ನಿತ್ಯವಾಣಿ,ಚಿತ್ರದುರ್ಗ,( ಜೂ. 18) : ಕೋಟೆ ನಾಡು ಚಿತ್ರದುರ್ಗ ಎಂದು ಹೇಳಿದ ತಕ್ಷಣ ನೆನಪಾಗುವುದು ಚುನಾವಣಾ ಚಾಣಕ್ಯ ಎಂದೇ ಪ್ರಸಿದ್ದಿಯಾಗಿರುವ ಹಿರಿಯ ಸರಳ ಸಜ್ಜನಿಕೆಯ ನಾಯಕರು ಹಿಂದುಳಿದ ವರ್ಗಗಳ ನಾಯಕ ಎಂದು ಜಿಲ್ಲೆಯಲ್ಲಿ ಹಿಡಿತ ಹೊಂದಿರುವ ಜನಪ್ರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ಈ ಬಾರಿ ಮಂತ್ರಿಗಿರಿ ಪಕ್ಕ ಎಂದು ಜಿಲ್ಲೆಯಾದ್ಯಂತ ಸುದ್ದಿ ಸಖತ್ ವೈರಲ್ ಆಗಿದೆ.
ಹೌದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ರಾಜಕೀಯ ಮೇಲಾಟದಲ್ಲಿ ಅನೇಕ ಬಾರಿ ಸಚಿವ ಸ್ಥಾನ ಕೈ ತಪ್ಪಿದೆ. ಜಿಲ್ಲೆಯಲ್ಲಿ 6 ಬಾರಿ ಶಾಸಕರಾಗಿರುವ ಏಕೈಕ ಶಾಸಕರಾಗಿದ್ದಾರೆ. ಚಿತ್ರದುರ್ಗ ಅಷ್ಟೆ ಅಲ್ಲದೆ ಅಕ್ಕ- ಪಕ್ಕದ ಕ್ಷೇತ್ರದಲ್ಲಿ ತುಂಬಾ ಅಭಿಮಾನಿಳನ್ನು ಹೊಂದಿದ್ದಾರೆ.
ಕಳೆದ ಬಾರಿ ಜಿಲ್ಲೆಯಲ್ಲಿ ಏಕೈಕ ಶಾಸಕರಾಗಿ ಪಕ್ಷವನ್ನು ಸಂಘಟನೆ ಬಲಪಡಿಸಿದ್ದರು. ವಿರೋಧ ಪಕ್ಷದಲ್ಲಿ ಇದ್ದರ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಿ ಸೈ ಎನಿಸಿಕೊಂಡರು. ಆದರೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ರಾಜ್ಯದಲ್ಲಿ 104 ಸ್ಥಾನ ಬಂದಿತು. ಆದರೆ ಅಂದ ಬಿಜೆಪಿ ಪಕ್ಷಕ್ಕೆ ಪೂರ್ಣ ಬಹುಮತ ಬಂದಿದ್ದರೆ ಅಂದೇ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಮಂತ್ರಿ ಪದವಿ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇರುತ್ತಿದ್ದರು. ರಾಜಕೀಯ ಚದುರಂಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ತುಂಬಾ ದಿನಗಳ ಕಾಲ ಸರ್ಕಾರ ಉಳಿಯದೆ ಪತನವಾಯಿತು. ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ವಲಸೆ ಹೋಗಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬಿಜೆಪಿ ಸರ್ಕಾರ ರಚನೆಯ ಸಂದರ್ಭದಲ್ಲಿ ಬಿಜೆಪಿ ಸರ್ಕಾದಲ್ಲಿ ಹಿರಿಯರು ಆಗಿರುವ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಮಂತ್ರಿ ಭಾಗ್ಯ ಫಿಕ್ಸ್ ಎಂದು ಎಲ್ಲಾ ಆಲೋಚನೆ ಮಾಡಿದ್ದರು. ಆದರೆ ವಲಸೆ ಶಾಸಕರನ್ನು ಮಂತ್ರಿ ಮಾಡಬೇಕು.17 ಸ್ಥಾನ ಮೀಸಲಿಡಬೇಕು ಎಂದು ಹಲವು ಶಾಸಕರು ಮಂತ್ರಿಸ್ಥಾನದಿಂದ ವಂಚಿತರಾದವರಲ್ಲಿ ಶಾಸಕ ತಿಪ್ಪಾರೆಡ್ಡಿ ಕೂಡ ಒಬ್ಬರು. ಅಂತಹ ಬೆಳವಣಿಗೆ , ಕೋವಿಡ್ ಎರಡನೇ ಅಲೆಯ ನಂತರ ರಾಜ್ಯದಲ್ಲಿ ಭಿನ್ನಮತ, ನಾಯಕತ್ವ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಹಾಗೂ ವಿಸ್ತರಣೆಯ ಕೂಗು ಕೋವಿಡ್ ಗಿಂತ ಜೋರಾಗಿ ಕೇಳುತ್ತಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ.
ಈ ಬಾರಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಲ್ಲಿ ಹಿಂದುಳಿದ ವರ್ಗಗಳ ಮತ್ತು ಜನಪ್ರಿಯ, ಹಿರಿಯ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ಈ ಬಾರಿ ಮಂತ್ರಿಗಿರಿ ಪಕ್ಕ ಆಗಿದೆ. ಜಿಲ್ಲೆಗೆ ನ್ಯಾಯ ನೀಡುತ್ತದೆ ಬಿಜೆಪಿ ಸರ್ಕಾರ ಎಂದ ಎಲ್ಲಾ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾವಿಸಿದ್ದಾರೆ. ಏಕೆಂದರೆ ಶ್ರೀರಾಮುಲು ಅವರಿಗೆ ಕೂಡ ರಾಜಕೀಯ ಕರ್ಮಭೂಮಿ ಬಳ್ಳಾರಿ ಉಸ್ತುವಾರಿ ಬೇಕೆಂದು ಅನೇಕ ದಿನಗಳ ಬೇಡಿಕೆಯಗಿದೆ. ಇದನ್ನು ಸರ್ಕಾರ ಪುರಸ್ಕರಿಸಿ ತಿಪ್ಪಾರೆಡ್ಡಿ ಅವರಿಗೆ ಮಂತ್ರಿ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅನೇಕರಿಗೆ ಸಚಿವ ಸಂಪುಟದಿಂದ ಕೊಕ್ ನೀಡಿ ಹಿರಿಯರು ಅನುಭವಿಗಳಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಮತ್ತು ಭಿನ್ನಮತ ತಣಿಸಲು ಕಳೆದೆರಡು ದಿನಗಳಿಂದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯದಲ್ಲಿ ಬೀಡುಬಿಟ್ಟಿದ್ದು ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡಲೆಂದು ಬಂದಿದ್ದಾರೆ. ಎಲ್ಲಾ ಸಚಿವ ಸ್ಥಾನದ ಆಕಾಂಕ್ಷಿಗಳು , ಭಿನ್ನಮತೀಯ ಶಾಸಕರು ಕೂಡ ರಾಜ್ಯ ಉಸ್ತುವಾರಿ ಅವರಿಗೆ ರಾಜ್ಯದ ಎಲ್ಲಾ ಬೆಳವಣಿಗೆ ಬಗ್ಗೆ ಮನವರಿಕೆ ಮಾಡಿದ್ದಾರೆ. ಇದರಿಂದ ಕೋಟೆ ನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಿ ಜಿಲ್ಲೆಯ ಸಮಸ್ಯೆಗಳಿಗೆ ಜೀವ ನೀಡಿ ಬಗೆಹರಿಸಲು ಮನಸ್ಸು ಮಾಡುತ್ತ ಬಿಜೆಪಿ ಎಂದು ಸ್ವಲ್ಪ ದಿನಗಳ ಬೆಳವಣಿಗೆಯನ್ನು ಕಾದು ನೋಡಲೇಬೇಕಿದೆ.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com