಎಂದು ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ನಂದಿನಿದೇವಿ ಅವರು ಹೇಳಿದರು.
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಮೀಪದ ಸರ್ಕಾರಿ ಬಾಲಕಿಯರ ವೃತ್ತಿಪರ ವಿದ್ಯಾರ್ಥಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ, ವಂದೇಮಾತರಂ ರಾಷ್ಟ್ರೀಯ ಪ್ರತಿಷ್ಠಾನ, ಮಾತೃಭೂಮಿ ಕೌಶಲ್ಯಾಭಿವೃಧ್ಧಿ ತರಬೇತಿ ಕೇಂದ್ರ ಚಿತ್ರದುರ್ಗ. ಸಿಎಸ್‍ಸಿ, ಸೇವಾಸಿಂಧು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಧಾನಮಂತ್ರಿ ಡಿಜಿಟಲ್ ಸಾಕ್ಷರತಾ ಅಭಿಯಾನ್, ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಜಾಗೃತಿ ಕುರಿತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿಶ್ವಮಟ್ಟದಲ್ಲಿ ಇಂದು ಡಿಜಿಟಲ್ ಇಂಡಿಯಾ ಎಂಬುದು ವಿಶೇಷ ಶಕ್ತಿಯಾಗಿ ಹೊರಹೊಮ್ಮಿದೆ. ಇಂದು ನಾವು ಪ್ರತಿಹಂತದಲ್ಲೂ ಆನ್‍ಲೈನ್ ಡಿಜಿಟಲ್ ಮಾಧ್ಯಮವನ್ನು ಅನುಸರಿಸುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಡಿಜಿಟಲ್ ಸಾಕ್ಷರತಾ ಹೆಚ್ಚುಪ್ರಮಾಣದಲ್ಲಿ ಮಾಡುವ ಮೂಲಕ ರಾಜ್ಯದ ನಂಬರ್ ಒನ್ ಸ್ಥಾನಕ್ಕೆ ಬರಲಿ. ಮತ್ತು ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನದ ಜಾಗೃತಿಯನ್ನು ಹೊಂದುವ ಮೂಲಕ ಮುಂದಿನ ದಿನಗಳಲ್ಲಿ ಉನ್ನತಿ ಸಾಧಿಸಿ ಎಂದು ತಿಳಿಸಿದರು.
ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ ಮಾತನಾಡಿ, ದೇಶದ ರಕ್ಷಣಾ ಕಾರ್ಯದಲ್ಲಿ ಡಿಜಿಟಲ್ ಸಾಧನ ಇಂದು ಅತ್ಯಂತ ಸೂಕ್ಷ್ಮವಾಗಿ ಕೆಲಸ ಮಾಡುತ್ತಿದೆ. ದೇಶದ ಯಾವುದೇ ಗಡಿಯಲ್ಲಿ ಸೈನಿಕ ಮಾಡುವ ಕಾರ್ಯವನ್ನು ಡಿಜಿಟಲ್ ಸಾಧನ ಮಾಡುತ್ತಿವೆ. ದಡ್ಡಕಾಡು, ನೀರೊಳಗೆ ಎಲ್ಲಿ ಏನಿದ್ದರೂ ಅದನ್ನು ಪತ್ತೆ ಮಾಡುವ ಕಾರ್ಯದಲ್ಲಿ ಡಿಜಿಟಲ್ ಮೇಲುಗೈ ಸಾಧಿಸಿದೆ ಎಂದರು.
ಇಂದು ಕೌಶಲ್ಯದಿಂದ ವೃತ್ತಿಯನ್ನ ನಾವು ಆಯ್ಕೆಮಾಡಬೇಕಿದೆ. ಕೌಶಲ್ಯ ಅಭಿವೃದ್ದಿ ತರಬೇತಿ ಮೂಲಕ ಎಲ್ಲರೂ ಮುಂದೆ ಬರಬೇಕು, ಹಿಂದೆ ನಾವು ಮರಳು, ಸ್ಲೇಟ್, ಮಣಿ, ಕೀಲಿಮಣಿ ಮೂಲಕ ಶಿಕ್ಷಣ ಮಾಡುತ್ತಿದ್ದೇವೆ ಈಗ ಕಾಲ ಬದಲಾಗಿದೆ ಕಂಪ್ಯೂಟರ್, ಟ್ಯಾಬ್ಲಾಡ್, ಮೊಬೈಲ್ ಮೂಲಕ ಅದರಲ್ಲೂ ಕೊರೊನಾ ಸಮಯದಿಂದ ಆನ್‍ಲೈನ್ ಶಿಕ್ಷಣಕ್ಕೆ ತನ್ನದೇ ಆದ ಸ್ಥಾನ ಬಂದಿದೆ. ಇದೇ ಡಿಜಿಟಲ್ ಹಾಗಾಗಿ ಎಲ್ಲರೂ ಡಿಜಿಟಲ್ ಜಗತ್ತಿನ್ನು ಅರಿಯಬೇಕು ಎಂದರು
ಅಪರ ಜಿಲ್ಲಾಧಿಕಾರಿಗಳಾದ ಈ. ಬಾಲಕೃಷ್ಣಪ್ಪ ಅವರು ಮಾತನಾಡಿ, ಹತ್ತು ಹದಿನೈದು ದಶಕಗಳ ಹಿಂದೆ ಸರ್ಕಾರವು ಅನಕ್ಷರತೆ ತೊಲಗಿಸಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಸಾಕ್ಷರತಾ ಪ್ರಮಾಣ ಹೆಚ್ಚಸಲಾಯಿತು. ಇಂದು ಡಿಜಿಟಲ್ ಸಾಕ್ಷರತಾ ಅಭಿಯಾನದ ಮೂಲಕ ದೇಶವನ್ನು ಮಾದರಿ ಮಾಡಬೇಕಿದೆ. ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾಹಿತಿ ಹೆಚ್ಚು ಹೆಚ್ಚು ಅನುಕೂಲ ಮಾಡಲಿದೆ, ನೀವು ಪಡೆಯುವ ಡಿಜಿಟಲ್ ಪ್ರಮಾಣ ಪತ್ರ ಅತ್ಯಂತ ಉಪಯುಕ್ತ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಓ.ಪರಮೇಶ್ವಪ್ಪ ಮಾತನಾಡಿ, ಅಂಬೇಡ್ಕರ್ ಚಿಂತನೆಗಳು ದೇಶಕ್ಕೆ ಮಾದರಿಯಾಗಿವೆ. ಮಾತೃಭೂಮಿ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದ ಮೂಲಕ ಉಚಿತವಾಗಿ ಮಾಡುತ್ತಿರುವ ಇಂತಹ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಹೆಚ್ಚು ಜಾÐನಿಗಳಾಗಬೇಕು. ಇಂತಹ ಸುವರ್ಣಾವಕಾಶವನ್ನು ನಾವು ಸದುಪಯೋಗ ಪಡಿಸಿಕೊಂಡು ಮಾದರಿಯಾಗಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಪಿ.ಮಮತಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾತೃಭೂಮಿ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದ ಕಾರ್ಯದರ್ಶಿ ಬಿ.ಜೆ.ಶೃತಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಓ.ಪರಮೇಶ್ವಪ್ಪ, ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕರಾದ ಎನ್.ವಿ.ಶ್ರೀನಿವಾಸ್, ಸೇವಾಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಎಚ್.ಎನ್.ಸಮರ್ಥ್, ವಂದೇಮಾತರಂ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಮಾಲತೇಶ್ ಅರಸ್ ಹರ್ತಿಕೋಟೆ, ಚಿತ್ರದುರ್ಗ ಜಿಲ್ಲಾ ಸಿಎಸ್‍ಸಿ ವಿಎಲ್‍ಇ ಸೊಸೈಟಿ ಅಧ್ಯಕ್ಷರಾದ ವಿ.ಎಸ್.ಮೋಹನ್ ಮಾತನಾಡಿದರು.

ವಿದ್ಯಾರ್ಥಿನಿಲಯ ಮೇಲ್ವಿಚಾರಕರಾದ ಡಿ.ಓ. ಯಶೋದಮ್ಮ ಎಸ್.ಆರ್.ಅನಿತಾ, ಎನ್.ಪಿ.ಮಂಜುಳ. ಕಂಪ್ಯೂಟರ್ ಶಿಕ್ಷಕರಾದ ಮೇಘನಾ. ಪೂಜಾ ಆರ್. ಪೂಜಾ ಎಸ್. ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಲಾಯಿತು.

“ಮಾತೃಭೂಮಿ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದ ಕಾರ್ಯದರ್ಶಿ ಬಿ.ಜೆ.ಶೃತಿ ಮಾತನಾಡಿ ಉದಾರಿಕರಣ, ಜಾಗತೀಕರಣ, ಖಾಸಗೀಕರಣದಂತೆ ಇಂದು ಭಾರತ ಡಿಜಿಟಲೀಕರಣವಾಗಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ. ಇಂದು ಸ್ಥಳೀಯವಾಗಿ ಡಿಜಿಟಲೀಕಣ ಮಾಡುವ ಕಾರ್ಯ ನಮ್ಮ ಮೇಲಿದೆ. ವಿಡಿಯೋ ಕಾನ್ಪ್‍ರೆನ್ಸ್, ಜೂಮ್ ಮಿಟಿಂಗ್‍ಗಳು ಡಿಜಿಟಲೀಕರಣದ ಸಾಕ್ಷಿಯಾಗಿವೆ. ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರಿಗೆ ಇಂದು ಡಿಜಿಟಲ್ ತಂತ್ರಜ್ಞಾನ ಅವಶ್ಯಕವಾಗಿದೆ ಎಂದರು”.

Leave a Reply

Your email address will not be published.