ನಿತ್ಯವಾಣಿ,ಚಿತ್ರದುರ್ಗ,(ಆ.31):: ವೇದಾಂತ ಕಬ್ಬಿಣದ ಅದಿರು ಕರ್ನಾಟಕ (ಐಒಕೆ), ಸಿಎಸ್‍ಆರ್ ಅಭಿಯಾನದ ಅಂಗವಾಗಿ ಪರ್ಯಾಯ ಜೀವನೋಪಾಯ ಅವಕಾಶ ಯೋಜನೆ (ಎಎಲ್‍ಒಪಿ) ಅಡಿಯಲ್ಲಿ ಕರ್ನಾಟಕ ರಾಜ್ಯದ 11 ಗ್ರಾಮಗಳಲ್ಲಿ `ವಾಡಿ’ ಮಾದರಿಯನ್ನು ಪರಿಚಯಿಸುತ್ತಿದೆ. ಈ ಅಭಿಯಾನದ ಅಡಿಯಲ್ಲಿ 1,700 ಆಲ್ಫನ್ಸೊ ಮಾವಿನ ಸಸಿಗಳನ್ನು 40 ರೈತರಿಗೆ ವಿತರಿಸಿದ್ದು, ಇದರಿಂದ 47 ಎಕರೆ ಪ್ರದೇಶವು ಹಣ್ಣಿನ ಬೇಸಾಯಕ್ಕೆ ಒಳಪಡಲಿದ್ದು, ಇದರ ಮೂಲಕ ರೈತರಿಗೆ ಜೀವನೋಪಾಯಕ್ಕೆ ಸುಸ್ಥಿರ ಪರ್ಯಾಯ ಅವಕಾಶ ತೆರೆದುಕೊಳ್ಳಲಿದೆ. ಈ ಯೋಜನೆಯನ್ನು ಸಣ್ಣ ರೈತರು (ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರು) ತಮ್ಮ ಆದಾಯ ವೃದ್ಧಿಗಾಗಿ ಹಣ್ಣಿನ ಬೇಸಾಯವನ್ನು ವಾಣಿಜ್ಯ ಉದ್ದೇಶದಿಂದ ಕೈಗೊಳ್ಳುವ ಸಲುವಾಗಿ ರೂಪಿಸಲಾಗಿದೆ. ಎಲ್‍ಒಪಿ ಯೋಜನೆಯನ್ನು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರ ಮೂಲಕ ರೈತರಿಗೆ ಸುಸ್ಥಿರ ಜೀವನೋಪಾಯ ಅವಕಾಶಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಎನ್‍ಜಿಒ ಭಾರತೀಯ ಕೃಷಿ ಕೈಗಾರಿಕೆ ಪ್ರತಿಷ್ಠಾನ (ಬೈಫ್) ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅಭಿಯಾನದ ಕುರಿತು ಮಾತನಾಡಿದ ಶ್ರೀ ಸೌಮಿಕ್ ಮಜುಮ್ದಾರ್, ಸಿಇಒ– ಐರನ್ ಅಂಡ್ ಸ್ಟೀಲ್ ಸೆಕ್ಟರ್, ವೇದಾಂತ ಲಿಮಿಟೆಡ್ ಅವರು ಹೇಳಿದರು, `ವೇದಾಂತದಲ್ಲಿ ರಚನಾತ್ಮಕ ಸಿಎಸ್‍ಆರ್ ಕಾರ್ಯಕ್ರಮಗಳ ಮೂಲಕ ನಮ್ಮ ಸುತ್ತಮುತ್ತಲಿನ ಸಮುದಾಯಗಳ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿದ್ದೇವೆ. ನಮ್ಮ ಈ ದೊಡ್ಡ ಗುರಿಯು ಆತ್ಮನಿರ್ಭರ ಭಾರತ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿದ್ದು, ಚಿತ್ರದುರ್ಗ ಮತ್ತು ಸುತ್ತಲಿನ ಪ್ರದೇಶದ ಸಮುದಾಯಗಳಿಗೆ ಅನುಕೂಲ ಕಲ್ಪಿಸಲು ಎಎಲ್‍ಒಪಿ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯು ಬಹುದೊಡ್ಡ ಪ್ರಮಾಣದಲ್ಲಿ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದನ್ನು ನೋಡಲು ನನಗೆ ಬಹಳ ಸಂತೋಷವೆನಿಸುತ್ತದೆ’.
ಶ್ರೀ ಪ್ರಸನ್ನ, ಗ್ರಾಮ ಪಂಚಾಯಿತಿ ಸದಸ್ಯರು, ಸಿದ್ದಾಪುರ ಗ್ರಾಮ ಅವರು ಹೇಳಿದರು, `ವೇದಾಂತ ಕಬ್ಬಿಣದ ಅದಿರು ಕರ್ನಾಟಕವು ಕೃಷಿಗೆ ಉತ್ತೇಜನ ನೀಡುವುದರ ಜತೆಗೆ ಸಮುದಾಯಗಳ ಸುಸ್ಥಿರ ಜೀವನೋಪಾಯ ಅವಕಾಶಗಳಿಗೆ ನೆರವು ನೀಡುತ್ತಿರುವುದನ್ನು ಅಭಿನಂದಿಸುತ್ತೇನೆ. ನಮ್ಮ ರೈತರು ಗರಿಷ್ಠ ಪ್ರಮಾಣದಲ್ಲಿ ಈ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ’.
ಶ್ರೀ ಕೃಷ್ಣ ರೆಡ್ಡಿ, ನಿರ್ದೇಶಕರು– ಕಬ್ಬಿಣದ ಅದಿರು ಕರ್ನಾಟಕ, ವೇದಾಂತ ಲಿಮಿಟೆಡ್ ಅವರು ಹೇಳಿದರು, `ವೇದಾಂತ ಕಬ್ಬಿಣ ಅದಿರು ಕರ್ನಾಟಕದಲ್ಲಿ ನಾವು ಸಮುದಾಯಗಳ ಅಭಿವೃದ್ಧಿ ಮತ್ತು ಸುಸ್ಥಿರತೆಯು ನಮ್ಮ ಉದ್ಯಮದ ಒಂದು ಭಾಗವಾಗಿದೆ ಎಂಬುದಾಗಿ ಭಾವಿಸಿಕೊಂಡಿದ್ದೇವೆ. ನಾವು ಎಎಲ್‍ಒಪಿಯಂತಹ ಸಿಎಸ್‍ಆರ್ ಉಪಕ್ರಮಗಳ ಮೂಲಕ ಸಮುದಾಯಗಳ ಸUಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಮತ್ತು ಅವುಗಳನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸುವ ಗುರಿ ಹೊಂದಿದ್ದೇವೆ’.
ಕಬ್ಬಿಣದ ಅದಿರು ಕರ್ನಾಟಕವು ವೇದಾಂತ ಲಿಮಿಟೆಡ್‍ನ ಅಂಗಸಂಸ್ಥೆಯಾಗಿದ್ದು, ಕೋವಿಡ್-19 ಆರೈಕೆ ಅಭಿಯಾನಗಳು ಸೇರಿದಂತೆ ಗರಿಷ್ಠ ಪರಿಣಾಮ ಬೀರುವ ಅಭಿವೃದ್ಧಿ ಯೋಜನೆಗಳ ಮೂಲಕ ಸಮುದಾಯಗಳನ್ನು ಬೆಂಬಲಿಸುತ್ತ ಬಂದಿದೆ. ಇತ್ತೀಚೆಗೆ ಕಂಪನಿಯು ಕೋವಿಡ್ ವಿರುದ್ಧದ ಹೋರಾಟದಲ್ಲಿ ಕರ್ನಾಟಕಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಚಿತ್ರದುರ್ಗ ಮತ್ತು ಹುಬ್ಬಳ್ಳಿಗಳಲ್ಲಿ 200 ಹಾಸಿಗೆಗಳ ವೈದ್ಯಕೀಯ ಮೂಲಸೌಕರ್ಯವನ್ನು ಒದಗಿಸಿದೆ.