ದೇವನಹಳ್ಳಿಯಲ್ಲಿ 2 ಭೀಕರಕೊಲೆ

ಮಗಳನ್ನು ಮದುವೆಯಾಗದೇ ಪಾಪು ಕೊಟ್ಟ ಅಳಿಯನಿಗೆ ಮದುವೆಯಾಗುವಂತೆ ಒತ್ತಾಯ ಮಾಡಿದ್ದಕ್ಕೆ ಈ ಅಳಿಯ ಹೆಂಡತಿಯನ್ನು ಮಾತ್ರವಲ್ಲದೇ ಆಕೆಯ ತಾಯಿಯನ್ನೂ ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.

ನಿನ್ನೆ ಮಧ್ಯರಾತ್ರಿ ಈ ಭಯಾನಕ ಕೃತ್ಯ ದೇವನಹಳ್ಳಿ ತಾಲ್ಲೂಕಿನ ಬೈಚಾಪುರದಲ್ಲಿ ಜರುಗಿದ್ದು, ನಂತರ ಆರೋಪಿ ಪಾಪುವಿನ ಜತೆ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ!

ಒಡಿಶಾ ಮೂಲದ ಮಲಯ ಫರಿದ್​ ಎಂಬ 40 ವರ್ಷದ ವ್ಯಕ್ತಿ ಈ ಕೊಲೆ ಮಾಡಿರುವ ಆರೋಪಿ. ಈತನ ಕೃತ್ಯಕ್ಕೆ ಅತ್ತೆ ಲಕ್ಷ್ಮಿ ದೇವಿ (50) ಹಾಗೂ ಪತ್ನಿ ರಮಾದೇವಿ (30) ಪಟ್ಟಿದ್ದಾರೆ.

ಮಲಯ ಮತ್ತು ರಮಾದೇವಿ ಒಟ್ಟಿಗೇ ಇದ್ದರು. ಆದರೆ ಮದುವೆಯಾಗಿರಲಿಲ್ಲ. ಅವರಿಗೆ ಐದು ತಿಂಗಳ ಮಗು ಇತ್ತು. ಇದೇ ಕಾರಣಕ್ಕೆ ಅಳಿಯ ಎಲ್ಲಿ ತನ್ನ ಮಗಳಿಗೆ ಕೈಕೊಟ್ಟು ಹೋಗುತ್ತಾನೋ ಎನ್ನುವ ಭಯದಲ್ಲಿ ರಮಾದೇವಿಯ ಅಮ್ಮ ಲಕ್ಷ್ಮಿ ಅವರು, ಮಗಳನ್ನು ಮದುವೆಯಾಗುವಂತೆ ಮಲಯನಿಂದ ಒತ್ತಾಯ ಮಾಡುತ್ತಿದ್ದರು. ಇದರಿಂದ ಕುಪಿತಗೊಂಡ ಆರೋಪಿ ಮಧ್ಯರಾತ್ರಿ ಅತ್ತೆ ಕತ್ತು ಕೊಯ್ದು ಕೊಂದಿದ್ದಾನೆ. ನಂತರ ವಿಚಾರವನ್ನು ಹೆಂಡತಿಯನ್ನು ಎಬ್ಬಿಸಿ ತಿಳಿಸಿದ್ದಾನೆ.

ವಿಷಯ ತಿಳಿದು ಗಾಬರಿಯಿಂದ ಕಿರುಚಿದ ಪತ್ನಿಯನ್ನು ಸಹ ನಂತರ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆತನೇ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದು, ಮರಣೊತ್ತರ ಪರೀಕ್ಷೆಗೆ ಮೃತ ದೇಹವನ್ನು ರವಾನಿಸಿದ್ದಾರೆ.

Leave a Reply

Your email address will not be published.