ನಿತ್ಯವಾಣಿ, ಚಿತ್ರದುರ್ಗ,( ಏಪ್ರಿಲ್29,2021) : ಕಬ್ಬಿಣ ಮತ್ತು ಸ್ಟೀಲ್‍ನ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ಹೊಸ ಮನ್ವಂತರಕ್ಕಾಗಿ ವೇದಾಂತ ಕಬ್ಬಿಣ ಮತ್ತು ಫೆರೊ ಅಲಾಯ್ಸ್ ವ್ಯವಹಾರದ ಸಿಇಒ ಆಗಿರುವ ಸೌವಿಕ್ ಮಜೂಮ್ದಾರ್ ಅವರನ್ನು ವೇದಾಂತ ಉಕ್ಕು ಮತ್ತು ಸ್ಟೀಲ್ ವಿಭಾಗದ ಸಿಇಒ ಆಗಿ ನೇಮಕಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವೆದಾಂತ ಕಂಪನಿ ನಿರ್ದೇಶಕ ಎನ್‍ಎಲ್ ವಹತ್ತೆ ಅವರನ್ನು ಇಎಸ್‍ಎಲ್ ಸ್ಟೀಲ್‍ನ ಸಿಇಒ ಆಗಿ ಹೊಸ ಹುದ್ದೆಯನ್ನು ನಿರ್ವಹಿಸಲಿದ್ದಾರೆ.
ಸಮೂಹದೊಂದಿಗೆ ಸೌವಿಕ್ ಮಜೂಮ್ದಾರ್ ಕಳೆದ 25 ವರ್ಷಗಳಿಂದ ಇದ್ದಾರೆ.
ಕಬ್ಬಿಣ ಮತ್ತು ಸ್ಟೀಲ್ ಕ್ಷೇತ್ರಗಳಾದ ಗಣಿ, ವಿಸ್ತರಣೆ, ವಿತರಣೆ,
ಕಬ್ಬಿಣ ತಯಾರಿಕೆ ಹಾಗೂ ವ್ಯವಹಾರ ಅಭಿವೃದ್ಧಿಯಂತ ಕ್ಷೇತ್ರಗಳಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಸೆಸಾ ಗೋವಾ ಕಬ್ಬಿಣದ ಅದಿರು ವ್ಯವಹಾರದ ಸಿಇಒ ಆಗಿ 2019ರಲ್ಲಿ ನೇಮಕಗೊಂಡಿದ್ದರು. ಎಫ್‍ಎಸಿಒಆರ್ ಖರೀದಿ ನಂತರ ವೇದಾಂಕ ಕಂಪನಿಯ ಉಕ್ಕು ಮತ್ತು ಫೆರೋ ಅಲಾಯ್ಸ್ ವ್ಯವಹಾರದಲ್ಲಿ ಮುಂದಾಳತ್ವವನ್ನೂ ಸೌವಿಕ್ ಮಜೂಮ್ದಾರ್ ನಿರ್ವಹಿಸಿದ್ದರು.
ಎನ್‍ಎಲ್ ವಹತ್ತೆ ಅವರದ್ದೂ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭ. ಪಿಗ್ ಐರನ್, ಮೆಟಲರ್ಜಿಗಕಲ್ ಕೋಕ್, ಸ್ಟೀಲ್ ಉತ್ಪಾದನೆ ಹಾಗೂ ವೇಸ್ಟ್ ಹೀಟ್ ರಿಕವರಿ ಪವರ್ ಪ್ಲಾಂಟ್ಸ್‍ನಲ್ಲಿ ವಿವಿಧ ಹುದ್ದೆಗಳಲ್ಲಿ ಸಾಕಷ್ಟು ಪರಿಣಿತಿ ಪಡೆದಿರುವ ಅವರು, ಇಎಸ್‍ಎಲ್ ಸ್ಟೀಲ್‍ನ ಮುಖ್ಯಸ್ಥರಾಗಿದ್ದಾರೆ. ಇಎಸ್‍ಎಲ್ ಸ್ಟೀಲ್ ಅನ್ನು ವೇದಾಂತ ಕಂಪೆನಿಯ 2018ರಲ್ಲಿ ಖರೀದಿಸುವ ಮೂಲಕ ಕ್ಷೇತ್ರದಲ್ಲಿ ವೈವೀದ್ಯತೆ ಹೊಂದಿದಂತಾಗಿದೆ.
ಈ ಎರಡು ಉನ್ನತ ಹುದ್ದೆಗಳ ನೇಮಕಗಳ ನಂತರ ಪ್ರತಿಕ್ರಿಯಿಸಿದ ವೇದಾಂತ ಸಮೂಹದ ಸಿಇಒ ಸುನೀಲ್ ದುಗ್ಗಲ್, `ವೇದಾಂತದಲ್ಲಿ ಸಂಸ್ಥೆಯೊಳಗೆಯೇ ನಾಯಕರನ್ನು ಬೆಳೆಸುವ ನಿರಂತರ ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಎರಡು ಪ್ರಮುಖ ಹುದ್ದೆಗಳ ಜವಾಬ್ದಾರಿ ಹೊತ್ತಿರುವ ಸೌವಿಕ್ ಮಜೂಮ್ದಾರ್ ಮತ್ತು ಎನ್‍ಎಲ್ ವಹತ್ತೆ ಅವರಿಗೆ ಶುಭ ಕೋರುತ್ತಿದ್ದೇನೆ. ಅವರ ಅತ್ಯದ್ಭುತ ಅನುಭವಗಳು ನಮ್ಮ ಈ ಉಕ್ಕು ಮತ್ತು ಸ್ಟೀಲ್ ವ್ಯವಹಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಅದರ ಜತೆಯಲ್ಲೇ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಇವರ ಕಾರ್ಯ ನೆರವಾಗಲಿದೆ’ ಎಂದು ಆಶಿಸಿದರು.
ಎನ್‍ಐಟಿ ಸುರತ್ಕಲ್ ಮೈನಿಂಗ್ ಎಂಜಿನೀರ್ ಸೌವಿಕ್ ಮಜೂಮ್ದಾರ್ ಅವರದ್ದು ವೇದಾಂತ ಕಬ್ಬಿಣ ಅದಿರು ವ್ಯವಹಾರದ ಬೆಳವಣಿಗೆಯಲ್ಲಿ ಅತ್ಯಾಧುನಿಕ ತಂತ್ರಗಳನ್ನು ಅಳವಡಿಸಿಕೊಂಡು ಯಶಸ್ವಿ ಮಾರ್ಗದಲ್ಲಿ ಸಾಗಿದವರು. ಹೊಸತನ, ಅತ್ಯದ್ಭುತ ಪರಿಸರ ಸ್ನೇಹಿ ತಂತ್ರಜ್ಞಾನ, ಅಳವಡಿಸಿಕೊಳ್ಳುವುದರಲ್ಲಿ ಪ್ರಮುಖ ಸ್ಥಾನ ವಹಿಸಿದ್ದರು. ಎಫ್‍ಐಎಂಐ ಸದಸ್ಯರಾಗಿರುವ ಮಜೂನ್ದಾರ್ ಅವರು ಗೊವಾ ಖನಿಜ ಅದಿರು ರಫ್ತು ಸಂಘ, ಎಫ್‍ಐಸಿಸಿಐ ಹಾಗೂ ಸಿಐಐ ಹಾಗೂ ಪಿಗ್ ಐರನ್ ಪ್ರೊಡ್ಯೂಸರ್ ಮತ್ತು ಎಫ್‍ಎಸಿಒಆರ್‍ನ ಸದಸ್ಯರೂ ಹೌದು.
ಹೊಸ ಹುದ್ದೆಯನ್ನು ಅಲಂಕರಿಸಿ ಪ್ರತಿಕ್ರಿಯಿಸಿದ ಮಜೂಮ್ದಾರ್, `ವೇದಾಂತ ಉಕ್ಕು ಮತ್ತು ಸ್ಟೀಲ್ ವಿಭಾಗ ಸಿಇಒ ಆಗಿ ನೇಮಕಗೊಂಡಿದಕ್ಕೆ ಸಾಕಷ್ಟು ಸಂತಸ ತಂದಿದೆ. 1994ರಲ್ಲಿ ಮ್ಯಾಮೇಜ್ಮೆಂಟ್ ಟ್ರೈನಿ ಆಗಿ ಸೇರಿದ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಮುಖ್ಯ ಹುದ್ದೆ ನಿಭಾಯಿಸುವ ಕನಸು ಹೊಂದಿದ್ದೆ. ಈವರೆಗಿನ ನನ್ನ ವೃತ್ತಿ ಜೀವನದ ಹಾದಿಯನ್ನು ಗಮನಿಸಿದರೆ ನಾನು ಸಾಕಷ್ಟು ಭಾಗ್ಯವಂತ. ಈ ಸಂದರ್ಭದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿರುವ ವ್ಯವಸ್ಥಾಪಕ ಮಂಡಳಿಗೆ ಆಭಾರಿಯಾಗಿದ್ದಾನೆ’ ಎಂದಿದ್ದಾರೆ.
ಎಲೆಕ್ಟ್ರಿಕಲ್ ಎಂಜಿನಿಯರ್ ಹಾಗೂ ಫೈನಾನ್ಸ್ ವಿಭಾಗದಲ್ಲಿ ಎಂಬಿಎ ಪದವಿ ಹೊಂದಿರುವ ಶ್ರೀ ವಹತ್ತೆ ಅವರು, ವೇದಾಂತ ಸಂಸ್ಥೆಯ ಮೌಲ್ಯಯುತ ವ್ಯವಹಾರದ ಅಭಿವೃದ್ಧಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಿದವರು. `ವೇದಾಮತ ಸಮೂಹದ ಭಾಗವಾಗಿರುವುದು ಮತ್ತು ಇಎಸ್‍ಎಲ್ ಸ್ಟೀಲ್ ಸಂಸ್ಥೆಯ ಮುಖ್ಯಸ್ಥನನ್ನಾಗಿ ನೇಮಕಗೊಂಡಿರುವುದು ದೊರೆತ ಗೌರವ. ಸೆಸಾ ಗೋವಾ ಕಂಪನಿಯಲ್ಲಿ 27 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಬೆನ್ನಿಗಿದೆ. ಇಎಸ್‍ಎಲ್ ಸ್ಟೀಲ್ ಕಂಪೆನಿಯ ಸಿಇಒ ಆಗಿ ನೇಮಕಗೊಂಡಿರುವುದಕ್ಕೆ ವ್ಯವಸ್ಥಾಪಕ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟು ಪ್ರಮುಖ ಜವಾಬ್ದಾರಿಯನ್ನು ಅವರು ನೀಡಿದ್ದಾರೆ. ಈ ಹೊಸ ಹುದ್ದೆ ನಿಭಾಯಿಸಲು ನಾನು ತೀವ್ರವಾಗಿ ಉತ್ಸುಕನಾಗಿದ್ದೇನೆ. ಈ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸುವ ಸಂಪೂರ್ಣ ವಿಶ್ವಾಸ ನನಗಿದೆ’ ಎಂದಿದ್ದಾರೆ.
ಪಿಗ್ ಉಕ್ಕು ಹಾಗೂ ಮಟಲರ್ಜಿಕಲ್ ಕೋಕ್ ಪ್ರೊಡಕ್ಷನ್‍ನಲ್ಲಿ ವಹತ್ತೆ ಅವರು ಹೆಚ್ಚಿನ ಅನುಭವ ಹೊಂದಿದ್ದಾರೆ. ಸೆಸಾ ಗೋವಾ ಕಬ್ಬಿಣ ಅದಿರು ವ್ಯವಹಾರದಲ್ಲಿ ಉತ್ಪನ್ನದ ವೈವಿದ್ಯತೆ ಕ್ಷೇತ್ರದಲ್ಲಿ ಪ್ರಮುಖ ಭೂಮಿಕೆ ನಿಭಾಯಿಸಿದ್ದರು. ಇಎಸ್‍ಎಲ್ ಸ್ಟೀಲ್ ಸಾಮಥ್ರ್ಯವನ್ನು 3.5 ದಶಲಕ್ಷ ಟನ್‍ಗೆ ಹೆಚ್ಚಿಸುವ ವಿಸ್ತರಣೆಯಲ್ಲೂ ಪ್ರಮುಖ ಪಾತರ ವಹಿತ್ತೆ ಅವರದ್ದೇ.