ಬೆಂಗಳೂರು: ನಾನು ಅಶ್ಲೀಲ ಚಿತ್ರ ವೀಕ್ಷಿಸುತ್ತಿರಲಿಲ್ಲ.. ಏನೇನೋ ಬಿಂಬಿಸಬೇಡಿ ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಹೇಳಿದ್ದಾರೆ.
ಹಲವು ವರ್ಷಗಳ ಹಿಂದೆ ಕರ್ನಾಟಕ ರಾಜಕೀಯ ದೇಶಾದ್ಯಂತ ಸುದ್ದಿಗೆ ಗ್ರಾಸವಾಗುವಂತೆ ಮಾಡಿದ್ದ ವಿಧಾನಸಭೆಯಲ್ಲಿ ಬ್ಲೂ ಫಿಲಂ ವೀಕ್ಷಣೆ ಪ್ರಕರಣಕ್ಕೆ ಮತ್ತೆ ಮರುಕಳಿಸಿದ್ದು, ಈ ಬಾರಿ ಕಾಂಗ್ರೆಸ್ ಎಂಎಲ್ ಸಿ ಪ್ರಕಾಶ್ ರಾಥೋಡ್ ಅವರು ವಿಧಾನ ಪರಿಷತ್ ನಲ್ಲಿ ಬ್ಲೂಫಿಲಂ ವೀಕ್ಷಣೆ ಮಾಡುತ್ತಿದ್ದ ಆರೋಪ ಎದುರಿಸಿದ್ದಾರೆ.ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸದನದಲ್ಲಿ ಬ್ಲೂ ಫಿಲಂ ವೀಕ್ಷಣೆ ಮಾಡುತ್ತಿದ್ದರು ಎಂದು ವರದಿಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಥೋಡ್ ಅವರು, ‘ಕಲಾಪದ ವೇಳೆ ನಾನು ನನ್ನ ಮೊಬೈಲ್ನ ಗ್ಯಾಲರಿಯಲ್ಲಿದ್ದ ಫೋಟೋಗಳನ್ನು ನೋಡುತ್ತಾ ಕುಳಿತಿದ್ದೆ.. ಮುಂದೆ ನನ್ನದೇ ಪ್ರಶ್ನೆ ಕೇಳುವುದಿತ್ತು, ಅದಕ್ಕಾಗಿ ಮಾಹಿತಿ ಹುಡುಕುತ್ತಿದ್ದೆ. ಹಾಗೆ ಡಾಕ್ಯುಮೆಂಟ್ ಹುಡುಕುವಾಗ ಹೆಚ್ಚಾದ ಪೋಟೋಗಳನ್ನು ಡಿಲೀಟ್ ಮಾಡುತ್ತಿದ್ದೆ. ಆದರೆ ಅದನ್ನೇ ಮಾಧ್ಯಮಗಳಲ್ಲಿ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಅಂಥಾ ಫೋಟೋ ನಾನು ನೋಡೋದೂ ಇಲ್ಲ, ಅಂಥಾ ಫೊಟೊ ನನ್ನ ಬಳಿ ಇಲ್ಲವೂ ಇಲ್ಲ. ದಯಮಾಡಿ ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.