DONT CARE… ರಸ್ತೆಯಲ್ಲೇ ಎಣ್ಣೆ ಪಾರ್ಟಿ

ಹಾಡ ಹಗಲಲ್ಲೆ ರಸ್ತೆ ಮಧ್ಯೆ ಎಣ್ಣೆ ಪಾರ್ಟಿಚಿತ್ರದುರ್ಗ: ಆಡಹಗಲಲ್ಲೇ ಬಸ್ ನಿಲ್ದಾಣದ ಮುಂಭಾಗ ರಸ್ತೆಯಲ್ಲೇ ಕುಳಿತು ಕುಡುಕ ಮಹಾಶಯರು ಮದ್ಯ ಸೇವನೆ ಮಾಡುತ್ತಿರುವ ಪೋಟೊ  ವೈರಲ್ ಆಗಿದೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲೇ ಈ ಘಟನೆ ನಡೆದಿದ್ದು, ಸಮೀಪದಲ್ಲೇ ತಾಲೂಕು ಕಚೇರಿ, ತಾಲೂಕು ಪಂಚಾಯ್ತಿ ಕಚೇರಿ, ಬಿಇಒ ಕಚೇರಿಗಳಿವೆ. ಆದರೂ ಕುಡುಕರು ಮಾತ್ರ ಯಾರ ಭಯವೂ ಇಲ್ಲದೇ ಜನನಿಬಿಡ ಸ್ಥಳದಲ್ಲಿ ಕುಳಿತು‌ ಮದ್ಯಪಾನ ಮಾಡುತ್ತಿರುವುದನ್ನು ಸ್ಥಳೀಯರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪ್ರತಿನಿಧಿಸುವ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು, ಈ ಪೋಟೊ ಅದಕ್ಕೆ ಸಾಕ್ಷಿ ಎಂಬಂತಿದೆ.

Leave a Reply

Your email address will not be published.