ಜಿ ರ್ ಹಳ್ಳಿ ಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ

ನಿತ್ಯವಾಣಿ, ಚಿತ್ರದುರ್ಗ,(ನ.1) :     ಬಿಜೆಪಿ ಸರ್ಕಾರದ ಅವಧಿ ಮುಗಿಯುವುದರೊಳಗೆ ನಾಯಕ ಜನಾಂಗಕ್ಕೆ 7.5 ಮೀಸಲಾತಿ ಕೊಡಿಸಿಯೇ ತೀರುವೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ ಶ್ರೀರಾಮುಲು ತಿಳಿಸಿದರು.

ಅವರು ಚಿತ್ರದುರ್ಗ ತಾಲ್ಲೂಕಿನ ಗುಡ್ಡದ ರಂಗ್ವನಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಗೊಳಿಸಿದ ನಂತರ ವೇದಿಕೆ ಕಾರ್ಯಕ್ರಮ ದಲ್ಲಿ ಮಾತನಾಡಿ ಜನಾಂಗದ ಬಹಳ ದಿನಗಳ ಬೇಡಿಕೆಯಾದ ಮೀಸಲಾತಿ ಹೆಚ್ಚಿಸುವ ವಿಚಾರ ಪ್ರಸ್ತಾಪಿಸಿ ಬಸವರಾಜ ಬೊಮ್ಮಾಯಿ ಮುಖ್ಯ ಮಂತ್ರಿಗಳಾದ ಮೇಲೆ ನಾಯಕ ಜನಾಂಗಕ್ಕೆ ಪ್ರತ್ಯೇಕ ಸಚಿವಾಲಯ ಜೊತೆಗೆ ಪ್ರತ್ಯೇಕ ಸಚಿವರನ್ನು ನೇಮಕ ಮಾಡಿದೆ ಈ ಜವಬ್ದಾರಿ ನನ್ನ ಹೆಗಲ ಮೇಲಿರುವುದ ರಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಜನಾಂಗದ ಏಳಿಗೆಗೆ ಅನೇಕರ ಜನಪರ ಯೋಜನೆಗಳು ಇವೆ ಅವುಗಳಲ್ಲಿ ಮುಖ್ಯವಾಗಿ ಭೂ ಒಡೆತನ ಯೋಜನೆ, ಗಂಗಾಕಲ್ಯಾಣ,ನೇರ ಸಾಲ ,ವಾಹನ ಸಾಲ , ಕೈಗಾರಿಕಾ ಸ್ಥಾಪನೆಗೆ ಸಾಲ, ಗೃಹಸಾಲ ಮತ್ತಿತರೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಯು ಜನಪರ ಯೋಜನೆ ಜಾರಿಮಾಡಲಾಗಿದೆ ,
ಸಂವಿಧಾನದ ರಚನೆಕಾರ ಡಾ.ಬಿ.ಆರ್.ಅಂಬೇಡ್ಕರ್ ಹೇಳುವಂತೆ ವ್ಯಕ್ತಿ ಎಷ್ಟೇ ದೊಡ್ಡವನಾಗಿ ಬೆಳೆಯ ಬೇಕಂದರು ಶಿಕ್ಷಣದ ಅವಶ್ಯಕತೆ ತುಂಬಾ ಅಗತ್ಯ ಅಂಬೇಡ್ಕರ್ ಆದರ್ಶದಂತೆ ತಳಸಮೂದಾಯಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಾಗ ಮಾತ್ರ ಉನ್ನತ ಸ್ಥಾನಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು

ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ ಎಲ್ಲಾ ಜನಾಂಗದವರಿರುವ ಗ್ರಾಮದಲ್ಲಿ ಮಹಾ ಸಂತ ಮಹರ್ಷಿಗಳ ಪುತ್ಥಳಿ ಲೋಕಾಪರ್ಣೆ ಯಾಗಿದ್ದು ಇಲ್ಲಿನ ಸಾಮರಸ್ಯವನ್ನು ತೋರಿಸುತ್ತದೆ ಶರಣ ಸಂಸ್ಕೃತಿ ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದಂತೆ ಕೈಗಾರಿಕಾ ಕಾರಿಡಾರ್ ಮಾಡಲು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿ ಒಂದು ಸಾವಿರ ಎಕರೆ ಜಮೀನು ಗುರುತಿಸಲು ತಿಳಿಸಿಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಪ್ರೊಫೆಸರ್ ಗುಡ್ಡದೇಶಪ್ಪ ಮಾತನಾಡಿದರು

ಕಾರ್ಯಕ್ರಮದಲ್ಲಿ ರಾಜನಹಳ್ಳಿ ಗುರುಪೀಠದ ಪುಣ್ಯಾನಂದಪುರಿ ಸ್ವಾಮೀಜಿ ,ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ,ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ,ಚಿತ್ರದುರ್ಗ ನಗರ ಸಭಾ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ,ಕಾರ್ಯಕ್ರಮದ ಅಧ್ಯಕ್ಷತೆ ಚಿತ್ರದುರ್ಗ ನಗರಸಭೆ ಸದಸ್ಯರಾದ ವೆಂಕಟೇಶ್ ವಹಿಸಿದ್ದರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಹೊನ್ನೂರಪ್ಪ ಮತ್ತು ಗುಡ್ಡದ ರಂಗವ್ವನ ಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಜನಾಂಗದ ಮುಖಂಡರು ಇತರ ರಿದ್ದರು

Leave a Reply

Your email address will not be published.