ಖೇಲ್ ರತ್ನ ಪ್ರಶಸ್ತಿ ಪುರಸ್ಕೃತೆ, ಕುಸ್ತಿ ಪಟು ವಿನೇಶ್​ ಪೋಗಟ್​ಗೆ ಕರೊನಾ

ನವದೆಹಲಿ:- ಭಾರತದ ಅಗ್ರಮಾನ್ಯ ರೆಸ್ಲರ್​ ವಿನೇಶ್​ ಪೋಗಟ್​ ಅವರಿಗೆ ಕೋವಿಡ್​-19 ಸೋಂಕು ಕಾಣಿಸಿಕೊಂಡಿದೆ. ಪ್ರಸಕ್ತ ವರ್ಷದ ಖೇಲ್​ರತ್ನ ಪುರಸ್ಕಾರಕ್ಕೆ ಭಾಜನರಾಗಿದ್ದರು. ಏಷ್ಯಾಡ್​ ಹಾಗೂ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ವಿಜೇತರಾಗಿರುವ ವಿನೇಶ್​ ಪೋಗಟ್​, ಹರಿಯಾಣದ ಸೋನೆಪತ್​ ಜಿಲ್ಲೆಯಲ್ಲಿರುವ ಸ್ವಗ್ರಾಮದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಇದೀಗ ಶನಿವಾರ ನಡೆಯಲಿರುವ ವರ್ಚುವಲ್​ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಿಂದ ಉಳಿಯಲಿದ್ದಾರೆ.

Leave a Reply

Your email address will not be published.