ರಾಜ್ಯಪಾಲರಿಗೆ ದೂರು ನೀಡಿರುವ ಸಚಿವ ಈಶ್ವರಪ್ಪನವರ ನಿಲುವು ಸರಿ ಇದೆ ಎಂದು ವಾಟಾಳ್ ನಾಗರಾಜ್

 

ಚಿತ್ರದುರ್ಗ, ನಿತ್ಯವಾಣಿ, ಏ. 2 : ಸಿಎಂ ಬಿ.ಎಸ್ ಯಡಿಯೂರಪ್ಪ ಸರ್ವಾಧಿಕಾರಿ, ಅವರು ಎಲ್ಲದಕ್ಕೂ ಕೈ ಹಾಕುತ್ತಾರೆ. ರಾಜ್ಯಪಾಲರಿಗೆ ದೂರು ನೀಡಿರುವ ಸಚಿವ ಈಶ್ವರಪ್ಪನವರ ನಿಲುವು ಸರಿ ಇದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ಹೋಗುವ ದಾರಿ ಮಧ್ಯೆದಲ್ಲಿ ನಗರದ ಹೊರ ವಲಯದಲ್ಲಿರುವ ಸೀಬಾರ ಬಳಿಯ ಎಸ್.ನಿಜಲಿಂಗಪ್ಪ ಸಮಾಧಿಗೆ ಹಾರ ಹಾಕಿ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿ ಸಚಿವರ ಖಾತೆಗಳಿಗೆ ಸಿಎಂ ಕೈ ಹಾಕಿ ಬೀಗರಿಗೆ, ಹಾಗೂ ತಮಗೆ ಬೇಕಾದವರಿಗೆ ಹಣ ಕೊಟ್ಟರೆ ಇವರೆಲ್ಲಾ ಯಾಕೆ ಮಂತ್ರಿಗಳು ಆಗಿರಬೇಕು ಎಂದು ವಾಟಾಳ್ ಪ್ರಶ್ನೆ ಮಾಡಿದರು.

ಬಿ ಜೆ ಪಿ ಮಂತ್ರಿ ಮಂಡಲದ ಮಂತ್ರಿಗಳಿಗೆ ಅವರದೆ ಆದ ಸ್ವಾತಂತ್ರ ಇದ್ದೇ ಇದೆ. ಆದ್ದರಿಂದ ಕೆಎಸ್ ಈಶ್ವರಪ್ಪನವರ ವಾದವನ್ನ ನಾನು ಬೆಂಬಲಿಸುತ್ತೇನೆ. ನನ್ನ ಖಾತೆ ಕೈ ಹಾಕಬಾರದು ಎಂದು ಈಶ್ವರಪ್ಪ ಪ್ರಾಮಾಣಿಕವಾಗಿ ಹೇಳಿದ್ದಾರೆ. ಇದರಲ್ಲಿ ಸಿಎಂ ಯಡಿಯೂರಪ್ಪ ನವರನ್ನ ಬೆಂಬಲಿಸಲು ಕೆಲ ಶಾಸಕರು ಹೊರಟಿದ್ದಾರೆ ಇದು ಒಳ್ಳೆಯದಲ್ಲ. ಸಿಎಂ ಹಸ್ತಕ್ಷೇಪ ಸರಿಯಲ್ಲ ಅದು ಸರ್ವಾಧಿಕಾರಿ ಮನೋಭಾವ. ಇದು ಈ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆ ಎಂದಿದ್ದಾರೆ ವಾಟಾಳ್ ನಾಗರಾಜ್ ತಿಳಿಸಿದರು.

ರಾಜ್ಯದಲ್ಲಿ ಬಿಎಸ್ ವೈ ನೇತೃತ್ವದ ಸರ್ಕಾರ ಕಂಪನಿ ಸರ್ಕಾರವಿದ್ದಂತೆ, ಇವರು ವ್ಯಾಪಾರದ ಸರ್ಕಾರವನ್ನು ಅಂಗಡಿ ಮಾಡಿಕೊಂಡಿದ್ದು ವರ್ಗಾವಣೆಗಾಗಿ ರೇಟ್ ಫಿಕ್ಸ್ ಆಗಿದೆ. ಬಿ.ಎಸ್.ಯಡಿಯೂರಪ್ಪ ಕಂಪನಿ ಹೋಗಬೇಕು, ಇಲ್ಲವಾದಲ್ಲಿ ರಾಜ್ಯಕ್ಕೆ ಇದು ತುಂಬಾ ಅಪಾಯ. ಮಠಾಧೀಶರು ಬಿಎಸ್ ವೈ ಗೆ ಬೆಂಬಲ ನೀಡುವುದು ನಿಲ್ಲಿಸಲಿ. ಇಲ್ಲವಾದಲ್ಲಿ ನಿಮ್ಮ ಇತಿಹಾಸಕ್ಕೆ ಒಳ್ಳೆಯದಾಗಲ್ಲ. ಇವರು ಈ ಕೂಡಲೆ ಹೋಗಬೇಕು ಇಲ್ಲವಾದಲ್ಲಿ ಅರಾಜಕತೆ ಶುರುವಾಗುತ್ತೆ. ರಾಜ್ಯದಲ್ಲಿ ಬೇಗ ಚುನಾವಣೆ ಬರಬೇಕು, ಅರಾಜಕತೆ ಸೃಷ್ಠಿ ಆಗಲು ಬಿಡಬಾರದು ಎಂದು ಬಿ ಎಸ್ ವೈ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ರಾಜ್ಯ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ, ಇವತ್ತಿನ ರಾಜಕಾರಣ ಹದಗೆಟ್ಟಿದೆ. ಕೋಮುವಾದಿಗಳ ಕೂಟ, ಭ್ರಷ್ಟಚಾರಿಗಳ ಕೂಟ ಅಧಿಕಾರ ನಡೆಸುತ್ತಿದೆ ಯಡಿಯೂರಪ್ಪನವರು ರಾಜ್ಯದಲ್ಲಿ ಕಂಪನಿ ಆಡಳಿತ ನಡೆಸುತ್ತಿದ್ದಾರೆ. ಸರ್ವಾಧಿಕಾರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿದೆ, ಪ್ರಮಾಣಿಕ ಆಡಳಿತವಿಲ್ಲ. ಅಧಿಕಾರಿಗಳು ಏಜೆಂಟ್ ಗಳಾಗಿ, ಗುಲಾಮರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ರಾಜ್ಯದ ಆಡಳಿತದಲ್ಲಿ ಶಕ್ತಿಯುತ ಮಂತ್ರಿಗಳು ಯಾರು ಸಹ ಇಲ್ಲ ಎಂದು ಹೇಳಿದರು.

ಯಡಿಯೂರಪ್ಪರವರಿಗೆ ಎದುರಾದರೆ ಅವರಿಗೆ ಉಳಿಗಾಲವಿಲ್ಲ. ಇವರ ಅಧಿಕಾರಕ್ಕೆ ಬಂದಿದ್ದೆ ಗಣಿಗಣಿಗಳಿಂದ ಸ್ವೀಕಾರರವರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು. ರಾಜ್ಯದಲ್ಲಿ ಎಷ್ಟು ಬೇಗ ಚುನಾವಣೆ ಬರುತ್ತೋ ಅಷ್ಟು ಒಳ್ಳೆದು. ನಮ್ಮ ರಾಜ್ಯ ಕನ್ನಡ ರಾಜ್ಯವಾಗಬೇಕು, ಜಾತಿ ರಾಜ್ಯವಲ್ಲ.ರಾಜ್ಯದ ರಾಜಕೀಯ ವ್ಯವಸ್ಥೆ ನನಗೆ ಬೇಸರವನ್ನುಂಟು ಮಾಡಿದೆ. ವಿಧಾನಸೌಧವನ್ನು ಒಂದು ಅಂಗಡಿಯಾಗಿ ಮಾಡಿದ್ದಾರೆ.
ಯಡಿಯೂರಪ್ಪರವರು ಕಂಪನಿ ಆಡಳಿತ ಅದಷ್ಟು ಬೇಗ ಅಂತ್ಯವಾಗಬೇಕು ಎಂದು ವಾಟಾಳ್ ಹೇಳಿದರು.

ಸಿಡಿ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು

ಇದೇ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿ, ಜಾರಕಿಹೊಳಿಯನ್ನ ಬಂದಿಸುತ್ತಾರೋ, ಯಾರನ್ನ ಬಂದಿಸುತ್ತಾರೋ ನಾನು ತಲೆ ಕೆಡಿಸಿಕೊಂಡಿಲ್ಲ. ಸಿಡಿ ಪ್ರಕರಣ ಸಮಗ್ರವಾಗಿ ತನಿಖೆ ಆಗಬೇಕು. ಈಗಿನ ತನಿಖೆಯನ್ನ ಬಹಳ ಜವಬ್ದಾರಿಯಿಂದ ಮಾಡುತ್ತಿದ್ದಾರೆ. ಉನ್ನತ ಮಟ್ಟದ ಸಮಗ್ರ ತನಿಖೆ ಆಗಬೇಕಿದೆ. ಈ ತನಿಖೆಯು ದೇಶಕ್ಕೆ ಇದರ ಪ್ರಭಾವ ಬೀರಿದೆ. ಜಾರಕಿಹೊಳಿಯ ಸಿಡಿ ಎಲ್ಲಿಂದ ಬಂತು ಹೇಗೆ ಬಂತು ಎಂದು ಸಮಗ್ರ ತನಿಖೆ ಆಗಲೆಬೇಕು ಎಂದು ಒತ್ತಾಯಿಸಿದ್ದಾರೆ.

 

Leave a Reply

Your email address will not be published.