ನಿತ್ಯವಾಣಿ ದಿನಪತ್ರಿಕೆ ಸಂಪಾದಕರಾದ ಎಸ್.ಟಿ. ನವೀನ್‍ಕುಮಾರ್ ಘಠಸ್ಥಳ ಧ್ವಜಾರೋಹಣ ನೆರವೇರಿಸಿ , ಬಸವಾದಿ ಶರಣರ ವಚನ ಸಾಹಿತ್ಯ, ಶರಣರ ತತ್ವಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ಸಾಗಿಸಬೇಕು. ಶರಣರ ಲಾಂಚನವನ್ನು ನಾವು ಗೌರವಿಸುವ ಮೂಲಕ ಲಿಂಗಾಯತ ಧರ್ಮ ರಕ್ಷಿಸಬೇಕು ಶರಣರ ಪರಂಪರೆಯನ್ನು ಇಂಥಹ ಕಾರ್ಯಕ್ರಮದ ಮೂಲಕ ಬಿತ್ತರಿಸಬೇಕೆಂದು ನುಡಿದರು.
ದುರ್ಗದ ಕೂಗು ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಗೊಂಡಬಾಳ್ ಬಸವರಾಜ್ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಗುಚ್ಚ ಅರ್ಪಿಸಿ ಮಾತನಾಡುತ್ತಾ, ವಿಶ್ವಗುರು ಬಸವಣ್ಣನವರು ನೀಡಿದ ಇಷ್ಟಲಿಂಗದ ಆಚರಣೆಗೆ ಪ್ರತಿಯೊಬ್ಬರೂ ಬದ್ದರಾಗಬೇಕು ಸಮಸ್ಯೆಗಳು ಕಷ್ಟಗಳೇನೇ ಇರಲಿ ಇಷ್ಟಲಿಂಗ ಆಚರಣೆ ಮೂಲಕ ನಾವು ಮನಶಾಂತಿ ತಂದುಕೊಳ್ಳಬೇಕು ಈ ಮೂಲಕ ಮಾನಸಿಕ ಒತ್ತಡಗಳನ್ನು ನಿಯಂತ್ರಿಸಿಕೊಳ್ಳಬೇಕೆಂದು ತಿಳಿಸಿದರು.
ಶಿವಶರಣೆ ಈರಮ್ಮ ನಾಗರಾಜ್, ವನಜಾ, ಮನೋಹರ ಪ್ರಾರ್ಥನೆ ಮೂಲಕ ಶರಣರನ್ನು ಸ್ಮರಿಸಿದರು. ಶರಣ ಕಲ್ಮೇಶ್ ಲಿಂಗಾಯತ, ಜಿಲ್ಲಾ ಲಿಂಗಾಯಿತಿ ಧವರ್i ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು. ಶರಣೆ ಸುಧಾ ಶಿವಾನಂದ ಪ್ರಾಸ್ತಾವಿಕ ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವಘಟಕದ ಅಧ್ಯಕ್ಷ ಆರ್.ಶ್ರೀನಿವಾಸ್, ಶರಣ ಸಮರ್ಪಣೆಯನ್ನು ಬಸವಮಂಪಟದ ಪ್ರಧಾನ ಕಾರ್ಯದರ್ಶಿ ರಾಜಣ್ಣ ನೆರವೇರಿಸಿದರು, ಜನ ಸಾಗರ ದಿನಪತಿÀ್ರಕೆ ಸಹಸಂಪಾದಕ ಅಗಜನನ ಸೇರಿದಂತೆ ಶರಣ ಶರಣೆಯರು ಉಪಸ್ಥಿತರಿದ್ದರು.