ಕೋವಿಡ್ ವಿರುದ್ಧ ಹೋರಾಡಲು ಜಿಲ್ಲಾಡಳಿತವನ್ನು ಬೆಂಬಲಿಸಿದ್ದಕ್ಕಾಗಿ ವೇದಾಂತಕ್ಕೆ ಧನ್ಯವಾದ : ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ, ಚಿತ್ರದುರ್ಗ

ಕೋವಿಡ್ ವಿರುದ್ಧದ ಹೋರಾಟದಲ್ಲಿ ವೇದಾಂತವು ಕರ್ನಾಟಕ ಸರ್ಕಾರಕ್ಕೆ ಬೆಂಬಲ ಮುಂದುವರಿಸುತ್ತದೆ

ನಿತ್ಯವಾಣಿ,ಚಿತ್ರದುರ್ಗ, (ಜೂನ್ 26, 2021) : ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ರಾಜ್ಯ ಆಡಳಿತ ಮತ್ತು ಸಮುದಾಯಗಳನ್ನು ಬೆಂಬಲಿಸಲು ಹಾಗೂ ಸುತ್ತಮುತ್ತಲಿನ ಸಮುದಾಯಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವೇದಾಂತ ಕಬ್ಬಿಣದ ಅದಿರು ಕರ್ನಾಟಕವು ಚಿತ್ರದುರ್ಗ ಜಿಲ್ಲಾ ಆಡಳಿತಕ್ಕೆ 5000 ಎನ್95 ಮಾಸ್ಕ್, 15 ಆಮ್ಲಜನಕ ಸಾಂದ್ರಕ ಮತ್ತು 500 ಪಡಿತರ ಕಿಟ್‍ಗಳನ್ನು ಹಾಗೂ ಚಿತ್ರದುರ್ಗ ಎಸ್ಪಿ ಕಚೇರಿಗೆ 2000 ಆಪ್ಟಿಕಲ್ ಫೇಸ್‍ಶೀಲ್ಡ್‍ಗಳನ್ನು ಹಸ್ತಾಮತರಿಸಿದೆ. ವೇದಾಂತ ಕಬ್ಬಿಣದ ಅದಿರು ಕರ್ನಾಟಕ ಚಿತ್ರದುರ್ಗ ಮತ್ತು ಸುತ್ತಮುತ್ತಲಿನ 20 ಹಳ್ಳಿಗಳಲ್ಲಿ ಫ್ಯೂಮಿಗೇಶನ್ ಅಭಿಯಾನ ಆಯೋಜಿಸಿದೆ. ಎನ್95 ಮಾಸ್ಕ್, ಪಡಿತರ ಕಿಟ್‍ಗಳಳು, ಹಳ್ಳಿಗಳಲ್ಲಿ ಫ್ಯೂಮಿಗೇಷನ್ (ಧೂಮೀಕರಣ) ಮತ್ತು ಆಮ್ಲಜನಕದ ಸಾಂದ್ರಕಗಳ ಪೂರೈಕೆಯಲ್ಲಿ ಬೆಂಬಲವನ್ನು ನೀಡಿದ್ದಕ್ಕಾಗಿ ಚಿತ್ರದುರ್ಗ ಜಿಲ್ಲಾಧಿಕಾರಿಯವರು ಕೋವಿಡ್ ಸಾಂಕ್ರಾಮಿಕದಿಂದ ಉಂಟಾದ ಅಭೂತಪೂರ್ವ ಪರಿಸ್ಥಿತಿಯಲ್ಲಿ ಚಿತ್ರದುರ್ಗ ಮತ್ತು ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡುತ್ತಿದೆ ಎಂದು ವೇದಾಂತವನ್ನು ಶ್ಲಾಘಿಸಿದರು. ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಲು  ಅವಿರತವಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ನೆರವಾಗಲು ಫೇಸ್‍ಶೀಲ್ಡ್‍ಗಳನ್ನು ಒದಗಿಸುವ ಮೂಲಕ ಮುಂಚೂಣಿಯ ಕೋವಿಡ್ ಯೋಧರ ಸುರಕ್ಷತೆಗಾಗಿ ಕೊಡುಗೆ ನೀಡುವ ವೇದಾಂತ ಅವರ ಪ್ರಯತ್ನಗಳನ್ನು ಎಸ್ಪಿ ಚಿತ್ರದುರ್ಗ  ಜಿ ರಾಧಿಕಾ ರವರು ಶ್ಲಾಘಿಸಿದರು.
 ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ, ಚಿತ್ರದುರ್ಗ, ಅವರು ಹೇಳಿದರು ‘’ಕೋವಿಡ್ ವಿರುದ್ಧ ಹೋರಾಡಲು ಜಿಲ್ಲಾಡಳಿತವನ್ನು ಬೆಂಬಲಿಸಿದ್ದಕ್ಕಾಗಿ ನಾನು ವೇದಾಂತಕ್ಕೆ ಧನ್ಯವಾದ ಹೇಳುತ್ತೇನೆ. ಈ ಸವಾಲಿನ ಕಾಲದಲ್ಲಿ ವೇದಾಂತದ ಕೊಡುಗೆ ಜನರಿಗೆ ಸಹಾಯ ಮಾಡುತ್ತದೆ ಮತ್ತು ಕೋವಿಡ್ ಬಿಕ್ಕಟ್ಟಿನಿಂದಾಗಿ ವಿಧಿಸಲಾದ     ನಿರ್ಬಂಧ ಗಳ ಸಮಯದಲ್ಲಿ ಅವರ ಅಗತ್ಯಗಳನ್ನು ಪೂರೈಸುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರ ಸುರಕ್ಷತೆಗಾಗಿ ಬದ್ಧವಾಗಿದೆ ಮತ್ತು ಕೋವಿಡ್ ಸಾಂಕ್ರಾಮಿಕದಿಂದ ಉಂಟಾದ ಈ ಅಭೂತಪೂರ್ವ ಪರಿಸ್ಥಿತಿಯಿಂದ ಪರಿಸ್ಥಿತಿಯಿಂದ ನಾವು ಶೀಘ್ರದಲ್ಲೇ ಹೊರಬರುತ್ತೇವೆ ಎಂದು ನನಗೆ ಖಾತ್ರಿಯಿದೆ.’’
 ಸೌವಿಕ್ ಮಜುಂದಾರ್, ಸಿಇಒ, ಐರನ್ ಮತ್ತು ಸ್ಟೀಲ್ ಬ್ಯುಸಿನೆಸ್, ವೇದಾಂತ ಲಿಮಿಟೆಡ್ ಅವರು ಹೇಳಿದರು, “ ಕೋವಿಡ್-19 ಅನ್ನು ಎದುರಿಸಲು ನಾವು ರಾಜ್ಯ ಆಡಳಿತದೊಂದಿಗೆ ಪಾಲುದಾರರಾಗಲು ಬದ್ಧರಾಗಿದ್ದೇವೆ ಮತ್ತು ನಮ್ಮ ಜಂಟಿ ಪ್ರಯತ್ನಗಳು ನಮ್ಮ ಸಮುದಾಯಗಳನ್ನು ಬೆಂಬಲಿಸುತ್ತದೆ. ಈ ಅಭೂತಪೂರ್ವ ಪರಿಸ್ಥಿತಿಯಲ್ಲಿ ಜನರ ಆರೋಗ್ಯ ಮತ್ತು ಸುರಕ್ಷತೆಗಾಗಿ ಬೆಂಬಲವನ್ನು ವಿಸ್ತರಿಸಲು ನಾವು ಸರ್ಕಾರಿ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುತ್ತಿದ್ದೇವೆ ಮತ್ತು ಈ ಕೋವಿಡ್ ಬಿಕ್ಕಟ್ಟಿನಿಂದ ನಾವು ಅತಿ ಶೀಘ್ರದಲ್ಲೇ ಹೊರಬರುತ್ತೇವೆ ಎಂದು ನನಗೆ ವಿಶ್ವಾಸವಿದೆ.’’
 ಕೃಷ್ಣ ರೆಡ್ಡಿ,ನಿರ್ದೇಶಕರು, ವೇದಾಂತದ ಕಬ್ಬಿಣದ ಅದಿರು ಕರ್ನಾಟಕ, ಅವರು ಹೇಳಿದರು, “ಜವಾಬ್ದಾರಿಯುತ ಕಾಪೆರ್ರೇಟ್ ಆಗಿ ನಮ್ಮ ಸಹವರ್ತಿಗಳು ಮತತು ಸಮುದಾಯಗಳ ಆರೋಗ್ಯ ಮತ್ತು ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ ಎಂದು ನಾವು ನಂಬುತ್ತೇವೆ. ಕೋವಿಡ್ ಸಾಂಕ್ರಾಮಿಕವನ್ನು ನಿವಾರಿಸಿ ವಿವಿಧ ಸಮುದಾಯಗಳ ಉಪಕ್ರಮಗಳಿಗಾಗಿ ನಾವು ಜಿಲ್ಲಾಡಳಿತಗಳೊಂದಿಗೆ ಕೈಜೋಡಿಸುತ್ತಿದ್ದೇವೆ.’’
ಇತ್ತೀಚೆಗೆ ವೇದಾಂತವು ಕ್ರಮವಾಗಿ ಚಿತ್ರದುರ್ಗ ಮತ್ತು ಹುಬ್ಬಳ್ಳಿಗಳಲ್ಲಿ ತಲಾ 100 ಹಾಸಿಗೆ ಸಾಮಥ್ರ್ಯದ ಎರಡು ಕೋವಿಡ್ ಫೀಲ್ಡ್ ಆಸ್ಪತ್ರೆಗಳನ್ನು ಪ್ರಾರಂಭಿಸಿತು. ಇದರೊಂದಿಗೆ ರಾಜ್ಯದ ಕೋವಿಡ್ ರೋಗಿಗಳ ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ಮೂಲಸೌಕರ್ಯಕ್ಕೆ 200 ಹಾಸಿಗೆಗಳನ್ನು ಸೇರಿಸಿತು. ಕಳೆದ ವರ್ಷ ಕೋವಿಡ್ -19 ರ ಮೊದಲ ಅಲೆ ವೇಳೆ ವೇದಾಂತ ಕಬ್ಬಿಣದ ಅದಿರು ಕರ್ನಾಟಕವು ಸಿಎಂ ಪರಿಹಾರ ನಿಧಿಗೆ ಕೊಡುಗೆ ನೀಡುವ ಮೂಲಕ, ಮಾಸ್ಕ್ ಹಾಗೂ ಸ್ಯಾನಿಟೈಜರ್‍ಗಳನ್ನು ಒದಗಿಸುವ ಮೂಲಕ ಮತ್ತು ಲಾಕ್‍ಡೌನ್ ಸಮಯದಲ್ಲಿ ದಿನಸಿ ಸಾಮಗ್ರಿಗಳನ್ನು ಪೂರೈಸುವ ಮೂಲಕ ಕರ್ನಾಟಕದ ಜನರಿಗೆ ಮತ್ತು ಮುಂಚೂಣಿಯ ಯೋಧರಿಗೆ ನಿರಂತರ ಬೆಂಬಲವನ್ನು ನೀಡಿತು.
ಸಾಂಕ್ರಾಮಿಕ ರೋಗದ ಎರಡನೇ ಹಂತದಲ್ಲಿ, ವೇದಾಂತ ತನ್ನ ಸಿಎಸ್‍ಆರ್ ಉಪಕ್ರಮಗಳನ್ನು 516 ಹಳ್ಳಿಗಳಲ್ಲಿ ವಿಸ್ತರಿಸಿದೆ, ಇದರಿಂದಾಗಿ ದೇಶಾದ್ಯಂತ ಸುಮಾರು 4.5 ಲಕ್ಷ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದರು

 

Leave a Reply

Your email address will not be published.